ಭಾರತೀಯ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ: ಶಿಕ್ಷಣ ತಜ್ಞ ಚ.ಮೂ.ಕೃಷ್ಣಶಾಸ್ತ್ರಿ ಅಧ್ಯಕ್ಷ
Team Udayavani, Nov 19, 2021, 6:16 AM IST
ಉಡುಪಿ: ಶಿಕ್ಷಣ ನೀತಿಯಲ್ಲಿ 2040ರ ಲಕ್ಷ್ಯವನ್ನಿಟ್ಟುಕೊಂಡು ಭಾರತೀಯ ಭಾಷೆಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಉನ್ನತಾಧಿಕಾರಿಗಳ ಸಮಿತಿ ರಚಿಸಿದ್ದು, ಬಂಟ್ವಾಳ ಮೂಲದ ಪದ್ಮಶ್ರೀ ಪ್ರಶಸಿŒ ಪುರಸ್ಕೃತ ಶಿಕ್ಷಣ ತಜ್ಞ ಚ.ಮೂ. ಕೃಷ್ಣಶಾಸ್ತ್ರಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಭಾರತೀಯ ಭಾಷೆಗಳ ಸಂವರ್ಧನೆ, ನೂತನ ಶಿಕ್ಷಣ ನೀತಿ ಯಲ್ಲಿ ಭಾರತೀಯ ಭಾಷೆಗಳ ವಿಕಾಸ, ಮಕ್ಕಳಲ್ಲಿ ಭಾಷಾಭಿಮಾನ, ಕ್ರಿಯಾತ್ಮಕ ಭಾಷಾ ಸಂಸ್ಥಾನ ಸಚೇತನ ಸಹಿತ ಭಾರತೀಯ ಭಾಷೆಗಳನ್ನು ಮುಂದುವರಿಸುವ ಉದ್ದೇಶ ಈ ಸಮಿತಿಯದು.
ಸಮಿತಿಯಲ್ಲಿ 4 ಮಂದಿ :
ಸಮಿತಿಗೆ ಈಗಾಗಲೇ ನಾಲ್ವರು ಶಿಕ್ಷಣ ತಜ್ಞರನ್ನು ಕೇಂದ್ರ ನೇಮಕ ಮಾಡಿದೆ. ಒಟ್ಟು 9 ಸದಸ್ಯರ ವರೆಗೆ ವಿಸ್ತರಿಸಬಹುದಾಗಿದ್ದು, ಇನ್ನೂ ಐವರ ನೇಮಕ ಸದ್ಯದಲ್ಲಿಯೇ ಆಗುವ ಅಥವಾ ಈಗಿರುವ ಸದಸ್ಯರೇ ಮುಂದುವರಿಯುವ ಸಾಧ್ಯತೆಗಳಿವೆ.
ದೇಶದಲ್ಲಿ 1,500 ಭಾಷೆಗಳು:
ದೇಶದಲ್ಲಿ 1,500 ಆಡುಭಾಷೆ ಗಳಿವೆ. ಕೇಂದ್ರ ಸರಕಾರದ ರಾಜಭಾಷೆ ಇಂಗ್ಲಿಷ್ ಮತ್ತು ಹಿಂದಿ. ರಾಜ್ಯಗಳ ಭಾಷೆಗಳಾಗಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ 22 ಭಾಷೆಗಳ ಉಲ್ಲೇಖವಿದೆ. ಹಿಂದಿ ಇದರಲ್ಲೂ ಇದೆ, ಕೇಂದ್ರ ಸರಕಾರದ ರಾಜ ಭಾಷೆಯಲ್ಲಿಯೂ ಇದೆ. ಇದನ್ನು ಸೇರ್ಪಡೆ ಮಾಡಿ
ದಾಗ 23 ಭಾಷೆಗಳಾಗುತ್ತವೆ. ಆ ಮೂಲಕ ಹಿಂದಿ ರಾಜ ಭಾಷೆಯಾಗಿದೆ. ಅದಲ್ಲದೆ ಪ್ರಾಚೀನ ಭಾಷೆಗಳ ವಿಭಾಗದಲ್ಲಿ ಕೃಪಾಲಿ, ಪ್ರಾಕೃತ, ಅರೆಬಿಕ್ ಇವೆ. ಪ್ರಾಚೀನ ಭಾಷೆಗಳಾಗಿ ಕನ್ನಡ, ಮರಾಠಿ, ತಮಿಳು, ತೆಲುಗು ಇತ್ಯಾದಿ ಇವೆ. ತುಳು, ಮೈಥಿಲಿ, ಭೋಜ್‌ಪುರಿ ಎಂಟನೇ ಪರಿಚ್ಛೇದದಲ್ಲಿ ಇಲ್ಲದಿದ್ದರೂ ಪ್ರಮುಖ ಭಾಷೆಗಳಾಗಿವೆ. ಅಪಾಯ ದಂಚಿನಲ್ಲಿ 70-80 ಭಾಷೆಗಳಿವೆ.
ಸಲಹೆ, ಮಾರ್ಗದರ್ಶನ:
ನೂತನ ರಾಷ್ಟ್ರೀಯ ಶಿಕ್ಷಣ ನೀತಿ, ಭಾಷೆಗಳ ಅಭಿವೃದ್ಧಿ, ಭಾರತೀಯ ಭಾಷೆಗಳ ವಿಕಾಸನಕ್ಕೆ ತಂತ್ರಜ್ಞಾನಗಳ ಉಪಯೋಗ, ತಂತ್ರಜ್ಞಾನ ಉಪ ಯೋಗಿಸಿ ಭಾಷೆ ಕಲಿಯುವ ಬಗ್ಗೆ ಪ್ರಚುರಪಡಿಸುವುದು. ಕಾರ್ಯಾ ಗಾರಗಳ ಆಯೋಜನೆ, ಭಾರತೀಯ ಭಾಷೆಗಳ ವಿಕಾಸನಕ್ಕೆ ತಂತ್ರಜ್ಞಾನ ಬಳಕೆ ಮಾಡುವ ಬಗ್ಗೆ ಈ ಸಮಿತಿ ಆಯಾ ಭಾಷೆಗಳ ಪರಿಣತರು, ಶಿಕ್ಷಣ ಸಂಸ್ಥೆಗಳ ಪ್ರಮುಖರಿಂದ ಮಾಹಿತಿ ಪಡೆದು ಈ ಸಮಿತಿ ಸರಕಾರಕ್ಕೆ
ವರದಿ ಸಲ್ಲಿಸಲಿದೆ.
ತಂತ್ರಜ್ಞಾನದ ಉಪಯೋಗ:
ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಮೂಲಕ ಇಂಗ್ಲಿಷ್ ಮುನ್ನೆಲೆಗೆ ಬಂತು. ಡಿಜಿಟಲ್‌ನಲ್ಲಿ ಭಾರತೀಯ ಭಾಷೆಗಳು ಸಮಾನವಾಗಿ ಮುಂದೆ ಬರಬೇಕು. ಭಾರತೀಯ ಭಾಷೆಗಳಲ್ಲಿ ಉಚ್ಚ ಶಿಕ್ಷಣ, ವ್ಯಾವಸಾಯಿಕ ಶಿಕ್ಷಣ ಆಂಗ್ಲ ಮಾಧ್ಯಮದಲ್ಲಿದೆ. ದೇಶೀಯ ಮಾಧ್ಯಮದಲ್ಲಿಯೂ ಆಗಬೇಕು. ಇದಕ್ಕಾಗಿ ತರಬೇತಿ, ಗ್ರಂಥಗಳು ಅಗತ್ಯ. ಭಾರತೀಯ ಭಾಷೆಗಳ ಮೂಲಕ ಉಚ್ಚ ಶಿಕ್ಷಣ, ಕೌಶಲ ಅಭಿವೃದ್ಧಿ ಶಿಕ್ಷಣ ಸಿಗಬೇಕು. ಅಂತಹ ವಾತಾವರಣ ನಿರ್ಮಾಣವಾಗಬೇಕು. ಭಾರತೀಯ ಭಾಷೆಗಳ ವಿಕಾಸನಕ್ಕೆ ತಂತ್ರಜ್ಞಾನಗಳ ಉಪಯೋಗ ಆಗಬೇಕು. ತಂತ್ರಜ್ಞಾನ ಉಪಯೋಗಿಸಿ ಭಾಷೆ ಕಲಿಯುವ ಬಗ್ಗೆ ಪ್ರಚುರಪಡಿಸುವ ಉದ್ದೇಶ ಈ ಸಮಿತಿಯದ್ದು.
ಭಾಷೆಗಳ ಉಳಿವು ಅಗತ್ಯ :
ಈಗ ಪ್ರಪಂಚದಲ್ಲಿ 2,000 ಭಾಷೆಗಳಿವೆ. 300 ವರ್ಷಗಳ ಹಿಂದೆ 5,000 ಭಾಷೆಗಳಿದ್ದವು. ಮುದ್ರಣ ತಂತ್ರಜ್ಞಾನ ಬಂದ ಬಳಿಕ ಇದಕ್ಕೆ ಒಗ್ಗಿಕೊಳ್ಳದೆ 3,000 ಭಾಷೆಗಳು ನಾಶವಾದವು. ಈಗ ಡಿಜಿಟಲ್ ತಂತ್ರಜ್ಞಾನವನ್ನು ಸ್ವೀಕಾರ ಮಾಡಿಕೊಳ್ಳದಿದ್ದರೆ ಹಲವು ಭಾಷೆಗಳು ಹಿಂದೆ ಬಿದ್ದು ಕ್ಷೀಣವಾಗಬಹುದು. ಡಿಜಿಟಲ್ ತಂತ್ರಜ್ಞಾನವನ್ನು ಭಾಷೆಗಳ ವಿಕಾಸನಕ್ಕೆ ಬಳಸಿಕೊಂಡು ಭಾಷೆಗಳ ಬೆಳವಣಿಗೆಗೆ ಆದ್ಯತೆ ನೀಡುವುದು ಶಿಕ್ಷಣ ಮಂತ್ರಾಲಯದ ಕೆಲಸವಾದ್ದರಿಂದ ಭಾರತೀಯ ಭಾಷೆಗಳು ಮುಂದೆ ಬರಬೇಕು ಎಂಬ ಕಲ್ಪನೆ ಹೊಂದಲಾಗಿದೆ.
ಭಾರತವನ್ನು ಜ್ಞಾನಕ್ಷೇತ್ರದಲ್ಲಿ ಮುಂದೆ ತಂದು ಸಮರ್ಥ, ಸಮೃದ್ಧ, ವಿಶ್ವ ಗುರು ಮಾಡಲು ಬೇಕಾದ ಜನಶಕ್ತಿ ನಿರ್ಮಾಣ ಮಾಡುವುದು ಶಿಕ್ಷಣ ಕ್ಷೇತ್ರ. ನೂತನ ಶಿಕ್ಷಣ ನೀತಿಯಲ್ಲಿ ಭಾರತೀಯ ಭಾಷೆಗಳಿಗೆ ಒತ್ತು ನೀಡಲಾಗಿದೆ. ಅವುಗಳ ಕಾರ್ಯಯೋಜನೆ ಬಗ್ಗೆ ಸರಕಾರಕ್ಕೆ ಸಲಹೆ ನೀಡುವ ಉದ್ದೇಶವನ್ನಿಟ್ಟುಕೊಂಡು ಕೇಂದ್ರ ಸರಕಾರ ಸಮಿತಿ ರಚಿಸಿದೆ.–ಚ.ಮೂ. ಕೃಷ್ಣ ಶಾಸ್ತ್ರಿ, ಶಿಕ್ಷಣ ತಜ್ಞ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಾರು ಢಿಕ್ಕಿ; ಸ್ಕೂಟರ್ ಸವಾರನಿಗೆ ಗಾಯ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.