ಅಕಾಲಿಕ ಮಳೆಗೆ 892 ಹೆಕ್ಟೇರ್ ಬೆಳೆ ನಾಶ
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭತ್ತ ಬೆಳೆದ ರೈತರು ನೋವು ಅನುಭವಿಸುವಂತಾಗಿದೆ.
Team Udayavani, Nov 20, 2021, 6:22 PM IST
ರಾಣಿಬೆನ್ನೂರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಗೆ ಸುಮಾರು 892.3 ಹೆಕ್ಟೇರ್ ನಲ್ಲಿ ಬೆಳೆದಿದ್ದ ಭತ್ತ, ಜೋಳ, ಸೂರ್ಯಕಾಂತಿ, ಗೋವಿನಜೋಳ, ಹತ್ತಿ, ಶೇಂಗಾ, ಅವರೆ ಸೇರಿದಂತೆ ಮತ್ತಿತರ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿದ್ದು, ಸುಮಾರ 1.25 ಕೋಟಿಗೂ ಅಧಿಕ ನಷ್ಟವಾಗಿದೆ. ಇದರಿಂದ, ಅನ್ನದಾತರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೊಯ್ಲಿಗೆ ಬಂದಿದ್ದ ಭತ್ತ ಸಂಪೂರ್ಣ ನೆಲಕ್ಕಚ್ಚಿದೆ. ಕಟಾವು ಮಾಡಿದ ಭತ್ತದ ರಾಶಿಗಳು ಮಳೆ ನೀರಿಗೆ ತೊಯ್ದು ಮೊಳಕೆಯೊಡದಿವೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಭತ್ತ ಬೆಳೆದ ರೈತರು ನೋವು ಅನುಭವಿಸುವಂತಾಗಿದೆ.
ತಾಲೂಕಿನಲ್ಲಿ ಒಟ್ಟು 815 ಹೆಕ್ಟೇರ್‌ನಲ್ಲಿ ಭತ್ತ, 7.7 ಹೆಕ್ಟೇರ್‌ನಲ್ಲಿ ಜೋಳ, 18.8ಹೆಕ್ಟೇರ್ ನಲ್ಲಿ ಸೂರ್ಯಕಾಂತಿ, 30.3ಹೆಕ್ಟೇರ್‌ನಲ್ಲಿ ಗೋವಿನಜೋಳ, 6.8ಹೆಕ್ಟೇರ್‌ನಲ್ಲಿ ಶೇಂಗಾ, 5.7ಹೆಕ್ಟೇರ್‌ನಲ್ಲಿ ಅವರೆ, 8.0ಹೆಕ್ಟೇರ್‌ನಲ್ಲಿ ಹತ್ತಿ ಸೇರಿ 892.3ಹೆಕ್ಟೇರ್‌ನಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನೆಲಕ್ಕಚ್ಚಿ ಸುಮಾರ 1.25 ಕೋಟಿಗೂ ಅಧಿ ಕ ನಷ್ಟವಾಗಿದೆ. ಹಾನಿಗೊಳಗಾದ ಜಮೀನುಗಳಿಗೆ ಶುಕ್ರವಾರ ಕಂದಾಯ ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ನಡೆಸಿದರು.
ತಾಲೂಕಿನ ಕವಲೆತ್ತು, ಕೋಡಿಯಾಲ, ಮುದೆನೂರ, ನಾಗೇನಹಳ್ಳಿ, ಹೊಳೆಆನ್ವೇರಿ, ಕೋಟಿಹಾಳ, ತುಮ್ಮಿನಕಟ್ಟಿ, ಪತ್ಯಾಪುರ, ಗುಡಗೂರ, ಮೈದೂರ, ಚಿಕ್ಕಕುರವತ್ತಿ, ಚೌಡಯ್ಯದಾನಪುರ, ಗಂಗಾಪುರ, ಕಾಕೋಳ, ಹೂಲಿಹಳ್ಳಿ, ಕರೂರು, ಚಳಗೇರಿ, ಮಾಕನೂರ, ನದಿಹರಳಳ್ಳಿ, ಮೆಡ್ಲೆರಿ, ಐರಣಿ, ಸೋಮಲಾಪುರ, ಹಿರೇಬಿದರಿ, ಕೋಣನತಂಬಿಗಿ, ಉದಗಟ್ಟಿ, ಹೀಲದಹಳ್ಳಿ, ಬೇಲೂರ, ಕೆರೆಮಲ್ಲಾಪುರ, ಚಿಕ್ಕಹರಳಳ್ಳಿ, ದೇವರಗುಡ್ಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುರಿದ ಅಕಾಲಿಕ ಮಳೆಗೆ 892.3 ಹೆಕ್ಟೇರ್ ಬೆಳೆ ನಷ್ಟವಾಗಿ ಸುಮಾರ 1.25 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹೀತೇಂದ್ರ ಗೌಡಪ್ಪಳವರ “ಉದಯವಾಣಿ’ಗೆ ತಿಳಿಸಿದ್ದಾರೆ.
ತಾಲೂಕಿನ ಮಾಕನೂರ ಗ್ರಾಮದಲ್ಲಿ ಬತ್ತದ ಬೆಳೆ ಸಂಪೂರ್ಣ ನೆಲಕಚ್ಚಿದ್ದು, ನಷ್ಟ ಅನುಭವಿಸಿದ ರೈತರು ಭತ್ತದ ಬೆಳೆಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ನಗರದ 1ಮನೆ, ಗ್ರಾಮೀಣ ಭಾಗದ ಇಟಗಿ 1, ಕುದರಿಹಾಳ ಗ್ರಾಮದ 1, ದೇವರಗುಡ್ಡದ 2, ಕವಲೆತ್ತ ಗ್ರಾಮದ 2 ಮನೆ ಸೇರಿ ಒಟ್ಟು ಸುಮಾರು 7 ಮನೆಗಳು ಭಾಗಶಃ ಬಿದ್ದಿರುವ ವರದಿಯಾಗಿದೆ. ಇನ್ನೂ ಮಳೆ ಮುಂದುವರೆದಿದ್ದು, ಇದರ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಶಂಕರ ಜಿ.ಎಸ್., ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.