![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 19, 2021, 6:40 AM IST
ಹೊಸದಿಲ್ಲಿ: “ಹೈಪ್ರೊಫೈಲ್ ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ಕರೆತರಲು ನಮ್ಮ ಸರಕಾರವು ರಾಜತಾಂತ್ರಿಕವಾಗಿ ಸೇರಿದಂತೆ ಸಾಧ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಪ್ರಯತ್ನ ನಡೆಸುತ್ತಿದೆ. ಅವರಿಗೀಗ ಭಾರತಕ್ಕೆ ವಾಪಸಾಗದೇ ಅನ್ಯ ದಾರಿಯಿಲ್ಲ. ಆರ್ಥಿಕ ಅಪರಾಧಿಗಳೇ, ದೇಶಕ್ಕೆ ವಾಪಸ್ ಬನ್ನಿ…’
ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚಿಸಿ, ಬೇರೆ ದೇಶಗಳಿಗೆ ಪರಾರಿಯಾಗಿರುವ ವಿಜಯ್ ಮಲ್ಯ, ನೀರವ್ ಮೋದಿಯಂಥ ಆರ್ಥಿಕ ಅಪರಾಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಖಡಕ್ ಎಚ್ಚರಿಕೆಯಿದು.
ಗುರುವಾರ ಸಾಲದ ಹರಿವು ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮೋದಿ, “ದೇಶಭ್ರಷ್ಟ ಅಪರಾಧಿಗಳನ್ನು ವಾಪಸ್ ಕರೆತರಲು ನಾವು ನಮ್ಮ ನೀತಿನಿಬಂಧನೆಗಳು ಹಾಗೂ ಕಾನೂನನ್ನು ಮಾತ್ರವಲ್ಲದೇ, ರಾಜತಾಂತ್ರಿಕ ಮಾರ್ಗಗಳನ್ನೂ ಬಳಸಿಕೊಂಡಿದ್ದೇವೆ. ನಮ್ಮ ಸಂದೇಶ ಸ್ಪಷ್ಟವಾಗಿದೆ- ದೇಶಕ್ಕೆ ವಾಪಸ್ ಬನ್ನಿ’ ಎಂದಿದ್ದಾರೆ.
ಬ್ಯಾಲೆನ್ಸ್ ಶೀಟ್ ಸುಧಾರಿಸಿ: ಇದೇ ವೇಳೆ, 2014ರ ಬಳಿಕ ನಮ್ಮ ಸರಕಾರವು ದೇಶದ ಎಲ್ಲ ಬ್ಯಾಂಕ್‌ಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಪರಿಹಾರ ಮಾಡುವ ದಾರಿ ಕಂಡುಕೊಂಡಿದೆ. ಹೀಗಾಗಿ ಈಗ ಬ್ಯಾಂಕ್‌ಗಳ ಆರ್ಥಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿದೆ. ಈಗ ಸಂಪತ್ತು ಮತ್ತು ಉದ್ಯೋಗ ಸೃಷ್ಟಿ ಮಾಡುವವರಿಗೆ ಹೆಚ್ಚಿನ ಬೆಂಬಲ ನೀಡುವ ಸಮಯ. ಬ್ಯಾಂಕ್‌ಗಳು ಈ ಕೆಲಸವನ್ನು ಆಸಕ್ತಿಯಿಂದ ಮಾಡುವ ಮೂಲಕ ದೇಶದ ಬ್ಯಾಲೆನ್ಸ್ ಶೀಟ್ ಅನ್ನು ಸುಧಾರಿಸಬೇಕು. ನೀವು “ಮಂಜೂರು ಮಾಡುವವರು’, ಗ್ರಾಹಕರು “ಅರ್ಜಿ ಹಾಕುವವರು ಎಂಬ ಸಂಸ್ಕೃತಿಯನ್ನು ಬಿಟ್ಟು, ಪಾಲುದಾರಿಕೆಯ ಮಾದರಿಯನ್ನು ಅನುಸರಿಸಬೇಕು ಎಂದು ಬ್ಯಾಂಕ್‌ಗಳಿಗೆ ಮೋದಿ ಸಲಹೆ ನೀಡಿದ್ದಾರೆ.
ಕ್ರಿಪ್ಟೋ ದುರುಪಯೋಗಬಾರದು :
ಕ್ರಿಪ್ಟೋ ಕರೆನ್ಸಿ ಯುವಕರನ್ನು ಹಾಳುಮಾಡುತ್ತಿದೆ. ದುರುಪಯೋಗ ಮಾಡುವವರ ಕೈಗೆ ಕ್ರಿಪ್ಟೋ ಸಿಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ ಗುರುವಾರ ಆಯೋಜಿಸಿದ್ದ “ಸಿಡ್ನಿ ಡಯಲಾಗ್’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಪ್ರಜಾಸತ್ತಾತ್ಮಕ ರಾಷ್ಟ್ರಗಳು ಒಟ್ಟು ಸೇರಿ ಕ್ರಿಪ್ಟೋ ಕರೆನ್ಸಿ ದುರುಪಯೋಗವಾಗದಂತೆ ತಡೆಯಬೇಕಾಗಿದೆ ಎಂದಿದ್ದಾರೆ. ನ.29ರಂದು ಶುರುವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋ ಕರೆನ್ಸಿ ವಹಿವಾಟು ನಿಯಂತ್ರಿಸುವ ಬಗ್ಗೆ ಮಸೂದೆ ಮಂಡಿಸಲಿರು ವಂತೆಯೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
ತಂತ್ರಜ್ಞಾನ ಮತ್ತು ಡೇಟಾ (ಮಾಹಿತಿ) ಇತ್ತೀಚಿನ ವರ್ಷಗಳಲ್ಲಿ ಹೊಸ ಆಯುಧಗಳಾಗಿ ಪರಿವರ್ತನೆಯಾಗಿವೆ. ಅವುಗಳನ್ನು ಸಹಕಾರಕ್ಕೆ ಬಳಸಬೇಕೋ, ಸಂಘರ್ಷಕ್ಕೆ ಬಳಸಬೇಕೋ ಜಗಳ ಮತ್ತು ಬಲವಂತಕ್ಕೆ ಬಳಕೆ ಮಾಡಬೇಕೋ ಎಂಬ ವಿಚಾರ ಆಯಾಯ ದೇಶಗಳು ಮಾಡುವ ಆಯ್ಕೆಯನ್ನು ಅವಲಂಬಿಸಿದೆ ಎಂದೂ ಮೋದಿ ಹೇಳಿದ್ದಾರೆ. ಪ್ರಜಾಸತ್ತಾತ್ಮಕ ದೇಶಗಳು ಭವಿಷ್ಯದ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆ ಮಾಡಬೇಕು, ನಂಬಿಕರ್ಹ ಉತ್ಪಾದನ ಮತ್ತು ಪೂರೈಕೆ ವ್ಯವಸ್ಥೆ ಸೃಷ್ಟಿಸಬೇಕು, ಸಾರ್ವಜನಿಕ ಅಭಿಪ್ರಾಯಗಳ ತಿರುಚುವಿಕೆಗೆ ಕಡಿವಾಣ ಹಾಕಲು ಶ್ರಮಿಸಬೇಕು ಎಂದೂ ಪ್ರಧಾನಿ ಹೇಳಿದ್ದಾರೆ. ಭಾರತದ ವಿರುದ್ಧ ಚೀನ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡುವತ್ತ ದೃಷ್ಟಿಹರಿಸಿರುವ ಹಿನ್ನೆಲೆಯಲ್ಲಿ ಈ ಮಾತುಗಳು ಮಹತ್ವ ಪಡೆದಿವೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.