![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 19, 2021, 10:15 PM IST
ನವದೆಹಲಿ: ಮುಂದಿನ ತಿಂಗಳು ಕೊರಿಯಾದಲ್ಲಿ ನಡೆಯಲಿರುವ ವನಿತಾ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಗೋಲ್ ಕೀಪರ್ ಸವಿತಾ ಪುನಿಯಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ನಾಯಕಿ ರಾಣಿ ರಾಮ್‌ಪಾಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಯುವ ಆಟಗಾರ್ತಿಯರ ಪಾಲಿಗೆ ಇದೊಂದು ಮಹತ್ವದ ಸರಣಿ. ಸೀನಿಯರ್ ತಂಡದ ಕೆಲವರು ಜೂನಿಯರ್ ವಿಶ್ವಕಪ್ ಪಂದ್ಯಾವಳಿಗೆ ಆಯ್ಕೆಯಾಗಿರುವುದರಿಂದ ಇಲ್ಲಿ ಹೊಸಬರಿಗೆ ಅವಕಾಶ ಲಭಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಮ್ಮವರ ಸಾಧನೆ ಅಮೋಘ ಮಟ್ಟದಲ್ಲಿತ್ತು. ಆದರೆ ನಾವಿಲ್ಲಿ ತಳಮಟ್ಟದಿಂದಲೇ ಹೊಸ ಆರಂಭ ಮಾಡಲಿದ್ದೇವೆ’ ಎಂದು ಪ್ರಧಾನ ಕೋಚ್ ಜಾನೆಕ್ ಶೋಪ್‌ಮನ್ ಹೇಳಿದರು.
ಇದನ್ನೂ ಓದಿ:ಕೈಗೆ ಗಾಯ: ಎರಡನೇ ಟಿ20ಯಿಂದ ಸಿರಾಜ್ ಹೊರಗೆ;ಹರ್ಷಲ್ ಪಟೇಲ್ ಪಾದಾರ್ಪಣೆ
ರೌಂಡ್ ರಾಬಿನ್ ಲೀಗ್
ಭಾರತ ಕೂಟದ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಆಡಲಿದೆ (ಡಿ. 5). ಬಳಿಕ ಮಲೇಷ್ಯಾ (ಡಿ. 6), ಹಾಲಿ ಚಾಂಪಿಯನ್ ಕೊರಿಯಾ (ಡಿ. 8), ಚೀನಾ (ಡಿ. 9) ಮತ್ತು ಜಪಾನ್ (ಡಿ. 11) ತಂಡವನ್ನು ಎದುರಿಸಲಿದೆ. ಇದು ರೌಂಡ್ ರಾಬಿನ್ ಲೀಗ್ ಆಗಿದ್ದು, ಅಗ್ರಸ್ಥಾನ ಪಡೆದ ಮೊದಲೆರಡು ತಂಡಗಳು ಡಿ. 12ರ ಫೈನಲ್‌ನಲ್ಲಿ ಸೆಣಸಲಿವೆ.
ಭಾರತ ತಂಡ: ಸವಿತಾ ಪುನಿಯಾ (ನಾಯಕಿ), ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ರಜನಿ ಇತಿಮಾರಪೂ, ಉದಿತಾ, ನಿಕ್ಕಿ ಪ್ರಧಾನ್, ಗುರ್ಜಿತ್ ಕೌರ್, ನಿಶಾ, ಪಿ. ಸುಶೀಲಾ ಚಾನು, ನಮಿತಾ ಟೋಪೊ, ಮೋನಿಕಾ, ನೇಹಾ, ಜ್ಯೋತಿ, ಲಿಲಿಮಾ ಮಿಂಝ್, ನವನೀತ್ ಕೌರ್, ವಂದನಾ ಕಟಾರಿಯಾ, ರಾಜ್ವಿಂದರ್ ಕೌರ್, ಮರಿಯಾನಾ ಕುಜುರ್, ಸೋನಿಕಾ.
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
You seem to have an Ad Blocker on.
To continue reading, please turn it off or whitelist Udayavani.