ಮಕ್ಕಳಿಂದ ಸುವಾರ್ತೆ. ದಂಪತಿಗಳಲ್ಲಿ ಸುಖ ವೃದ್ಧಿ
Team Udayavani, Nov 20, 2021, 8:01 AM IST
ಮೇಷ: ಮಾತೃ ಸಮಾನರಾದವರಿಂದ ಸಂತೋಷ. ನೂತನ ಮಿತ್ರರ ಸಹಕಾರ. ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆ ಒದಗಿದರೂ ಧನಾರ್ಜನೆಗೆ ಕೊರತೆಯಾಗದು. ಗೃಹದಲ್ಲಿ ಸಂತಸದ ವಾತಾವರಣ.
ವೃಷಭ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರ ಗಳಲ್ಲಿ ನಿಷ್ಠೆ . ಉತ್ತಮ ವಾಕ್ಚತುರತೆ ಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ. ದೂರದ ಬಂಧುಮ್ರಿರಿಂದ ಸಹಾಯ ಒದಗೀತು. ಸಾಂಸಾರಿಕ ಸುಖ ತೃಪ್ತಿಕರ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದೀರ್ಘ ಸಂಚಾರ ಸಂಭವ. ದೂರದ ಉದ್ಯೋಗ ವ್ಯವಹಾರ ಗಳಲ್ಲಿ ಪ್ರಗತಿ. ಹೆಚ್ಚಿದ ವರಮಾನ. ಸಹಾಯಕರು, ಸಹೋದ್ಯೋಗಿಗಳ ಆರೋಗ್ಯ ಗಮನಿಸಿ. ದಾಂಪತ್ಯ ತೃಪ್ತಿಕರ.
ಕಟಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಚಿಂತಿಸದಿರಿ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿ ತೋರೀತು. ಗೃಹೋಪಕರಣ ವಸ್ತುಗಳ ಸಂಗ್ರಹ. ಗುರುಹಿರಿಯರ ಸಹಕಾರ ಲಭಿಸೀತು.
ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಸರಿಯಾಗಿ ಜವಾಬ್ದಾರಿ ವಹಿಸಿದ್ದರಿಂದ ಸ್ಥಾನ ಗೌರವಾದಿ ಸಂಪಾದಿಸಿದ ತೃಪ್ತಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಆಸ್ತಿ, ಗೃಹ, ವಾಹನ ಸಂಬಂಧ ಖರ್ಚು ಸಂಭವ. ಅನ್ಯರ ಮೇಲೆ ಅವಲಂಬಿತರಾಗದಿರಿ.
ಕನ್ಯಾ: ಪ್ರಯಾಣದಿಂದ ದೇಹಾಯಾಸ ಕಂಡೀತು. ಧಾರ್ಮಿಕ ಕಾರ್ಯಗಳಿಗಾಗಿ ಧನ ವ್ಯಯ. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಕುಟುಂಬಿಕರಿಂದ ಪ್ರೋತ್ಸಾಹ. ದಾಂಪತ್ಯ ಸುಖ ಮಧ್ಯಮ. ನಿರಂತರ ಧನಾಗಮನ.
ತುಲಾ: ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರುವ ಸಮಗ. ಆರೋಗ್ಯ ವೃದ್ಧಿ. ನೂತನ ಬಂಧುಮಿತ್ರರ ಸಮಾಗಮ. ಹೆಚ್ಚಿದ ಸ್ಥಾನ ಗೌರವಾದಿ ಸುಖ. ನಿರಂತರ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿ ಸಹಾಯ ಸಹಕಾರ ಲಭ್ಯ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ನಿರೀಕ್ಷಿತ ಗುರಿ ಸಾಧಿಸಿದ ತೃಪ್ತಿ . ಪಾಲುದಾರರಿಂದ ಸಹಕಾರ ಪ್ರೋತ್ಸಾಹ. ಅವಿವಾಹಿತರಿಗೆ ಉತ್ತಮ ನೆಂಟಸ್ತಿಕೆ ಒದಗುವ ಸಮಯ. ಅನಿರೀಕ್ಷಿತ ಧನಾಗಮನ. ಎಲ್ಲರಲ್ಲೂ ಪ್ರೀತಿ ವಿಶ್ವಾಸ ಸಂಪಾದನೆ.
ಧನು: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ಗುರುಹಿರಿಯರ ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಪ್ರಯಾಣ ಸಂಭವ.
ಮಕರ: ಆರೋಗ್ಯ ಗಮನಿಸಿ. ಈ ದಿನ ಸಾಮಾನ್ಯ ಫಲದಾಯಕ. ಯಾವುದೇ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆ ಸಮಾಧಾನದಿಂದ ಸಮಯ ಕಳೆಯಿರಿ. ವಿಶ್ರಾಂತಿ ಪಡೆಯಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.
ಕುಂಭ: ಆರೋಗ್ಯ ವೃದ್ಧಿ. ಮಕ್ಕಳ ನಿಮಿತ್ತ ಸಂತೋಷ ವೃದ್ಧಿ. ಹೆಚ್ಚಿದ ವರಮಾನ. ಬಂಧುಮಿತ್ರರಿಂದಲೂ, ಉದ್ಯೋಗ ವ್ಯವಹಾರದಿಂದಲೂ ಅನಿರೀಕ್ಷಿತ ಪ್ರಗತಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ.
ಮೀನ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಧನಾರ್ಜನೆ ಯಲ್ಲಿ ಮುನ್ನಡೆ. ಆಸ್ತಿ ವಿಚಾರದಲ್ಲಿ ಪ್ರಗತಿಪರ ಬದಲಾವಣೆ ಸಂಭವ. ಮಕ್ಕಳಿಂದ ಸುವಾರ್ತೆ. ದಂಪತಿಗಳಲ್ಲಿ ಸುಖ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.