ಹೊಸಪೇಟೆ: ಅಪ್ಪು ಅಭಿಮಾನ;ನೇತ್ರದಾನಕ್ಕೆ 1843 ಜನರ ನೋಂದಣಿ
ರಕ್ತದಾನ ಮಾಡಿದ 315ಕ್ಕೂ ಹೆಚ್ಚು ಜನ
Team Udayavani, Nov 19, 2021, 8:06 PM IST
ರಕ್ತದಾನ ಮಾಡಿದ 315ಕ್ಕೂ ಹೆಚ್ಚು ಜನ
ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರ 21ನೇ ದಿನದ ಪುಣ್ಯಸ್ಮರಣೆ ನಿಮಿತ್ತ ಅಪ್ಪು ಅಭಿಮಾನಿಗಳು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನೇತ್ರದಾನ, ರಕ್ತದಾನ ಹಾಗೂ ಅನ್ನಸಂತರ್ಪಣೆ ನಡೆಸುವ ಮೂಲಕ ಅಭಿಮಾನ ಮೆರೆದರು.
ಬಿಜೆಪಿ ಮುಖಂಡ ಧಮೇಂದ್ರ ಸಿಂಗ್ ಹಾಗೂ ಸಿದ್ಧಾರ್ಥ ಸಿಂಗ್ ಅವರು ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನಷ್ಯ ಬದುಕಿದ್ದಾಗ ಅವನ ಬಗ್ಗೆ ತಿಳಿದಿರುವುದಿಲ್ಲ. ಆತ ಸತ್ತ ಮೇಲೆ ಅವನು ಮಾಡಿದ ಉತ್ತಮ ಕಾರ್ಯಗಳು ಬೆಳಕಿಗೆ ಬರುತ್ತವೆ. ಉಸಿರು ನಿಂತ ಮೇಲೆ ಅವರ ಹೆಸರು, ಸಾಮಾಜಿಕ ಕೆಲಸ-ಕಾರ್ಯಗಳು ಜನಮಾನಸದಲ್ಲಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಟ ಪುನೀತ್ ರಾಜಕುಮಾರ್ ಅವರು ಅತ್ಯಂತ ಎತ್ತರದಲ್ಲಿ ನಿಲ್ಲುತ್ತಾರೆ. ಅವರು ವಿದ್ಯಾರ್ಥಿ-ಯುವಜನರಿಗೆ ಪ್ರೇರಣೆಯಾಗಿದ್ದಾರೆ. ಇಂದು ನಡೆದ ಸ್ವಯಂ ಪ್ರೇರಿತ ನೇತ್ರದಾನಕ್ಕೆ ನೋಂದಣಿ-ರಕ್ತದಾನ ಕಾರ್ಯಕ್ರಮದಲ್ಲಿ ಅನೇಕರು ನೇತ್ರ-ರಕ್ತದಾನ ಮಾಡಿರುವುದೇ ಸಾಕ್ಷಿಯಾಗಿದೆ. ನಟ ಪುನೀತ್ ಅವರ ಆದರ್ಶವನ್ನು ಯುವಜನರು ಮೈಗೂಡಿಸಿಕೊಂಡು ಸಮಾಜಮುಖೀಯಾಗಬೇಕು ಎಂದು ಸಲಹೆ ನೀಡಿದರು.
ಶಾನಬಾಗ್ ವೃತ್ತಕ್ಕೆ ಪುನೀತ್ ಹೆಸರಿಡಿ
ನಗರದ ಶಾನಬಾಗ್ ವೃತ್ತಕ್ಕೆ ನೂತನ ವರ್ಷ ಜನವರಿ-1ರಂದು ನಟ ಪುನೀತ್ ರಾಜಕುಮಾರ್ ನಾಮಕರಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು. ಸಚಿವ ಆನಂದ ಸಿಂಗ್ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಕಿಚಿಡಿ ವಿಶ್ವ, ತಾಯಪ್ಪ ಜೋಗಿ, ಗುಡುಗಂಟಿ ಮಲ್ಲಿಕಾರ್ಜುನ, ಕಣ್ಣಿ ಶ್ರೀಕಂಠ, ಶ್ಯಾಮ್ ಸಿಂಗ್, ಕಿಚಿಡಿ ಶ್ರೀನಿವಾಸ, ಬೆಳಗೋಡ್ ಮಂಜುನಾಥ, ಫಕ್ಕಿರಪ್ಪ, ಕೆ.ಎಂ. ಸಂತೋಷ್, ಜೆ.ಡಿ. ಮಂಜುನಾಥ, ಗುಜ್ಜಲ್ ರಘು, ಜೆ.ಬಾಲಾಜಿ, ಪರಶುರಾಮ, ಪ್ರಭು, ರಾಜು, ಕೆ.ಮಂಜುನಾಥ, ಯಮನೂರಪ್ಪ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದ್ದರು. ಶಿಬಿರದಲ್ಲಿ ಸಿದ್ಧಾರ್ಥ ಸಿಂಗ್, ಶ್ಯಾಮ್ ಸಿಂಗ್, ಗುಜ್ಜಲರಾಘು, ಬೆಳಗೋಡ್ ಮಂಜುನಾಥ ಇನ್ನಿತರೆ ಗಣ್ಯರು ರಕ್ತದಾನ ಗೈದರು.
ಅನ್ನಸಂತರ್ಪಣೆ ಕಾರ್ಯದಲ್ಲಿ ಸಾವಿರಾರು ಜನರು ಊಟ ಮಾಡಿದರು. 18430ಕ್ಕೂ ಹೆಚ್ಚು ಜನರು, ನೇತ್ರದಾನಕ್ಕೆ ನೋಂದಣಿ ಮಾಡಿಸಿದರೆ, 315ಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
By Election: ಮಾತಿನ ಭರದಲ್ಲಿ ವಿಜಯೇಂದ್ರಗೂ ಪಾಲು ಎಂದ ಶ್ರೀರಾಮುಲು!
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.