ಕನ್ನಡ ಸೇವಕ ಡಾ| ಹೆಬ್ಬಾಳೆಗೆ ಬೆಂಬಲ
Team Udayavani, Nov 19, 2021, 4:06 PM IST
ಬೀದರ: ದಶಕದಿಂದ ಯಾವುದೇ ಫಲಾಪೇಕ್ಷೆಯಿಲ್ಲದೆ ಕನ್ನಡ ನಾಡು-ನುಡಿ ಮತ್ತು ಜನಪದ ಸೇವೆ ಮಾಡಿ, ಕಲಾವಿದರು ಹಾಗೂ ಕಲೆಯನ್ನು ಬೆಳೆಸುವಲ್ಲಿ ನಿರಂತರ ಸೇವೆ ಗೈಯುತ್ತಿರುವ ಡಾ| ರಾಜಕುಮಾರ ಹೆಬ್ಟಾಳೆ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ನಾಟ್ಯಶ್ರೀ ನೃತ್ಯಾಲಯದ ಕೆ. ಸತ್ಯಮೂರ್ತಿ ಹೇಳಿದರು.
ನಗರದ ನಾಟ್ಯಶ್ರೀ ನೃತ್ಯಾಲಯದ ಸಭಾಂಗಣದಲ್ಲಿ ಡಾ| ರಾಜಕುಮಾರ ಹೆಬ್ಟಾಳೆ ಅವರಿಗೆ ಸಮರ್ಥನೆ ನೀಡುವ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಪ್ರೊ| ಸಿದ್ರಾಮಪ್ಪ ಮಾಸಿಮಾಡೆಯವರು ಸ್ಪರ್ಧೆಯಲ್ಲಿ ಇಲ್ಲ. ಆದ್ದರಿಂದ ನಿಜವಾದ ಕನ್ನಡ ಸೇವಕ ಡಾ| ಹೆಬ್ಟಾಳೆ ಅವರಿಗೆ ಯಾವುದೇ ಅಪೇಕ್ಷೆಯಿಲ್ಲದೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಅವರು ಕಲೆ, ಕಲಾವಿದರು ಹಾಗೂ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಅವರಿಗೆ ತನು ಮನ ಧನದಿಂದ ನಾವು ಸಹಕರಿಸಿ ಅಭಯ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಕದಂಬ ಕನ್ನಡ ಸಂಘದ ಅಧ್ಯಕ್ಷ ಪ್ರೊ| ವೀರಶೆಟ್ಟಿ ಮೈಲೂರಕರ್ ಮಾತನಾಡಿ, ಕಲ್ಯಾಣ ನಾಡಿನಲ್ಲಿ ವಚನಭ್ರಷ್ಟರಿಗೆ ಯಾವುದೇ ಸಮರ್ಥನೆ ನೀಡಲು ಆಗುವುದಿಲ್ಲ. ಮಾತಿನಂತೆ ನಡೆಯದ ಮೇಲೆ ಅದು ಬಸವ ತತ್ವಕ್ಕೆ ಮಾಡಿದ ಅಪಚಾರ. ಹೀಗಾಗಿ ಹೆಬ್ಟಾಳೆ ಒಬ್ಬ ಯುವ ಉತ್ಸಾಹಿ ಸಂಘಟಕ. ದಣಿವರಿಯದ ಸೇವಕ. ಅವರಿಗೆ ನಮ್ಮ ಬೇಷರತ್ ಬೆಂಬಲವಿದೆ ಎಂದರು.
ಸಾಹಿತಿ ಉಮಾಕಾಂತ ಮೀಸೆ ಮಾತನಾಡಿ, ನಮ್ಮ ನಡೆ-ನುಡಿ ಒಂದಾಗಿಸಿಕೊಂಡು ಸೇವೆ ಮಾಡಿದಾಗ ಮಾತ್ರ ಸಾರ್ಥಕವಾಗುತ್ತದೆ. ಅಲ್ಲಿ ಒಂದಿಷ್ಟು ಅಭಿವೃದ್ಧಿಯನ್ನು ಕಾಣಬಹುದು. ಈ ಬಾರಿ ಹೊಸ ಮುಖಗಳಿಗೂ ಒಂದು ಅವಕಾಶ ನೀಡಿದರೆ ಉತ್ತಮ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ| ರಾಜಕುಮಾರ ಹೆಬ್ಟಾಳೆ ಮಾತನಾಡಿ, ಸುಮಾರು ಎರಡು ದಶಕಗಳಿಂದ ಜಿಲ್ಲೆಯಲ್ಲಿ ಕರ್ನಾಟಕ ಸಾಹಿತ್ಯ ಸಂಘ, ಜಾನಪದ ಪರಿಷತ್ತು ಹಾಗೂ ಕರ್ನಾಟಕ ಬರಹಗಾರರ- ಕಲಾವಿದರ ಸಂಘದ ಮೂಲಕ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇನೆ. ಕನ್ನಡ ಮತ್ತು ಜನಪದ ಸೇವೆಯನ್ನು ಮಾಡಲು ಈ ಬಾರಿ ನನಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ಪ್ರೊ| ಎಸ್.ಬಿ. ಬಿರಾದಾರ, ಪ್ರೊ| ದೇವೇಂದ್ರ ಕಮಲ, ಕೆ. ಗುರುಮೂರ್ತಿ, ಕೆ. ರಾಮಮೂರ್ತಿ, ಡಾ| ಎಂ.ಜಿ. ದೇಶಪಾಂಡೆ, ಡಾ| ಜಗನ್ನಾಥ ಹೆಬ್ಟಾಳೆ, ವೀರಭದ್ರಪ್ಪ ಉಪ್ಪಿನ್, ಯೋಗೇಂದ್ರ ಯದಲಾಪುರೆ, ಕಿರಣ ಗುರುಮೂರ್ತಿ, ಕೆ. ಭಾಗ್ಯಲಕ್ಷ್ಮೀ, ಬಸವರಾಜ ಮೂಲಗೆ, ಓಂಪ್ರಕಾಶ ರೊಟ್ಟೆ, ರಾಜಕುಮಾರ ಮಡಕಿ, ನಿಜಲಿಂಗಪ್ಪ ತಗಾರೆ, ಗಂಗಶೆಟ್ಟಿ ಖಾನಾಪುರೆ, ಪಂಚಾಕ್ಷರಿ ಪುಣ್ಯಶೆಟ್ಟಿ, ಬಸವರಾಜ ಹೆಗ್ಗೆ, ಪ್ರೊ| ಎಸ್.ವಿ. ಕಲ್ಮಠ, ಬಸವಂತರಾವ ಪಾಟೀಲ, ಅಶೋಕ ಮಾನಶೆಟ್ಟಿ, ನಾಗೇಶ ಮಾನಶೆಟ್ಟಿ, ಬಸಯ್ಯ ಸ್ವಾಮಿ, ಬಸವರಾಜ ಸ್ವಾಮಿ, ಶಿವಶಂಕರ ಚಿಕುರ್ತಿ, ಭುವನೇಶ್ವರ ಬಿರಾದಾರ, ಅಶೋಕ ಶೆಟಕಾರ, ಶಾಂತಕುಮಾರ ಶೆಟಕಾರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.