ಗುರುವಿನ ಸಾನ್ನಿಧ್ಯದಿಂದ ಬದುಕು ಸಾರ್ಥಕ
Team Udayavani, Nov 20, 2021, 10:45 AM IST
ಸೊರಬ: ಗುರು ಸಾನ್ನಿಧ್ಯದಿಂದ ಮಾತ್ರ ಬದುಕುಸಾರ್ಥಕವಾಗಲು ಸಾಧ್ಯವಿದೆ. ಮೊಬೈಲ್‌ವ್ಯಾಮೋಹಕ್ಕೆ ಒಳಗಾಗಿ ಗುರು-ಹಿರಿಯರನ್ನು ಮರೆಯುತ್ತಿರುವ ಕಾಲಘಟ್ಟದಲ್ಲಿ ಬಸವಾದಿ ಶರಣರ ವಚನ ಸಂದೇಶಗಳುಉತ್ತಮ ವ್ಯಕ್ತಿಯಾಗಿ ನಿರ್ಮಾಣವಾಗಲುಹಾಗೂ ಮನಸ್ಸಿನ ಶುದ್ಧೀಕರಣಕ್ಕೆಮಾರ್ಗದರ್ಶನವಾಗಿವೆ ಎಂದು ಜಡೆ ಸಂಸ್ಥಾನಮಠದ ಉತ್ತರಾಧಿ ಕಾರಿ ಶ್ರೀ ರುದ್ರದೇವರು ತಿಳಿಸಿದರು.
ಪಟ್ಟಣದ ಮುರುಘಾಮಠದಸಭಾಂಗಣದಲ್ಲಿ ಕಾರ್ತಿಕ ಮಾಸದ ಗೌರಿಹುಣ್ಣಿಮೆ ಹಾಗೂ 183ನೇ ಮಾಸಿಕಶಿವಾನುಭವ ಗೋಷ್ಠಿಯಲ್ಲಿ ಅವರುಉಪನ್ಯಾಸ ನೀಡಿದರು.ಆಧುನಿಕತೆ ಭರಾಟೆಯಲ್ಲಿ ತಂತ್ರಜ್ಞಾನಗಳಬಳಕೆ ಹೆಚ್ಚುತ್ತಿದ್ದು, ಈ ನಡುವೆ ಬದುಕುಸಾರ್ಥಕವಾಗಲು ಗುರುವಿನ ಮಾರ್ಗದರ್ಶನಮತ್ತು ಆಶೀರ್ವಾದ ಅಗತ್ಯ. ಆಡಂಬರದಬದುಕು ಸಲ್ಲದು. ಬದುಕಿಗೆ ಆಹಾರ ಮತ್ತುಆರೋಗ್ಯ ಮುಖ್ಯವಾಗಿದೆ.
ಜೀವಿತಾವಧಿಯಲ್ಲಿ ಸಮಾಜದಲ್ಲಿ ಸತ್ಕಾರ್ಯಗಳಲ್ಲಿತೊಡಗಿಕೊಳ್ಳಬೇಕು ಎಂದರು.ಜನಸಂಗ್ರಾಮ ಪರಿಷತ್ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಮಾತನಾಡಿ, ಸದೃಢಸಮಾಜದ ನಿರ್ಮಾಣದಲ್ಲಿ ಮಠ-ಮಾನ್ಯಗಳಪಾತ್ರ ಮಹತ್ವದ್ದಾಗಿದೆ. ಜಡೆ ಸಂಸ್ಥಾನ ಮಠಹಾಗೂ ಸೊರಬ ಮುರುಘಾಮಠ ಸರ್ವಸಮುದಾಯದ ಭಕ್ತರನ್ನು ಹೊಂದಿದ್ದು,ಶ್ರೀಗಳು ಸಮಾಜ ಸನ್ಮಾರ್ಗದಲ್ಲಿ ನಡೆಯಲುದಾರಿದೀಪವಾಗಿದ್ದಾರೆ ಎಂದರು.
ಜಡೆ ಸಂಸ್ಥಾನಮಠ ಹಾಗೂ ಮುರುಘಾಮಠದ ಶ್ರೀ ಡಾ|ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಅಕ್ಕನ ಬಳಗದ ಜಯಮಾಲಾ ಅಣ್ಣಾಜಿಗೌಡ, ವೀರಶೈವ ಲಿಂಗಾಯತ ಸಂಘಟನಾವೇದಿಕೆಯ ಜಿಲ್ಲಾಧ್ಯಕ್ಷ ಸಿ.ಪಿ. ಈರೇಶ್ ಗೌಡ,ಜೆಸಿಐ ಅಧ್ಯಕ್ಷೆ ಗೀತಾ ನಿಂಗಪ್ಪ, ಜಿಪಂ ಮಾಜಿಸದಸ್ಯರಾದ ಪಾಣಿ ರಾಜಪ್ಪ, ದೇವಕಿ ಪಾಣಿ,ಮುರುಘಾಮಠದ ಕಾರ್ಯದರ್ಶಿ ಡಿ.ಶಿವಯೋಗಿ, ಪ್ರಮುಖರಾದ ಶ್ರೀಧರ ಮೂರ್ತಿನಡಹಳ್ಳಿ ಸೇರಿದಂತೆ ಇತರರಿದ್ದರು. ಅಕ್ಕನಬಳಗದವರು ವಚನಗಳನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.