ಮಳೆ: ಅಭಿವೃದ್ದಿ ಚಟುವಟಿಕೆಗೆ ಬ್ರೇಕ್
Team Udayavani, Nov 20, 2021, 1:23 PM IST
ಬೆಂಗಳೂರು: ಸತತ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯು ರಾಜಧಾನಿಯ ಜನಜೀವನ ಅಸ್ತವ್ಯಸ್ಥಗೊಳಿಸಿರುವುದು ಮಾತ್ರವಲ್ಲದೇ, ಅಭಿವೃದ್ಧಿ ಚಟುವಟಿಕೆಗಳಿಗೆ ಬ್ರೇಕ್ ಹಾಕಿದೆ.
ಕಳೆದ 2-3 ದಿನಗಳಿಂದ ನಗರ ದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ನಗರದ ಅಭಿವೃದ್ಧಿ ಸ್ತಂಭಗಳಾದ ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಬಿಡಿಎ ಹಾಗೂ ಬಿಎಂಆರ್‌ಸಿಎಲ್ ನಿಂದ ರಸ್ತೆ, ಮೇಲ್ಸೇತುವೆ, ನೀರಿನ ಕೊಳವೆ ಅಳವಡಿಕೆ, ಮೆಟ್ರೋ ನಿಲ್ದಾಣ, ವಸತಿ ಗೃಹ ನಿರ್ಮಾ ಣದಂತಹ ನೂರಾರು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು. ನಿರಂತರ ಮಳೆಯಿಂದ ಕಾಮಗಾರಿ ಸ್ಥಳದಲ್ಲಿ ಸಾಕಷ್ಟು ನೀರು ನಿಲ್ಲುತ್ತಿದೆ. ಅಗೆದ ಗುಂಡಿಗಳಲ್ಲಿ ನೀರು ತುಂಬುತ್ತಿದೆ.
ವೆಲ್ಡಿಂಗ್, ಗಾರೆ, ಪೇಟಿಂಗ್ ಕೆಲಸಗಳಿಗೆ ಮಳೆ ನೀರು ಬಿದ್ದು ಅಡಚಣೆಯಾಗುತ್ತಿದೆ. ಅಲ್ಲದೆ, ಮಳೆಯಿಂದ ಕಾರ್ಮಿಕರು ಕೂಡಾ ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬಹುತೇಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಳೆದ ಸೋಮವಾರದಿಂದಲೇ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಅದರಲ್ಲೂ ಕಳೆದ ಎರಡು ದಿನಗಳಿಂದ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ಆಯಾ ಸಂಸ್ಥೆಗಳ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸುರತ್ಕಲ್ ಟೋಲ್‌ಗೇಟ್ : ಭರವಸೆಯ ಮಹಾಪೂರಗಳ ನಡುವೆ ಮತ್ತೆ ವಿಸ್ತರಣೆ ಭಾಗ್ಯ
ನಗರದಲ್ಲಿ ಸಾವಿರಾರು ಖಾಸಗಿ ಕಟ್ಟಡಗಳು, ಮನೆಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗೆ ಕೂಡಾ ಮಳೆ ತೊಡಕಾಗಿದೆ. ಬಹುತೇಕ ಕಟ್ಟಡ ನಿರ್ಮಾಣ ಸಂಸ್ಥೆಗಳು ಒಳಾಂಗಣ ಕಾಮಗಾರಿಗಳಿಗೆ ಮೊರೆ ಹೋಗಿದ್ದಾರೆ. ಹಲವು ಕಂಪನಿಗಳು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಳೆ ನಿಂತ ನಂತರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
“ಮಳೆಯಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆಯೂ ಕಷ್ಟ ಸಾಧ್ಯವಾಗಿದ್ದು, ಕಾಮ ಗಾರಿಯ ಗುಣ ಮಟ್ಟಕ್ಕೆ ಹಾನಿಯಾಗುತ್ತದೆ. ಹೀಗಾಗಿ ಮಳೆ ಕಡಿಮೆಯಾಗುವವರೆಗೂ ಕಾಮಗಾರಿಗಳನ್ನು ಮುಂದೂಡಲಾಗಿದೆ’ ಎನ್ನುತ್ತಾರೆ ಖಾಸಗಿ ಸಂಸ್ಥೆ ಎಂಜಿನಿಯರ್ ಸುಹಾಸ್‌ನಾಯಕ್.
ಮುಂಜಾಗ್ರತಾ ಕ್ರಮವಾಗಿಯೂ ಸ್ಥಗಿತ
ನಿರಂತರ ಮಳೆಯಿಂದ ಮಣ್ಣು ಸಡಿಲವಾಗಿರುತ್ತದೆ. ದೊಡ್ಡ ಕಟ್ಟಡ, ಸೇತುವೆ ಕಾಮಗಾರಿಗಳಲ್ಲಿ ಮಣ್ಣು, ಗೋಡೆ ಕುಸಿತ ಉಂಟಾಗುವ ಸಾಧ್ಯತೆಗಳಿರುತ್ತದೆ. ವಿದ್ಯುತ್ ಅವಘಡಗಳು ಉಂಟಾಗುತ್ತವೆ. ಇದರಿಂದ ಕಾರ್ಮಿಕರು ಅಪಾಯಕ್ಕೆ ಸಿಲುಕುತ್ತಾರೆ. ಹೀಗಾಗಿಯೇ, ಹಲವು ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಕಾಮಗಾರಿಗಳನ್ನು ತಾತ್ಕಾಲಿಕ ನಿಲ್ಲಿಸಲಾಗಿದೆ. ಸುರಕ್ಷಿತ ಸ್ಥಳದಲ್ಲಿರುವ ಮತ್ತು ಒಳಾಂಗಣ ಕಾಮಗಾರಿಗಳು ನಡೆಸಲಾಗುತ್ತಿದೆ ಎನ್ನು ತ್ತಾರೆ ಬಿಬಿಎಂಪಿ, ಬಿಡಿಎ ಎಂಜಿನಿಯರ್‌ಗಳು.
ನಷ್ಟ ಇಲ್ಲ; ಮುಕ್ತಾಯ ವಿಳಂಬ
ಮಳೆ ಯಿಂದ ಸ್ಥಗಿತಗೊಂಡ ಕಾಮಗಾರಿಗಳಿಂದ ಇಲಾಖೆಗಳಿಗೆ ಹೆಚ್ಚಿನ ನಷ್ಟವಿಲ್ಲ. ಆದರೆ, ಕಾಮಗಾರಿಗಳು ನಿಗದಿತ ಸಮಯಕ್ಕೆ ಮುಕ್ತಾಯವಾಗುವುದಿಲ್ಲ. ರಸ್ತೆ ಗುಂಡಿ ವಿಚಾರದಲ್ಲಿ ಮಾತ್ರ ಮಳೆ ಹೆಚ್ಚಾದಷ್ಟು ಗುಂಡಿಗಳ ಸಂಖ್ಯೆ ಹೆಚ್ಚಳವಾಗುತ್ತದೆ ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.