ಜ್ವೆರೇವ್‌ಗೆ ದ್ವಿತೀಯ ಎಟಿಪಿ ಫೈನಲ್ಸ್ ಪ್ರಶಸ್ತಿ
Team Udayavani, Nov 22, 2021, 11:30 PM IST
ಟ್ಯುರಿನ್ (ಇಟಲಿ): ಡ್ಯಾನಿಲ್ ಮೆಡ್ವೆಡೇವ್ ಎದುರಿನ ಸೋಲಿನ ಸರಪಳಿಯನ್ನು ಕಡಿದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ತಮ್ಮ 2ನೇ ಎಟಿಪಿ ಫೈನಲ್ಸ್ ಪ್ರಶಸ್ತಿ ಜಯಿಸಿದರು. ಭಾನುವಾರ ರಾತ್ರಿಯ ಫೈನಲ್ ಸೆಣಸಾಟವನ್ನು ಅವರು 6-4, 6-4 ನೇರ ಸೆಟ್‌ಗಳಿಂದ ಗೆದ್ದರು.
ಸೆಮಿಫೈನಲ್‌ನಲ್ಲಿ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಅವರನ್ನು ಮಣಿಸಿದ ಜ್ವೆರೇವ್, ಫೈನಲ್‌ನಲ್ಲಿ ವಿಶ್ವದ ನಂ.2 ಆಟಗಾರ ಮೆಡ್ವೆಡೇವ್‌ಗೆ ಆಘಾತವಿಕ್ಕಿದರು.
2020ರ ಬಳಿಕ ಮೆಡ್ವೆಡೇವ್ ವಿರುದ್ಧ ಸತತ 5 ಪಂದ್ಯಗಳಲ್ಲಿ ಸೋತಿದ್ದ ಜ್ವೆರೇವ್, ಈ ಕೂಟದ ಲೀಗ್ ಪಂದ್ಯದಲ್ಲೂ ಎಡವಿದ್ದರು. 3ನೇ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಕಳೆದುಕೊಂಡಿದ್ದರು. ಆದರೆ ಪ್ರಶಸ್ತಿ ಸೆಣಸಾಟದಲ್ಲಿ ಗೆಲುವಿನ ಸಂಭ್ರಮ ಆಚರಿಸಿದರು.
ಇದು ಈ ವರ್ಷದ 6 ಫೈನಲ್‌ಗಳಲ್ಲಿ ಅಲೆಕ್ಸಾಂಡರ್ ಜ್ವೆರೇವ್ ಗೆದ್ದ 6ನೇ ಪ್ರಶಸ್ತಿ ಎಂಬುದು ವಿಶೇಷ. ಇದರಲ್ಲಿ ಒಲಿಂಪಿಕ್ಸ್ ಚಿನ್ನವೂ ಸೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.