ಈಡನ್‌ನಲ್ಲಿ ಈಡೇರಿತು ಕ್ಲೀನ್‌ ಸ್ವೀಪ್‌ ಯೋಜನೆ


Team Udayavani, Nov 21, 2021, 11:07 PM IST

ಕರ್ನಾಟಕ,ತಮಿಳುನಾಡು,ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ, ಟಿ20′ ಕ್ರಿಕೆಟ್‌,Karnataka, Tamil Nadu, Syed Mushtaq Ali Trophy, T20 Cricket

ಕೋಲ್ಕತಾ: ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ಭಾರತದ ಕ್ಲೀನ್‌ ಸ್ವೀಪ್‌ ಯೋಜನೆಯೊಂದು ದೊಡ್ಡ ಮಟ್ಟದಲ್ಲೇ ಈಡೇರಿದೆ.

ಪ್ರವಾಸಿ ನ್ಯೂಜಿಲ್ಯಾಂಡನ್ನು 73 ರನ್ನುಗಳ ಭಾರೀ ಅಂತರದಿಂದ ಮಣಿಸಿ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ. ಇದರೊಂದಿಗೆ ರೋಹಿತ್‌-ರಾಹುಲ್‌ ಜೋಡಿಯ ನೂತನ ಕಾಂಬಿನೇಶನ್‌ಗೆ ಸ್ಮರಣೀಯ ಆರಂಭವೊಂದು ಲಭಿಸಿದಂತಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟಿಗೆ 184 ರನ್‌ ಪೇರಿಸಿ ಸವಾಲೊಡ್ಡಿದರೆ, ನ್ಯೂಜಿಲ್ಯಾಂಡ್‌ ಆತಿಥೇಯರ ಘಾತಕ ಬೌಲಿಂಗಿಗೆ ದಿಕ್ಕು ತಪ್ಪಿ 17.2 ಓವರ್‌ಗಳಲ್ಲಿ 111ಕ್ಕೆ ಆಲೌಟ್‌ ಆಯಿತು.

ಅಕ್ಷರ್‌ ಪಟೇಲ್‌ ಅಮೋಘ ಬೌಲಿಂಗ್‌ ನಡೆಸಿ ಆರಂಭದಲ್ಲೇ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿದರು. ಪವರ್‌ ಪ್ಲೇ ಒಳಗಾಗಿ ಪಟೇಲ್‌ ಮೂವರನ್ನು ಪೆವಿಲಿಯನ್ನಿಗೆ ಕಳುಹಿಸಿದರು. ಅವರ ಸಾಧನೆ 9ಕ್ಕೆ 3 ವಿಕೆಟ್‌. ಆದರೆ ಇನ್ನೊಂದೆಡೆ ಬೇರೂರಿ ನಿಂತಿದ್ದ ಮಾರ್ಟಿನ್‌ ಗಪ್ಟಿಲ್‌ ಅಪಾಯಕಾರಿಯಾಗಿ ಬೆಳೆಯುತ್ತಿದ್ದರು. 11ನೇ ಓವರ್‌ನಲ್ಲಿ ಚಹಲ್‌ ಈ ಬಹುಮೂಲ್ಯ ವಿಕೆಟ್‌ ಉರುಳಿಸುವುದರೊಂದಿಗೆ ಕಿವೀಸ್‌ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಗಪ್ಟಿಲ್‌ 36 ಎಸೆತ ಎದುರಿಸಿ 51 ರನ್‌ ಬಾರಿಸಿದರು (4 ಬೌಂಡರಿ, 4 ಸಿಕ್ಸರ್‌).

ಹರ್ಷಲ್‌ ಪಟೇಲ್‌ 2 ವಿಕೆಟ್‌ ಉರುಳಿಸಿದರು. ಸರಣಿಯಲ್ಲಿ ಇದೇ ಮೊದಲ ಸಲ ಬೌಲಿಂಗ್‌ ಅವಕಾಶ ಪಡೆದ ವೆಂಕಟೇಶ್‌ ಅಯ್ಯರ್‌ 3 ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ ಒಂದು ವಿಕೆಟ್‌ ಸಂಪಾದಿಸಿದರು.

ಭಾರತ ಹ್ಯಾಟ್ರಿಕ್‌ ಟಾಸ್‌
ಸತತ 3ನೇ ಮುಖಾಮುಖಿಯಲ್ಲೂ ರೋಹಿತ್‌ ಶರ್ಮ ಅವರೇ ಟಾಸ್‌ ಗೆದ್ದರು. ಆದರೆ “ಫಾರ್‌ ಎ ಚೇಂಜ್‌’ ಎಂಬಂತೆ ಇಲ್ಲಿ ಬ್ಯಾಟಿಂಗ್‌ ಆಯ್ದುಕೊಂಡರು. ಅವರ ಮತ್ತೂಂದು ಅರ್ಧ ಶತಕ, ಬಿರುಸಿನ ಆರಂಭ, ಅಯ್ಯರ್‌ದ್ವಯರ ಹೋರಾಟ, ದೀಪಕ್‌ ಚಹರ್‌ ಅವರ ಕೊನೆಯ ಓವರ್‌ನ ಸಿಡಿತವೆಲ್ಲ ಭಾರತದ ಸರದಿಯ ಆಕರ್ಷಣೆ ಎನಿಸಿತು.

ಹಾಗೆಯೇ ಬಿಗ್‌ ಹಿಟ್ಟರ್‌ಗಳಾದ ಸೂರ್ಯಕುಮಾರ್‌ ಯಾದವ್‌ ಮತ್ತು ರಿಷಭ್‌ ಪಂತ್‌ ಅವರ ವೈಫಲ್ಯ, ಡೆತ್‌ ಓವರ್‌ ಆರಂಭವಾಗುತ್ತಿದ್ದಂತೆಯೇ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಔಟಾದದ್ದು, ಕೊನೆಯ 4 ಓವರ್‌ಗಳಲ್ಲಿ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳಿಲ್ಲದಿದ್ದುದು ಭಾರತಕ್ಕೆ ತುಸು ಹಿನ್ನಡೆಯಾಗಿ ಪರಿಣಮಿಸಿತು. ಇಲ್ಲವಾದರೆ ಮೊತ್ತ ಇನ್ನೂರರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.

ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಹೆಲ್ಮೆಟ್‌ಗೆ ಬಡಿದ ಚೆಂಡು, ಆಸ್ಪತ್ರೆಗೆ ದಾಖಲಾದ ವಿಂಡೀಸ್‌ ಆಟಗಾರ

ರೋಹಿತ್‌ 50 ಪ್ಲಸ್‌ ದಾಖಲೆ
12ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ರೋಹಿತ್‌ ಶರ್ಮ 31 ಎಸೆತಗಳಿಂದ 56 ರನ್‌ ಸಿಡಿಸಿದರು. 4 ಫೋರ್‌ ಹಾಗೂ 3 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು. ಇದು ರೋಹಿತ್‌ ಅವರ 30ನೇ 50 ಪ್ಲಸ್‌ ರನ್‌ ಸಾಧನೆಯ ನೂತನ ದಾಖಲೆ. ಅವರು ವಿರಾಟ್‌ ಕೊಹ್ಲಿ ದಾಖಲೆಯನ್ನು ಮೀರಿ ನಿಂತರು (29).

ರೋಹಿತ್‌-ಇಶಾನ್‌ ಕಿಶನ್‌ ಪವರ್‌ ಪ್ಲೇಯಲ್ಲಿ 69 ರನ್‌ ಬಾರಿಸಿ ಭಾರತಕ್ಕೆ ದಿಟ್ಟ ಆರಂಭ ಒದಗಿಸಿದರು. ಆದರೆ ಪವರ್‌ ಪ್ಲೇ ಮುಗಿದೊಡನೆಯೇ ನ್ಯೂಜಿಲ್ಯಾಂಡ್‌ ಬೆನ್ನು ಬೆನ್ನಿಗೆ ಯಶಸ್ಸು ಸಾಧಿಸಿತು. ಉಸ್ತುವಾರಿ ನಾಯಕ ಮಿಚೆಲ್‌ ಸ್ಯಾಂಟ್ನರ್‌ ಒಂದೇ ಓವರ್‌ನಲ್ಲಿ ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಇಶಾನ್‌ 21 ಎಸೆತಗಳಿಂದ 29 ರನ್‌ (4 ಬೌಂಡರಿ) ಮಾಡಿದರೆ, ಸೂರ್ಯಕುಮಾರ್‌ ಖಾತೆಯನ್ನೇ ತೆರೆಯಲ್ಲಿ.

ತಮ್ಮ ಮುಂದಿನ ಓವರ್‌ನಲ್ಲೇ ಸ್ಯಾಂಟ್ನರ್‌ ಮತ್ತೂಂದು ದೊಡ್ಡ ಬೇಟೆಯಾಡಿದರು. ರಿಷಭ್‌ ಪಂತ್‌ ಆಟವನ್ನು ನಾಲ್ಕೇ ರನ್ನಿಗೆ ಮುಗಿಸಿದರು. ನೋಲಾಸ್‌ 69ರಲ್ಲಿದ್ದ ಭಾರತ 83ಕ್ಕೆ 3 ವಿಕೆಟ್‌ ಕಳೆದುಕೊಂಡಿತು.

5ನೇ ವಿಕೆಟಿಗೆ ಜತೆಗೂಡಿದ ಅಯ್ಯರ್‌ ಜೋಡಿ 35 ರನ್‌ ಪೇರಿಸಿತು. ಶ್ರೇಯಸ್‌ 25, ವೆಂಕಟೇಶ್‌ 20 ರನ್‌ ಮಾಡಿ ಒಂದೇ ರನ್‌ ಅಂತರದಲ್ಲಿ ವಾಪಸ್‌ ಆದರು.

ಹರ್ಷಲ್‌ ಪಟೇಲ್‌ (18) ಕೂಡ ಬಿರುಸಿನ ಆಟದ ಝಲಕ್‌ ಒಂದನ್ನು ಪ್ರದರ್ಶಿಸಿ ಹಿಟ್‌ ವಿಕೆಟ್‌ ಆದರು. ಅವರು ಟಿ20ಯಲ್ಲಿ ಹಿಟ್‌ ವಿಕೆಟ್‌ ರೂಪದಲ್ಲಿ ಔಟಾದ ಭಾರತದ 2ನೇ ಆಟಗಾರ. ಕೆ.ಎಲ್‌. ರಾಹುಲ್‌ ಮೊದಲಿಗ. ಅವರು ಶ್ರೀಲಂಕಾ ಎದುರಿನ 2018ರ ಕೊಲಂಬೊ ಪಂದ್ಯದಲ್ಲಿ ಹಿಟ್‌ ವಿಕೆಟ್‌ ಆಗಿದ್ದರು.

ಕಡೆಯ ಹಂತದಲ್ಲಿ ದೀಪಕ್‌ ಚಹರ್‌ ಸಿಡಿದು ನಿಂತು 8 ಎಸೆತಗಳಿಂದ ಅಜೇಯ 21 ರನ್‌ (2 ಬೌಂಡರಿ, 1 ಸಿಕ್ಸರ್‌) ಬಾರಿಸಿದ್ದರಿಂದ ಭಾರತದ ಮೊತ್ತ 180ರ ಗಡಿ ದಾಟಿತು. ಆ್ಯಡಂ ಮಿಲ್‌° ಅವರ ಅಂತಿಮ ಓವರ್‌ನಲ್ಲಿ ಚಹರ್‌ 19 ರನ್‌ ಚಚ್ಚಿದರು!

ನ್ಯೂಜಿಲ್ಯಾಂಡ್‌ ಪರ ಸ್ಯಾಂಟ್ನರ್‌ 27ಕ್ಕೆ 3 ವಿಕೆಟ್‌ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರೆ, ಉಳಿದ ನಾಲ್ವರು ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ರಾಹುಲ್‌, ಅಶ್ವಿ‌ನ್‌ಗೆ ರೆಸ್ಟ್‌
ಅಂತಿಮ ಟಿ20 ಪಂದ್ಯಕ್ಕಾಗಿ ಭಾರತ 2 ಬದಲಾವಣೆ ಮಾಡಿಕೊಂಡಿತು. ಓಪನರ್‌ ಕೆ.ಎಲ್‌. ರಾಹುಲ್‌ ಮತ್ತು ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿ‌ನ್‌ ಅವರಿಗೆ ವಿಶ್ರಾಂತಿ ನೀಡಿತು. ಇವರ ಸ್ಥಾನದಲ್ಲಿ ಇಶಾನ್‌ ಕಿಶನ್‌ ಮತ್ತು ಯಜುವೇಂದ್ರ ಚಹಲ್‌ ಕಾಣಿಸಿಕೊಂಡರು.
ನ್ಯೂಜಿಲ್ಯಾಂಡ್‌ ಉಸ್ತುವಾರಿ ನಾಯಕ ಟಿಮ್‌ ಸೌಥಿ ಗೈರಲ್ಲಿ ಆಡಲಿಳಿಯಿತು. ಮಿಚೆಲ್‌ ಸ್ಯಾಂಟ್ನರ್‌ ತಂಡವನ್ನು ಮುನ್ನಡೆಸಿದರು.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಸಿ ಮತ್ತು ಬಿ ಸೋಧಿ 56
ಇಶಾನ್‌ ಕಿಶನ್‌ ಸಿ ಸೀಫ‌ರ್ಟ್‌ ಬಿ ಸ್ಯಾಂಟ್ನರ್‌ 29
ಸೂರ್ಯಕುಮಾರ್‌ ಸಿ ಗಪ್ಟಿಲ್‌ ಬಿ ಸ್ಯಾಂಟ್ನರ್‌ 0
ರಿಷಭ್‌ ಪಂತ್‌ ಸಿ ನೀಶಮ್‌ ಬಿ ಸ್ಯಾಂಟ್ನರ್‌ 4
ಶ್ರೇಯಸ್‌ ಅಯ್ಯರ್‌ ಸಿ ಮಿಚೆಲ್‌ ಬಿ ಮಿಲ್ನೆ25
ವೆಂಕಟೇಶ್‌ ಸಿ ಚಾಪ್‌ಮನ್‌ ಬಿ ಬೌಲ್ಟ್ 20
ಅಕ್ಷರ್‌ ಪಟೇಲ್‌ ಔಟಾಗದೆ 2
ಹರ್ಷಲ್‌ ಹಿಟ್‌ ವಿಕೆಟ್‌ ಬಿ ಫ‌ರ್ಗ್ಯುಸನ್‌ 18
ದೀಪಕ್‌ ಚಹರ್‌ ಔಟಾಗದೆ 21
ಇತರ 9
ಒಟ್ಟು (7 ವಿಕೆಟಿಗೆ) 184
ವಿಕೆಟ್‌ ಪತನ:1-69, 2-71, 3-83, 4-103, 5-139, 6-140, 7-162.
ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-31-1
ಆ್ಯಡಂ ಮಿಲ್ನೆ 4-0-47-1
ಲ್ಯಾಕಿ ಫ‌ರ್ಗ್ಯುಸನ್‌ 4-0-45-1
ಮಿಚೆಲ್‌ ಸ್ಯಾಂಟ್ನರ್‌ 4-0-27-3
ಐಶ್‌ ಸೋಧಿ 4-0-31-1
ನ್ಯೂಜಿಲ್ಯಾಂಡ್‌
ಗಪ್ಟಿಲ್‌ ಸಿ ಸೂರ್ಯಕುಮಾರ್‌ ಬಿ ಚಹಲ್‌ 51
ಡ್ಯಾರಿಲ್‌ ಮಿಚೆಲ್‌ ಸಿ ಹರ್ಷಲ್‌ ಬಿ ಅಕ್ಷರ್‌ 5
ಚಾಪ್‌ಮನ್‌ ಸ್ಟಂಪ್ಡ್ ಪಂತ್‌ ಬಿ ಅಕ್ಷರ್‌ 0
ಗ್ಲೆನ್‌ ಫಿಲಿಪ್ಸ್‌ ಬಿ ಅಕ್ಷರ್‌ 0
ಟಿಮ್‌ ಸೀಫ‌ರ್ಟ್‌ ರನೌಟ್‌ 17
ಜೇಮ್ಸ್‌ ನೀಶಮ್‌ ಸಿ ಪಂತ್‌ ಬಿ ಹರ್ಷಲ್‌ 3
ಮಿಚೆಲ್‌ ಸ್ಯಾಂಟ್ನರ್‌ ರನೌಟ್‌ 2
ಆ್ಯಡಂ ಮಿಲ್‌° ಸಿ ರೋಹಿತ್‌ ಬಿ ವೆಂಕಟೇಶ್‌ 7
ಐಶ್‌ ಸೋಧಿ ಸಿ ಸೂರ್ಯಕುಮಾರ್‌ ಬಿ ಹರ್ಷಲ್‌ 9
ಲ್ಯಾಕಿ ಪರ್ಗ್ಯುಸನ್‌ ಸಿ ಮತ್ತು ಬಿ ಚಹರ್‌ 14
ಟ್ರೆಂಟ್‌ ಬೌಲ್ಟ್ ಔಟಾಗದೆ 2
ಇತರ 1
ಒಟ್ಟು (17.2 ಓವರ್‌ಗಳಲ್ಲಿ ಆಲೌಟ್‌) 111
ವಿಕೆಟ್‌ ಪತನ:1-21, 2-22, 3-30, 4-69, 5-76, 6-76, 7-84, 8-93, 9-95.
ಬೌಲಿಂಗ್‌; ಭುವನೇಶ್ವರ್‌ ಕುಮಾರ್‌ 2-0-12-0
ದೀಪಕ್‌ ಚಹರ್‌ 2.2-0-26-1
ಅಕ್ಷರ್‌ ಪಟೇಲ್‌ 3-0-9-3
ಯಜುವೇಂದ್ರ ಚಹಲ್‌ 4-0-26-1
ವೆಂಕಟೇಶ್‌ ಅಯ್ಯರ್‌ 3-0-12-1
ಹರ್ಷಲ್‌ ಪಟೇಲ್‌ 3-0-26-2

ಪಂದ್ಯಶ್ರೇಷ್ಠ: ಅಕ್ಷರ್‌ ಪಟೇಲ್‌

ಟಾಪ್ ನ್ಯೂಸ್

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.