ನಿರ್ಮಾಣವಾಗಲಿದೆ ಬಿಟ್ ಕಾಯಿನ್ ನಗರ
Team Udayavani, Nov 22, 2021, 10:00 PM IST
ಸ್ಯಾನ್ ಸಾಲ್ವಡಾರ್: ಕೇಂದ್ರ ಅಮೆರಿಕದ ರಾಷ್ಟ್ರ ಎಲ್ ಸಾಲ್ವಡಾರ್ ಶೀಘ್ರದಲ್ಲಿಯೇ ಬಿಟ್ ಕಾಯಿನ್ ಆಧಾರಿತ ನಗರ ನಿರ್ಮಾಣ ಮಾಡಲಿದೆ. ಈ ಬಗ್ಗೆ ಅಲ್ಲಿನ ಅಧ್ಯಕ್ಷ ನಯೀಬ್ ಬುಕೆಲಿ ಘೋಷಣೆ ಮಾಡಿದ್ದಾರೆ.
ಬಿಟ್ ಕಾಯಿನ್‌ಗಾಗಿಯೇ ವಿಶೇಷವಾಗಿರುವ ಬಾಂಡ್ ಅನ್ನು 2022ರಲ್ಲಿ ಜಾರಿಗೆ ತರಲಾಗುತ್ತದೆ ಎಂದು ಅವರು ಪ್ರಕಟಿಸಿದ್ದಾರೆ. ಕೆಲ ಸಮಯದ ಹಿಂದೆ ಅಮೆರಿಕದ ಮಯಾಮಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವೇಳೆ ಬುಕೆಲಿ, ಬಿಟ್ ಕಾಯಿನ್ ಅನ್ನು ನಗದು ವ್ಯವಹಾರಕ್ಕೆ ಬಳಕೆ ಮಾಡಲು ಅನುಮತಿ ನೀಡಲಿರುವ ಮೊದಲ ರಾಷ್ಟ್ರ ಎಲ್ ಸಾಲ್ವಡಾರ್ ಆಗಲಿದೆ ಎಂದು ಹೇಳಿದ್ದರು. ಸೆ.7ರ ಬಳಿಕ ಆ ದೇಶದಲ್ಲಿ ಅಮೆರಿಕನ್ ಡಾಲರ್ ಜತೆಗೆ, ಬಿಟ್ ಕಾಯಿನ್ ಅನ್ನೂ ವ್ಯವಹಾರಕ್ಕೆ ಬಳಕೆಗೆ ಅನುಮೋದನೆ ನೀಡಲಾಗಿದೆ.
ಹೊಸ ನಗರವನ್ನು ಗಲ್ಫ್ ಆಫ್ ಫೊನ್ಸೆಕಾ ವ್ಯಾಪ್ತಿಯಲ್ಲಿ ಕೊಂಚಾಗುವ ಜ್ವಾಲಾಮುಖೀ ಸಮೀಪವೇ ಹೊಸ ನಗರ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಇಂಧನಕ್ಕಾಗಿ ಜಿಯೋ ಥರ್ಮಲ್ ವ್ಯವಸ್ಥೆಯನ್ನು ಹೊಂದಲಿದೆ. ಜತೆಗೆ ನಗದು ವಹಿವಾಟಿನಂತೆ, ಬಿಟ್ ಕಾಯಿನ್ ಅನ್ನು ಸಾಮಾನ್ಯ ವಹಿವಾಟಿಗೆ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಹೊಸ ನಗರದಲ್ಲಿ ಹೂಡಿಕೆ ಮಾಡಲು ಎಲ್ಲ ರೀತಿಯ ಅವಕಾಶ ಮಾಡಿಕೊಡಲಾಗುತ್ತದೆ. ಕೇವಲ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮಾತ್ರ ವಿಧಿಸಲಾಗುತ್ತದೆ. ಉಳಿದ ತೆರಿಗೆಯನ್ನು ಮುನಿಸಿಪಲ್ ಬಾಂಡ್‌ಗಳ ಮೂಲಕ ಪಡೆಯಲಾಗುತ್ತದೆ. ಅದರ ಮೂಲಕ ಸ್ಥಳೀಯ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಕೆ ಮಾಡಲಾಗುತ್ತದೆ ಎಂದು ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲಿ ಹೇಳಿದ್ದಾರೆ. ಅವರ ಸರ್ಕಾರ ಬಿಟ್ ಕಾಯಿನ್‌ಗಾಗಿ 150 ಮಿಲಿಯನ್ ಡಾಲರ್ ಮೊತ್ತದ ನಿಧಿಯನ್ನೂ ಸ್ಥಾಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.