ಬೆಂ.ನಗರ ಜಿಲ್ಲೆ ಕಸಾಪ ಗದ್ದುಗೆಗೆ ಪ್ರಕಾಶಮೂರ್ತಿ
Team Udayavani, Nov 22, 2021, 9:42 AM IST
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಎಂ.ಪ್ರಕಾಶ ಮೂರ್ತಿ ಆಯ್ಕೆ ಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಎಂ.ತಿಮ್ಮಯ್ಯ ಅವರನ್ನು ಮಣಿಸಿ ಅಧ್ಯಕ್ಷ ಗಾದೆಗೆ ಏರಿದರು. ಪ್ರಕಾಶ ಮೂರ್ತಿ 5314 ಮತ ಪಡೆದು ಪ್ರತಿಸ್ಪರ್ಧಿ ಎಂ.ತಿಮ್ಮಯ್ಯ ಅವರಿಗಿಂತ 1327 ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದರು.
ತಿಮ್ಮಯ್ಯ ಅವರು 3987 ಮತ ಪಡೆದರು. ಈ ಬಾರಿ ಒಟ್ಟು 11 ಮಂದಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಅದರಲ್ಲಿ ಕುವೆಂಪು ಪ್ರಕಾಶ ಸೇರಿದಂತೆ ಕೆಲವು ಚುನಾವಣಾ ಕಣದಿಂದ ಹಿಂದೆ ಸರಿದು ಎಂ.ತಿಮ್ಮಯ್ಯ ಅವರನ್ನು ಬೆಂಬಲಿಸಿದರು. ಹೀಗಾಗಿ ಎಂ. ತಿಮ್ಮಯ್ಯ ಮತ್ತು ಎಂ.ಪ್ರಕಾಶ್‌ಮೂರ್ತಿ ಅವರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.
ಕೆಲ ಸುತ್ತಿನ ಮತ ಎಣಿಕೆಯಲ್ಲಿ ತಿಮ್ಮಯ್ಯ ಮುಂದಿದ್ದರೆ, ಮತ್ತೂಂದು ಸುತ್ತಿನ ಮತ ಎಣಿಕೆ ಯಲ್ಲಿ ಪ್ರಕಾಶ್‌ಮೂರ್ತಿ ಮುಂದಾಗಿ ಪೈಪೋಟಿ ಉಂಟಾಗಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಂ.ಪ್ರಕಾಶ್ ಮೂರ್ತಿ ಬೆಂಬಲಿಗರು ಸಾಹಿತ್ಯ ಪರಿಷತ್ತಿನ ಎದುರು ಪ್ರಕಾಶ್‌ಮೂರ್ತಿಯವರನ್ನು ಎತ್ತಿ ಜೈಕಾರಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಾರ, ತುರಾಯಿಗಳನ್ನು ತೊಡಿಸಿ ಹೂ ಗುಚ್ಚ ನೀಡಿ ಅಭಿನಂದಿಸಿದರು. ಸೋಲು ಮರೆತು ಪ್ರತಿಸ್ಪರ್ಧಿಗಳು ಕೂಡ ಪ್ರಕಾಶ್ ಮೂರ್ತಿ ಅವರನ್ನು ಅಭಿನಂದಿಸಿದರು.
ಶೇ.28.88 ರಷ್ಟು ಮತದಾನ
ರಾಜ್ಯಕ್ಕೆ ಹೋಲಿಸಿ ನೋಡಿದರೆ ರಾಜಧಾನಿ ಬೆಂಗಳೂರಿನಲ್ಲೆ ಅತ್ಯಂತ ಕಡಿಮೆ ಮತದಾನವಾಗಿದೆ. ಶೇ.28.88ರಷ್ಟು ಮಾತ್ರ ಮತದಾನವಾಗಿದೆ. ಒಟ್ಟು 36,491 ಮತಗಳಲ್ಲಿ 10,538 ಮತದಾರರು ಮತಹಾಕಿದರು. ಇರದಲ್ಲಿ 8,787 ಪುರುಷರು ಮತ್ತು 1,751 ಮಹಿಳಾ ಮತದಾರು ಸೇರಿದ್ದಾರೆ. ಶೇಕಡವಾರು ಮತ ಸಂಖ್ಯೆ ಅಧಿಕವಾಗಲಿ ಎಂಬ ಉದ್ದೇಶದಿಂದ ಈ ಬಾರಿ 42 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿತ್ತು.
ನಾನೀಗ ಸೋಲನ್ನು ಮೆಟ್ಟಿ ನಿಂತಿದ್ದೇನೆ
ಈ ಗೆಲವು ನನ್ನ ಗೆಲುವಲ್ಲ. ನನ್ನನ್ನು ಯಾರು ಯಾರು ಪ್ರೋತ್ಸಾಹಿಸಿದ್ದಾರೋ ಅವರ ಗೆಲುವು ಅವರಿಗೆಲ್ಲರಿಗೂ ಈ ಗೆಲುವನ್ನು ಅರ್ಪಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಎಂ.ಪ್ರಕಾಶಮೂರ್ತಿ ಹೇಳಿದರು.
ಇದನ್ನೂ ಓದಿ:– ಸರಣಿ ಭಾರತ ಕೈವಶ: ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
ಗೆಲುವಿನ ನಂತರ ಪ್ರತಿಕ್ರಿಯೆ ನೀಡಿದ ಅವರು ಈ ಹಿಂದೆ ಬೆಂಗಳೂರು ನಗರ ಕಸಾಪ ಅಧ್ಯಕ್ಷ ಸ್ಥಾನಕ್ಕೆನಿಂತು ಸೋಲು ಅನುಭವಿಸಿದ್ದೆ, ಹಿಂದಿನ ಸೋಲುಗಳನ್ನು ಮೆಟ್ಟಿ ನಿಲ್ಲಲು ಹಲವರು ಸಹಕರಿಸಿದ್ದಾರೆ. ನಾನು ಯಾವುದೇ ವಾಮ ಮಾರ್ಗಗಳನ್ನು ಅನುಸರಿಸದೆ ಮತದಾರರನ್ನು ಸೆಳೆದೆ ಎಂದು ತಿಳಿಸಿದರು.
ಹಣಬಲದ ವಿರುದ್ಧ ಜನಬಲದ ಗೆಲುವು. ಮತದಾರರ ನಿರೀಕ್ಷೆಯನ್ನು ನನ್ನ ಕೆಲಸಗಳ ಮೂಲಕ ತೋರಿಸುತ್ತೇನೆ. ಬೆಂಗಳೂರು ನಗರ ಕಸಾಪ ವತಿಯಿಂದ ಕನ್ನಡ ಸಂವರ್ಧನಾ ನಿಧಿ ಸ್ಥಾಪಿಸುವುದು ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇನೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಜ್ಜೆಯಿಸುತ್ತೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.