ಕೃಷಿ ಕಾಯ್ದೆ ವಾಪಾಸ್: ದೇವನಗರಿಯಲ್ಲಿ ಸಂಭ್ರಮ
Team Udayavani, Nov 20, 2021, 9:54 AM IST
ದಾವಣಗೆರೆ: ಕೇಂದ್ರ ಸರ್ಕಾರ ಮೂರುಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದಿರುವಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ರೈತ ಸಂಘ,ಹಸಿರು ಸೇನೆ, ಸಂಯುಕ್ತ ಹೋರಾಟ ಕರ್ನಾಟಕ, ಜಿಲ್ಲಾ ಕಾಂಗ್ರೆಸ್ ಒಳಗೊಂಡಂತೆವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷಣೆ ಕೂಗುವ ಮೂಲಕ ವಿಜಯೋತ್ಸವ ಆಚರಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌ಮಾತನಾಡಿ, ಕೇಂದ್ರ ಸರ್ಕಾರ ಸುಗೀÅವಾಜ್ಞೆಮೂಲಕ ಜಾರಿಗೆ ತಂದಿದ್ದಂತಹ ಮೂರುಕರಾಳ ಕಾಯ್ದೆಗಳನ್ನ ಕೊನಗೆ ವಾಪಾಸ್‌ಪಡೆದಿರುವುದು ಇಡೀ ದೇಶದ ಅನ್ನದಾತರು,ವಿವಿಧ ಪ್ರಗತಿಪರ ಸಂಘಟನೆ ಗಳುನಿರಂತರವಾಗಿ ನಡೆಸಿದ ಹೋರಾಟದ ಫಲ. ಕೃಷಿಕರ ಹೋರಾಟಕ್ಕೆ ಮಣಿದಿರುವ ಕೇಂದ್ರಸರ್ಕಾರ ಕರಾಳ ಕೃಷಿ ಕಾಯ್ದೆ ವಾಪಾಸ್‌ಪಡೆದಿದೆ. ಆಷ್ಟಕ್ಕೆ ಮುಗಿಯುವುದಿಲ್ಲ. ಪ್ರಧಾನಿಗಳ ಆದೇಶ ಲೋಕಸಭೆಯಲ್ಲಿಮಸೂದೆಯಾಗಿ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಅತ್ಯಂತ ತರಾತುರಿಯಲ್ಲಿಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳರದ್ಧತಿಗೆ ಒತ್ತಾಯಿಸಿ ದೆಹಲಿಯಲ್ಲಿ ರೈತರುನಿರಂತರವಾಗಿ ಹೋರಾಟ ನಡೆಸಿದರು.600ಕ್ಕೂ ಹೆಚ್ಚು ರೈತರು ಹುತಾತ್ಮರಾದರು.ಅಹಿರ್ನಿಶಿ ಹೋರಾಟದಿಂದ ಕೇಂದ್ರ ಸರ್ಕಾರಕ್ಕೆಕಡೆಗೂ ಜ್ಞಾನೋದಯವಾಗಿ ಕೃಷಿ ಕಾಯ್ದೆಗಳಹಿಂದಕ್ಕೆ ಪಡೆದಿದೆ. ಇದು ರೈತಾಪಿ ವರ್ಗದಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು.
ದಾವಣಗೆರೆಯಲ್ಲೂ ಕೃಷಿ ಕಾಯ್ದೆಗಳವಿರುದ್ಧ 16 ತಿಂಗಳಲ್ಲಿ ವಿವಿಧ ಹಂತದಲ್ಲಿಹೋರಾಟ ನಡೆಸಲಾಗಿದೆ. ದಾವಣಗೆರೆಬಂದ್, ರಸ್ತೆ ತಡೆ, ಹೆದ್ದಾರಿ ತಡೆ… ಹೀಗೆಹಲವಾರು ಹೋರಾಟ ನಡೆಸಲಾಗಿದ್ದು,ಈಚೆಗೆ ನಮ್ಮನ್ನು ಅಗಲಿದಂತಹ ಕಾರ್ಮಿಕಮುಖಂಡ ಎಚ್.ಕೆ. ರಾಮಚಂದ್ರಪ್ಪ ಅವರುಹೋರಾಟದಲ್ಲಿ ಭಾಗವಹಿಸಿದ್ದನ್ನು ಯಾರೂಸಹ ಮರೆಯುವಂತೆಯೇ ಇಲ್ಲ ಎಂದುಸ್ಮರಿಸಿದರು.ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾಯ್ದೆರೂಪ ನೀಡಬೇಕು ಎಂದು ಒತ್ತಾಯಿಸಿಸಂಘಟನೆಯ ನೇತೃತ್ವದಲ್ಲಿ ಅನೇಕಹೋರಾಟ ನಡೆಸಲಾಗಿದೆ. ಕಾಯ್ದೆಯ ರೂಪನೀಡದೇ ಹೋದಲ್ಲಿ ಕನಿಷ್ಠ ಬೆಂಬಲ ಬೆಲೆಯೋಜನೆಗೆ ಮಾನ್ಯತೆಯೇ ದೊರಕುವುದಿಲ್ಲ.
ಕೇಂದ್ರ ಸರ್ಕಾರ ಈಗಲಾದರೂ ಕನಿಷ್ಠಬೆಂಬಲ ಬೆಲೆ ಯೋಜನೆಗೆ ಕಾಯ್ದೆ ರೂಪನೀಡಬೇಕು ಮತ್ತು ಡಾ| ಸ್ವಾಮಿನಾಥನ್ ಆಯೋಗದ ವರದಿಯನ್ನು ಯಥವತ್ತಾಗಿಜಾರಿಗೊಳಿಸಬೇಕು. ಅಲ್ಲಿಯವರೆಗೂಹೋರಾಟ ನಿರಂತರವಾಗಿರಲಿದೆ ಎಂದುತಿಳಿಸಿದರು.ಕೃಷಿ ಕಾಯ್ದೆ ರದ್ಧತಿಗೆ ಒತ್ತಾಯಿಸಿಹೋರಾಟ ನಡೆಸುತ್ತಿದ್ದ ಅನ್ನದಾತರನ್ನುದಲ್ಲಾಳಿಗಳು, ಖರೀದಿದಾರರ ಏಜೆಂಟರು,ದೊಡ್ಡ ಕಂಪನಿಗಳ ಪರ ಇರುವಂತಹರು…ಹೀಗೆ ಅನೇಕ ರೀತಿಯಲ್ಲಿ ವ್ಯವ ಸ್ಥಿತವಾಗಿ ಅಪಪ್ರಚಾರ ನಡೆಸಲಾಯಿತು. ಅದರ ಮಧ್ಯೆಯೂಹೋರಾಟ ಮುಂದುವರೆಸಿದಂತಹರೈತರು ಜಯ ಪಡೆಯುವಲ್ಲಿ ಅಕ್ಷರಶಃಸಹ ಯಶಸ್ವಿಯಾಗಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿವ್ಯತಿರಿಕ್ತವಾಗಿ ಯಾವುದೇ ತೀರ್ಮಾನತೆಗೆದುಕೊಂಡರೂ ರೈತರ ಹೋರಾಟ ಇದ್ದೇಇರುತ್ತದೆ.
ಈಗ ಕೇಂದ್ರ ಸರ್ಕಾರ ಕೃಷಿಕಾಯ್ದೆಗಳನ್ನ ವಾಪಾಸ್ ಪಡೆದಿರುವುದುರೈತರ ಹೋರಾಟಕ್ಕೆ ಸಿಕ್ಕಂತಹ ಮೊದಲಜಯ. ಲೋಕಸಭೆಯಲ್ಲಿ ಮಸೂದೆಯಾಗಿಆದೇಶ ಬರುವ ತನಕ ಹೋರಾಟ ಜಾರಿಯಲ್ಲಿಇರಲಿದೆ ಎಂದು ತಿಳಿಸಿದರು. ಗುಮ್ಮನೂರುಬಸವರಾಜ್, ನೀರ್ಥಡಿ ತಿಪ್ಪೇಶ್, ಭಗತ್‌ಸಿಂಹ, ಆಲೂರು ಪುಟ್ಟನಾಯ್ಕ, ದೇವರಾಜ್‌ತಳವಾರ, ಬೇವಿನಹಳ್ಳಿ ರವಿ, ಕೆಂಚಮ್ಮನಹಳ್ಳಿಹನುಮಂತ ಇತರರು ಇದ್ದರು.ಸಂಯುಕ್ತ ಹೋರಾಟ ಕರ್ನಾಟಕಪದಾಧಿಕಾರಿಗಳು ಕೇಂದ್ರ ಸರ್ಕಾರ ಮೂರುಕೃಷಿ ಕಾಯ್ದೆಗಳ ವಾಪಾಸ್ ಪಡೆದಿರುವುದುದೇಶದ ರೈತ ಸಂಕುಲಕ್ಕೆ ಸಂದ ಜಯ ಎಂದುಜಯದೇವ ವೃತ್ತದಲ್ಲಿ ಹರ್ಷ ವ್ಯಕ್ತಪಡಿಸಿ,ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕಸಂಭ್ರಮಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿದಿನೇಶ್ ಕೆ. ಶೆಟ್ಟಿ, ನಗರಪಾಲಿಕೆ ವಿಪಕ್ಷ ನಾಯಕಎ. ನಾಗರಾಜ್, ಕೆ.ಜಿ. ಶಿವಕುಮಾರ್,ಅನಿತಾಬಾಯಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.