ಮೋಡ-ಮಳೆ ಕಾಟ; ದ್ರಾಕ್ಷಿ ಬೆಳೆಗಾರರಿಗೆ ಸಂಕಷ್ಟ
ತಕ್ಷಣ ಪರೀಕ್ಷಿಸಿ ಸರಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಆಸರೆಯಾಗಬೇಕು.
Team Udayavani, Nov 20, 2021, 4:45 PM IST
ಐಗಳಿ: ಅಥಣಿ ತಾಲೂಕಿನಲ್ಲಿ ದ್ರಾಕ್ಷಿ ಪಡಗಳು ಮೊಗ್ಗು, ಹೂವು ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದು, ಮಳೆಯಿಂದಾಗಿ ದ್ರಾಕ್ಷಿ ಕಾಳುಗಳು ಉದುರುತ್ತಿವೆ. ಅಲ್ಲದೆ ದಾವಣಿ ರೋಗ ಬಂದು ಪಡಗಳೇ ಹಾಳಾಗುತ್ತಿರುವುದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಥಣಿ ತಾಲೂಕಿನ 4500 ಹೆಕ್ಟರ್ ಪ್ರದೇಶದಲ್ಲಿನ ಬಹುತೇಕ ಎಲ್ಲ ಬೆಳೆಗಾರರು ಅಕ್ಟೋಬರ್ ತಿಂಗಳಲ್ಲಿ ಚಾಟ್ನಿ ಮಾಡಿದ್ದು ಈಗ 26 ರಿಂದ 30 ದಿನಗಳಾಗಿವೆ.
ಎಲ್ಲ ಪಡಗಳು ಹೆಚ್ಚಾಗಿ ಹೂವು ಬಿಡುವ ಹಂತದಲ್ಲಿದ್ದು, ಮೋಡ ಮುಸುಕಿದ ವಾತಾವರಣ, ಕಳೆದ 4-5 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೊನೆಯಲ್ಲಿ ನೀರು ನಿಂತು ಕಾಳುಗಳು ಉದುರಿ ಕೆಲವು ಪಡಗಳಲ್ಲಿ ಸಂಪೂರ್ಣ ಕಾಳುಗಳು ಖಾಲಿಯಾಗುತ್ತಿವೆ. ತಾಲೂಕಿನ ಬಡಚಿ, ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಅಡಹಳ್ಳಟ್ಟಿ, ಕೋಹಳ್ಳಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ದ್ರಾಕ್ಷಿ ಬೆಳೆಗೆ ರೋಗ ತಗಲಿದೆ.
ಇದು ಬೆಳೆಗಾರರ ನಿದ್ದೆಗೆಡಿಸಿದ್ದು ಇಲಾಖೆ ಸೂಕ್ತ ಸಲಹೆ ಮತ್ತು ಪರಿಹಾರೋಪಾಯ ನೀಡಿ ಬೆಳೆಗಾರರ ಬದುಕಿಗೆ ಆಸರೆಯಾಗಬೇಕು ಎಂದು ಪ್ರಗತಿಪರ ದ್ರಾಕ್ಷಿ ಬೆಳೆಗಾರರಾದ ನೂರಅಹ್ಮದ ಡೊಂಗರಗಾಂವ, ಸಿ ಎಸ್ ನೇಮಗೌಡ, ಜಿ ಎಸ್ ಬಿರಾದಾರ, ಅಪ್ಪಾಸಾಬ ಮಾಕಾಣಿ, ಮೊದಲಾದವರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣವಿರುವುದರಿಂದ ಗೊನೆಗಳಿಗೆ ಬಹುರೋಗ ತಗುಲಿದ್ದು ಕಾಳು ಉದುರುತ್ತಿವೆ. ಇದೇ ವಾತಾವರಣ ಮುಂದುವರೆದಲ್ಲಿ ಫ್ಲಾವರಿಂಗ್ ಹಂತದಲ್ಲಿರುವ ಬಹುತೇಕ ಪಡಗಳು ಗೊನೆ ಕಳೆದುಕೊಳ್ಳಲಿವೆ.
ಅಕ್ಷಯ ಉಪಾಧ್ಯಾಯ,
ತೋಟಗಾರಿಕೆ ಇಲಾಖೆ ಅಧಿಕಾರಿ, ತೆಲಸಂಗ ಹೋಬಳಿ. ಈಗ ಬಹುತೇಕ ದ್ರಾಕ್ಷಿ ಪಡಗಳು ಮಗ್ಗಿ ಮತ್ತು ಹೂವಿನ ಹಂತದಲಿದ್ದು ಪ್ರಸಕ್ತ ಹವಾಮಾನದಿಂದಾಗಿ ಇವುಗಳಿಗೆ ಡೌನಿ ಮತ್ತು ಕೊಳೆ ರೋಗ ಬಂದು ಕಾಳು ಉದರುತ್ತಿವೆ. ಇದರಿಂದ ಎಲ್ಲ ಬೆಳೆಗಾರರು ಸಂಪೂರ್ಣ ಹಾನಿ ಅನುಭವಿಸುತ್ತಿದ್ದು, ಇಲಾಖೆ ಅಧಿಕಾರಿಗಳು ತಕ್ಷಣ ಪರೀಕ್ಷಿಸಿ ಸರಕಾರಕ್ಕೆ ವರದಿ ನೀಡಿ ಬೆಳೆಗಾರರಿಗೆ ಆಸರೆಯಾಗಬೇಕು.
ಶಹಜಹಾನ ಡೊಂಗರಗಾಂವ
ಮಾಜಿ ಶಾಸಕರು ಹಾಗು ಪ್ರಗತಿಪರ ದ್ರಾಕ್ಷಿ ಬೆಳೆಗಾರರು, ಅಥಣಿ. ಕಳೆದ ನಾಲ್ಕಾರು ವರ್ಷಗಳ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬಹಳಷ್ಟು ಹಾನಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿದ್ದು ಈ ವರ್ಷವೂ ಈ ವಾತಾವರಣದಿಂದ ಕಾಳು ಉದರಿ ಹೋಗುತ್ತಿವೆ. ಇಲಾಖೆ ಹಾಗೂ ಸರಕಾರ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗೆ ಬರಬೇಕು.
ಆರ್ ಆರ್ ತೆಲಸಂಗ. ದ್ರಾಕ್ಷಿ ಬೆಳೆಗಾರ, ಐಗಳಿ.
ತಾಲೂಕಿನಲ್ಲಿ ಕಳೆದೆರಡು ದಿನಗಳ ಪ್ರತಿಕೂಲ ಹವಾಮಾನದಿಂದ ದ್ರಾಕ್ಷಿ ಗಿಡದಲ್ಲಿನ ಗೊನೆಗಳಿಗೆ ರೋಗ ಬಾಧೆಯಾಗಿ ಕಾಳು ಉದುರಲು ಪ್ರಾರಂಭವಾಗಿದ್ದು, ಇಂದಿನಿಂದಲೇ ಸರ್ವೇ ಮಾಡಿ ಸಮರ್ಗ ಮಾಹಿತಿಯನ್ನ ತಜ್ಞರಿಗೆ ಮತ್ತು ಇಲಾಖೆ ಮೇಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ.
ಶ್ವೇತಾ ಹಾಡ್ಕರ, ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ, ಅಥಣಿ.
*ಸುಭಾಸ ಚಮಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.