ದಾವಣಗೆರೆ:ಪರಿಷತ್ ಚುನಾವಣೆ; 94 ಮತ ಖೋತಾ
Team Udayavani, Nov 19, 2021, 7:54 PM IST
ದಾವಣಗೆರೆ: ವಿಧಾನ ಪರಿಷತ್‌ನ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿ. 10 ರಂದು ಚುನಾವಣೆ ನಡೆಯಲಿದ್ದು, ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಒಟ್ಟಾರೆ 94 ಮತಗಳು ಕಡಿಮೆ ಆಗಲಿವೆ.
ಜಿಪಂ, ತಾಪಂ, ಪುರಸಭೆ ಸದಸ್ಯರ ಅವಧಿ ಮುಗಿದಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಒಳಗೊಂಡಂತೆ 94 ಮತಗಳು ಕಡಿಮೆ ಆಗಿವೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಜಿಲ್ಲಾ, ತಾಲೂಕು, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮತದಾನ ಹಕ್ಕು ಹೊಂದಿರುತ್ತಾರೆ. ದಾವಣಗೆರೆ ಜಿಲ್ಲಾ ಪಂಚಾಯತ್, ದಾವಣಗೆರೆ, ಹರಿಹರ, ಜಗಳೂರು ತಾಲೂಕು ಪಂಚಾಯತ್ ಮತ್ತು ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭೆಯ ಅವಧಿ ಮುಗಿದಿದೆ.
ಮೂರು ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ 94 ಮತಗಳು ಕಡಿಮೆ ಆಗಿವೆ. ಬಿಜೆಪಿಗೆ 41 ಮತ ಖೋತಾ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನಲ್ಲಿ ನಡೆಯುವ ಚುನಾವಣೆಯನ್ನು ಗೆದ್ದೇ ಗೆಲ್ಲುವ ಹುಮ್ಮಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಬಿಜೆಪಿಗೆ ಅತಿ ಹೆಚ್ಚು 41 ಮತಗಳು ಕಡಿಮೆ ಆಗಲಿವೆ. ಜಿಪಂ, ಆರು ತಾಲೂಕು ಪಂಚಾಯತ್, ಒಂದು ಪುರಸಭೆಗಳಲ್ಲಿ 41 ಬಿಜೆಪಿ ಸದಸ್ಯರಿದ್ದರು. ಈಗ ಮತದಾ ನಕ್ಕೆ ಅವಕಾಶವೇ ಇಲ್ಲದ ಕಾರಣ ಬಿಜೆಪಿಗೆ ಚುನಾವಣೆಗೆ ಮುನ್ನವೇ ಆ ಮತಗಳು ಖೋತಾ ಆಗಲಿವೆ. ವಿಧಾನ ಪರಿಷತ್ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ಗೂ 34 ಮತಗಳು ಕಡಿಮೆ ಆಗಿವೆ.
ಜಿಪಂ, ಆರು ತಾಲೂಕು ಪಂಚಾಯತ್, ಒಂದು ಪಪಂನಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದ 34 ಸದಸ್ಯರು ಮತದಾನ ಮಾಡುವಂತಿಲ್ಲ. ಜಿಪಂ, ಆರು ತಾಲೂಕು ಪಂಚಾಯತ್, ಒಂದು ಪುರಸಭೆಯಲ್ಲಿ ಜೆಡಿಎಸ್‌ನ ಒಟ್ಟು 13 ಜನ ಸದಸ್ಯರಿದ್ದರು. ಆ ಎಲ್ಲ ಸದಸ್ಯರ ಮತಗಳು ಜೆಡಿಎಸ್‌ಗೆ ಕಡಿಮೆ ಆಗಿವೆ. ಅದೇ ರೀತಿ 6 ಪಕ್ಷೇತರರು ಮತದಾನ ಮಾಡುವಂತಿಲ್ಲ. ಒಟ್ಟು 25 ಸದಸ್ಯತ್ವ ಬಲದ ದಾವಣಗೆರೆ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿಯ 14, ಕಾಂಗ್ರೆಸ್‌ನ 10, ಒಬ್ಬರು ಪಕ್ಷೇತರರಿದ್ದರು. ಹರಿಹರ ತಾಲೂಕು ಪಂಚಾಯತ್‌ನಲ್ಲಿ 15 ಸದಸ್ಯರಲ್ಲಿ ಜೆಡಿಎಸ್‌ನ ಆರು, ಬಿಜೆಪಿಯ ಐವರು, ಕಾಂಗ್ರೆಸ್‌ನ ನಾಲ್ವರು ಸದಸ್ಯರಿದ್ದರು.
16 ಸದಸ್ಯತ್ವ ಬಲದ ಜಗಳೂರು ತಾಲೂಕು ಪಂಚಾಯತ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಏಳು ಹಾಗೂ ಇಬ್ಬರು ಪಕ್ಷೇತರರು ಇದ್ದರು. ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭೆಯ ಒಟ್ಟು ಸದಸ್ಯತ್ವ ಬಲ 23. ಅದರಲ್ಲಿ ಬಿಜೆಪಿ 7, ಜೆಡಿಎಸ್ 5, ಕಾಂಗ್ರೆಸ್ 8 ಹಾಗೂ ಮೂವರು ಪಕ್ಷೇತರರು ಇದ್ದರು. ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಮತಗಳೂ ಕಡಿಮೆ ಆಗಲಿವೆ.
ಬಿಜೆಪಿಗೆ ಜಿಲ್ಲಾ, ತಾಲೂಕು ಪಂಚಾಯತ್ ಮತ್ತು ಪುರಸಭೆಯಲ್ಲಿದ್ದ ಸದಸ್ಯರ 41 ಮತಗಳು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ನತ್ತ ನೋಟ ಬೀರಿದೆ. ದಾವಣಗೆರೆ, ಜಗಳೂರು, ಹರಿಹರ ತಾಲೂಕಿನ ಗ್ರಾಪಂ ಸದಸ್ಯರಲ್ಲಿ ಬಿಜೆಪಿ ಬೆಂಬಲದೊಂದಿಗೆ ಗೆದ್ದಿರುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಜಿಪಂ, ತಾಪಂನಲ್ಲಿದ್ದ ಸದಸ್ಯರ ಬಲ ಕಳೆದುಕೊಂಡಿರುವ ಬಿಜೆಪಿ ಗ್ರಾಪಂ ಸದಸ್ಯರ ಮತ ಬೇಟೆ ನಡೆಸಲಿದೆ. ಕಾಂಗ್ರೆಸ್ ಗೆ 34 ಮತಗಳು ಕಡಿಮೆ ಆಗಿರುವುದರಿಂದ ಗ್ರಾಪಂ ಸದಸ್ಯರ ಮತ ಸೆಳೆಯುವ ಮೂಲಕ ನಷ್ಟ ಸರಿದೂಗಿಸಿಕೊಳ್ಳುವ ಪ್ರಯತ್ನ ನಡೆಸಲು ತಂತ್ರ ರೂಪಿಸಿದೆ. ಜೆಡಿಎಸ್ ಕಣಕ್ಕಿಳಿದಲ್ಲಿ 13 ಮತ ಕೊರತೆ ಎದುರಾಗಲಿದೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.