![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 23, 2021, 5:02 AM IST
ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಧಾರಣೆ ತೇಜಿಯಾಗಿದ್ದು ದಾಖಲೆಯತ್ತ ಮುನ್ನುಗ್ಗಿದೆ.
ಎರಡು ತಿಂಗಳಿನಿಂದ ಸ್ಥಿರವಾಗಿದ್ದ ಇದ್ದ ಅಡಿಕೆ ಧಾರಣೆ ಮೂರು ದಿನಗಳಿಂದ ಏರುಗತಿಯಲ್ಲಿದೆ. ಕ್ಯಾಂಪ್ಕೋ ಮಾರುಕಟ್ಟೆ ಯಲ್ಲಿ ಸಿಂಗಲ್ ಚೋಲ್‌ಗೆ ಕೆಜಿಗೆ 505 ರೂ., ಡಬ್ಬಲ್ ಚೋಲ್‌ಗೆ 520 ರೂ. ಇತ್ತು. ಹೊಸ ಅಡಿಕೆ ಧಾರಣೆ ಸ್ಥಿರವಾಗಿತ್ತು. ಹೊರ ಮಾರುಕಟ್ಟೆಯಲ್ಲಿ 510 ರೂ., 525 ರೂ.ಗೆ ಖರೀದಿಯಾಗಿದೆ. ಬೆಲೆ ಏರುಮುಖದತ್ತ ಸಾಗುತ್ತಿರುವ ಕಾರಣ ಬೆಳೆಗಾರರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.
ಅಕಾಲಿಕ ಮಳೆಯಿಂದ ಹೊಸ ಅಡಿಕೆ ಮಾರುಕಟ್ಟೆಗೆ ಬಾರದೆ ಇರುವ ಕಾರಣ ಭವಿಷ್ಯದಲ್ಲಿ ಅಡಿಕೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಕೃಷಿಕರು ದಾಸ್ತಾನು ಇರಿಸಿರುವ ಹಳೆ ಅಡಿಕೆಗೆ ಧಾರಣೆ ಹಿಗ್ಗಿಸಿ ಸೆಳೆಯುವ ತಂತ್ರಗಾರಿಕೆ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹಳೆ ಅಡಿಕೆ ಧಾರಣೆ 540 ರೂ.ಗಳಿಂದ 550 ರೂ. ತನಕವು ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲ ಗಳು ತಿಳಿಸಿವೆ.
ಇದನ್ನೂ ಓದಿ:ಅಪಘಾತದ ಬಳಿಕ ಮೊದಲ ಪ್ರಶಸ್ತಿ ಗೆದ್ದ ಮೊಮೊಟ
550 ರೂ.ಗಳತ್ತ ಕಾಳುಮೆಣಸು
ಕಾಳುಮೆಣಸು ಧಾರಣೆ ಕೂಡ ಏರಿಕೆಗತಿಯಲ್ಲಿದ್ದು ಸೋಮವಾರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 510 ರೂ., ಹೊರ ಮಾರುಕಟ್ಟೆಯಲ್ಲಿ 550 ರೂ. ತನಕ ಬೇಡಿಕೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಕುಸಿತದಲ್ಲಿದ್ದ ಕಾಳುಮೆಣಸು ಧಾರಣೆಯೀಗ 500 ರೂ. ದಾಟುವ ಮೂಲಕ ದಾಖಲೆ ಬರೆದಿದೆ.
You seem to have an Ad Blocker on.
To continue reading, please turn it off or whitelist Udayavani.