ಸತ್ತ ವ್ಯಕ್ತಿ ಬದುಕಿದ ! ಶವಾಗಾರದ ಫ್ರೀಜರ್ನಲ್ಲಿ 7 ಗಂಟೆಗಳ ಕಾಲ ಇದ್ದ ವ್ಯಕ್ತಿ
Team Udayavani, Nov 21, 2021, 7:22 PM IST
- ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ : ಸಿದ್ದರಾಮಯ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
- ಅಸ್ಸಾಂ ನಲ್ಲಿ ಮೊಳಗಿದ ಕನ್ನಡದ ಎನ್ಇಪಿ ಗೀತೆ
ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ‘ಈಶಾನ್ಯ ರಾಜ್ಯಗಳ ಶೈಕ್ಷಣಿಕ ಸಮಾವೇಶ ನಡೆಯಿತು. ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಿ ‘ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಗೊಳಿಸಿದೆ. ಈ ವೇಳೇ ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪಿ ಜನಜಾಗೃತಿಗಾಗಿ ಕನ್ನಡದಲ್ಲಿ ರಚಿಸಿರುವ ಗೀತೆಯನ್ನು ಅಲ್ಲಿ ಪ್ರಸಾರ ಮಾಡಿದರು.
- ಮೋದಿ – ಯೋಗಿ ಫೋಟೋ ವೈರಲ್
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಮಾಡಿರುವ ಟ್ವೀಟ್ ಭಾರಿ ವೈರಲ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆಪ್ತವಾಗಿ ನಡೆಯುತ್ತಿರುವ ಫೋಟೋಗಳನ್ನು ಕಾವ್ಯಾತ್ಮಕ ಬರಹದೊಂದಿಗೆ ಯೋಗಿ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.
- ಇಮ್ರಾನ್ ಖಾನ್ ನನ್ನ ಅಣ್ಣನಿದ್ದಂತೆ : ನವಜೋತ್ ಸಿಂಗ್ ಸಿಧು
ಪಂಜಾಬ್ನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಪಾಕ್ಗೆ ತೆರಳಿದ್ದರು. ಅಲ್ಲಿನ ಅಧಿಕಾರಿಗಳು ವಿಶೇಷವಾಗಿ ಅವರನ್ನು ಬರಮಾಡಿಕೊಂಡಿದ್ದಾರೆ. ಆ ವೇಳೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣನಿದ್ದಂತೆ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಈ ಹೇಳಿಕೆ ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
- ಸತ್ತ ವ್ಯಕ್ತಿ ಜೀವಂತ!! ; ಶವಾಗಾರದ ಫ್ರೀಜರ್ನಲ್ಲಿ 7 ಗಂಟೆಗಳ ಕಾಲ ಇರಿಸಿದರು
ಮೊರಾದಾಬಾದ್ : ಉತ್ತರಪ್ರದೇಶದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, 40 ವರ್ಷದ ವ್ಯಕ್ತಿ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿ, ಶವಾಗಾರದ ಫ್ರೀಜರ್ನಲ್ಲಿ 7 ಗಂಟೆಗಳ ಕಾಲ ಇರಿಸಿ ಇನ್ನೇನು ಮರಣೋತ್ತರ ಪರೀಕ್ಷೆ ಆರಂಭಿಸಬೇಕೆನ್ನುವಷ್ಟರಲ್ಲಿ ಆತ ಜೀವಂತವಾಗಿ ಕಂಡು ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
- ಇಂದೋರ್ಗೆ ಸತತ 5ನೇ ಬಾರಿಗೆ ಸ್ವಚ್ಛತೆಯ ಗರಿ!
ಸತತ 5ನೇ ಬಾರಿಯೂ ಮಧ್ಯಪ್ರದೇಶದ ಇಂದೋರ್ ನಗರವು ದೇಶದಲ್ಲೇ “ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗಿದೆ. ದಿಲ್ಲಿಯ ವಿಜ್ಞಾನ ಭವನದಲ್ಲಿ ಶನಿವಾರ “ಸ್ವಚ್ಛ ಅಮೃತ ಮಹೋತ್ಸವ’ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದೋರ್ ಅನ್ನು “ಸ್ವಚ್ಛತಾ ಕಾ ತಾಜ್’ ಎಂದು ಬಣ್ಣಿಸಿದ್ದಾರೆ.
- ಅಂತಾರಾಷ್ಟ್ರೀಯ ಚಿತ್ರೋತ್ಸವ
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಪ್ರಮುಖ ವಿಭಾಗವಾದ ಭಾರತೀಯ ಪನೋರಮಾದ ಉದ್ಘಾಟನೆ ರವಿವಾರ ನೆರವೇರಿತು. ಸಿನಿಮಾ ಮಂದಿರದ ಎದುರು ಒಂದಿಷ್ಟು ಸಿನಿಮಾ ಪ್ರೇಮಿಗಳು ಕಂಡು ಬಂದರು.
- ನಿಮ್ಮ ಶಾಲೆಗೂ ಭೇಟಿ ನೀಡಬಹುದು ಟೋಕಿಯೊ ಒಲಿಂಪಿಕ್ಸ್ ಸಾಧಕರು!
ಭಾರತೀಯ ಒಲಿಂಪಿಕ್ಸ್ ತಂಡದ ಎಲ್ಲ ಕ್ರೀಡಾಪಟುಗಳು 2023ರ ಆಗಸ್ಟ್ 15ರೊಳಗೆ 75 ಶಾಲೆಗಳಿಗೆ ಭೇಟಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಮನವಿ ಮಾಡಿದ್ದರು. ಅದರಂತೆ ಒಟ್ಟು 75 ಶಾಲೆಗಳಿಗೆ 75 ಕ್ರೀಡಾಪಟುಗಳು ಮುಂದಿನ ಎರಡು ವರ್ಷಗಳಲ್ಲಿ ಬೇಟಿ ನೀಡಲಿದ್ದಾರೆ. ಫಿಟ್ ಇಂಡಿಯಾ ಮಿಷನ್’ ಅಭಿಯಾನದ ವ್ಯಾಪ್ತಿಯಲ್ಲಿ ಈ ಭೇಟಿಯಾಗಲಿದೆ.