ಪಿಎಂ ಮೋದಿ – ಸಿಎಂ ಯೋಗಿ ಫೋಟೋ ವೈರಲ್: ಪ್ರತಿಪಕ್ಷಗಳ ಟಾಂಗ್!
Team Udayavani, Nov 21, 2021, 2:59 PM IST
ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಭಾವಗೀತಾತ್ಮಕ ಮೂಡ್‌ನಲ್ಲಿದ್ದರು, ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತವಾಗಿ ನಡೆಯುತ್ತಿರುವ ಫೋಟೋಗಳನ್ನು ಕಾವ್ಯಾತ್ಮಕ ಬರಹದೊಂದಿಗೆ ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.
हम निकल पड़े हैं प्रण करके
अपना तन-मन अर्पण करके
जिद है एक सूर्य उगाना है
अम्बर से ऊँचा जाना है
एक भारत नया बनाना है pic.twitter.com/0uH4JDdPJE— Yogi Adityanath (@myogiadityanath) November 21, 2021
ಟ್ವಿಟರ್‌ನಲ್ಲಿ ಯೋಗಿ ಆದಿತ್ಯನಾಥ್ ಅವರು ನವ ಭಾರತ ನಿರ್ಮಾಣದ ಕುರಿತು ಚುಟುಕು ಕವನವನ್ನು ಪೋಸ್ಟ್ ಮಾಡಿದ್ದಾರೆ, ಪ್ರಧಾನಿ ಮೋದಿ ತಮ್ಮ ಭುಜದ ಮೇಲೆ ಕೈಯಿಟ್ಟುಕೊಂಡು ಮಾತನಾಡುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
“ನಾವು ಪ್ರತಿಜ್ಞೆಯೊಂದಿಗೆ ಹೊರಟಿದ್ದೇವೆ, ಅದಕ್ಕಾಗಿ ನಮ್ಮ ದೇಹ ಮತ್ತು ಆತ್ಮವನ್ನು ಸಮರ್ಪಿಸಿದ್ದೇವೆ, ಸೂರ್ಯನು ಉದಯಿಸಲು, ಆಕಾಶಕ್ಕಿಂತ ಎತ್ತರಕ್ಕೆ ಹೋಗುವಂತೆ ಮತ್ತು ನವ ಭಾರತವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ” ಎಂದು ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
सुनो, तुमसे न हो पायेगा!
यूपी में तो अखिलेश ही आएगा!#बाइस_में_बाइसिकल pic.twitter.com/baqWoUwJA3
— Sunil Singh Yadav (@sunilyadv_unnao) November 21, 2021
ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಕೈ ಕೈ ಹಿಡಿದು ನಡೆಯುತ್ತಿರುವ ಚಿತ್ರಗಳಿಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ, ಲಕ್ನೋ ಮತ್ತು ಯುಪಿಯಲ್ಲಿ ಎಸ್‌ಪಿ ಸರ್ಕಾರ ಮಾಡಿದ ಕೆಲಸವನ್ನು ನೋಡಿದ ನಂತರ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳಿಗೆ ‘ತುಮ್ಸೇ ನಾ ಹೋ’ (ನಿಮ್ಮಿಂದ ಇದು ಆಗದು) ಪಾಯೇಗಾ, ಆಯೇಂಗೇ ತೂ ಅಖಿಲೇಶ್ ಹಿ’ (ನೀವು ಮತ್ತೆ ಬಂದರೆ ಅಲ್ಲಿ ನಿಮ್ಮನ್ನು ಮೀರಿ ಅಖಿಲೇಶ್ ಇದ್ದಾರೆ) ಎಂದು ತಿರುಗೇಟು ನೀಡಿದ್ದಾರೆ. ಹೀಗೆ ಯುಪಿ ಸಿಎಂ ಹಂಚಿಕೊಂಡ ಫೋಟೋಗೆ ತಮ್ಮದೇ ಆದ ಶೀರ್ಷಿಕೆ ನೀಡಿ ಅನುರಾಗ್ ಟ್ವೀಟ್ ಮಾಡಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಭೇಟಿಯಲ್ಲಿದ್ದಾರೆ. ಶುಕ್ರವಾರ ಝಾನ್ಸಿಯಲ್ಲಿ 3,425 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಮರುದಿನ, ಅವರು ಲಕ್ನೋದಲ್ಲಿ ಡಿಜಿಪಿಗಳ ಸಮ್ಮೇಳನದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Puttur: ಇದು ಅಜಿತರ ಸಾಹಸ : ರಬ್ಬರ್ ತೋಟದಲ್ಲಿ ಕಾಫಿ ಘಮ ಘಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.