ಲೈಟ್ ಆನ್, ಗಾಡಿ ಆಫ್ 2ನೇ ಹಂತ
ಹೊಸದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಅಭಿಯಾನ
Team Udayavani, Nov 20, 2021, 6:35 AM IST
ಹೊಸದಿಲ್ಲಿ: ಹೊಸದಿಲ್ಲಿ ವಾಯು ಗುಣಮಟ್ಟ ಸತತ 6ನೇ ದಿನವೂ “ಅತ್ಯಂತ ಕಳಪೆ’ ಕೆಟಗರಿಯಲ್ಲಿ ಮುಂದುವರಿದಿದ್ದು, ಶುಕ್ರವಾರ ಈ ಸೂಚ್ಯಂಕ 332ಕ್ಕೆ ತಲುಪಿದೆ.
ವಾಹನಗಳ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸದಿಲ್ಲಿಯ ಆಮ್ ಆದ್ಮಿ ಸರಕಾರ “ರೆಡ್ ಲೈಟ್ ಆನ್, ಗಾಡಿ ಆಫ್’ ಅಭಿಯಾನದ ಎರಡನೇ ಹಂತಕ್ಕೆ ಶುಕ್ರವಾರ ಚಾಲನೆ ಕೊಟ್ಟಿದೆ. ಅಲ್ಲದೇ ಸಮ-ಬೆಸ ಯೋಜನೆಯನ್ನೂ ಮರು ಜಾರಿ ಮಾಡಲು ನಿರ್ಧರಿಸಿದೆ.
ನಗರದ 100 ಕ್ರಾಸಿಂಗ್‌ನಲ್ಲಿ ಈ ಅಭಿಯಾನ ಆರಂಭವಾಗಿದೆ. ಐಟಿಒ ಕ್ರಾಸಿಂಗ್‌ಗೆ ಶುಕ್ರವಾರ ಭೇಟಿ ನೀಡಿದ ಹೊಸದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್, ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡುವ ಮೂಲಕ ಮಾಲಿನ್ಯದ ವಿರುದ್ಧ ಹೋರಾಡುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ.
“ಪ್ರತೀ ದಿನ ಒಬ್ಬ ವ್ಯಕ್ತಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಸರಾಸರಿ 20-25 ನಿಮಿಷಗಳ ಕಾಲ ಇಂಧನ ವ್ಯಯಿಸುತ್ತಾನೆ. ಇದು ಕೂಡ ಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಹೀಗಾಗಿ, ಟ್ರಾಫಿಕ್‌ನಲ್ಲಿ ಕೆಂಪು ದೀಪ ಉರಿದಾಗ, ಎಲ್ಲರೂ ವಾಹನಗಳನ್ನು ಸಂಪೂರ್ಣವಾಗಿ ಆಫ್ ಮಾಡುವ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕುವುದು ಅಭಿಯಾನದ ಉದ್ದೇಶ’ ಎಂದು ರಾಯ್ ಹೇಳಿದ್ದಾರೆ.
ಇದನ್ನೂ ಓದಿ:ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ
ನಾಸಾ ಉಪಗ್ರಹದಲ್ಲಿ ಸೆರೆ: ನ.11ರಂದು ನಾಸಾದ ಸುವೋಮಿ ಎನ್‌ಪಿಪಿ ಉಪಗ್ರಹವು ಸೆರೆಹಿಡಿದಿರುವ ಚಿತ್ರಗಳಲ್ಲಿ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಏಳುವ ಹೊಗೆಯು ಹೊಸದಿಲ್ಲಿಯತ್ತ ಸಂಚರಿಸುವುದು ದಾಖಲಾಗಿದೆ. ಉಪಗ್ರಹದಲ್ಲಿನ “ವಿಸಿಬಲ್ ಇನ್‌ಫ್ರಾರೆಡ್ ಇಮೇಜಿಂಗ್ ರೇಡಿಯೋಮೀಟರ್ ಸೂಟ್’ (ವಿಐಐಆರ್‌ಎಸ್) ಮೂಲಕ ಈ ಚಟು ವಟಿಕೆಯನ್ನು ಪತ್ತೆಹಚ್ಚಲಾಗಿದೆ. ಇದು ಸಮುದ್ರ ಮತ್ತು ಭೂಪ್ರದೇಶದಲ್ಲಿನ ತಾಪ ಮಾನ ಬದಲಾವಣೆ ಹಾಗೂ ಬೆಂಕಿಯ ಚಟುವಟಿಕೆಯನ್ನು ಪತ್ತೆಹಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.