ಅನಂತಪಥ ಪತ್ರಿಕೆ 17ನೇ ಸಂಚಿಕೆ ಬಿಡುಗಡೆ

Team Udayavani, Nov 23, 2021, 11:20 AM IST

ಅನಂತಕುಮಾರ್‌

ಬೆಂಗಳೂರು: ಪ್ರಧಾನಿ ಸ್ಥಾನಕ್ಕೇರುವ ಸಾಮರ್ಥ್ಯ ಹೊಂದಿದ್ದ ಅನಂತಕುಮಾರ್‌ ಅವರ ನಿಧನ ದೇಶಕ್ಕಾದ ನಷ್ಟ ಎಂದು ಲೇಖಕ ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಆನ್‌ಲೈನ್‌ಲ್ಲಿ ನಡೆದ ಅನಂತಪಥ ಪತ್ರಿಕೆಯ 17ನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತ ನಾಡಿದ ಅವರು, ಅನಂತ್‌ಕುಮಾರ್‌ ವ್ಯಕ್ತಿತ್ವ, ಸಣ್ಣ ವಯಸ್ಸಿನಲ್ಲಿ ನಿಭಾಯಿಸಿದ ದೊಡ್ಡ ಜವಾಬ್ದಾರಿಗಳು, ರಾಜಕೀ ಯದ ಬಗ್ಗೆ ಹೊಂದಿದ್ದ ಶ್ರದ್ಧೆ, ವಿವಿಧ ಖಾತೆಗಳ ಸಚಿವರಾಗಿದ್ದಾಗ ತೆಗೆದುಕೊಳ್ಳುತ್ತಿದ್ದ ನಿರ್ಧಾರ, ರೂಪಿಸುತ್ತಿದ್ದ ಯೋಜನೆಗಳ ಮೂಲಕ ಮುಂದೆ ಪ್ರಧಾನಿ ಸ್ಥಾನಕ್ಕೇರುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದರು ಎಂದರು.

ದೇಶದ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಆದರೆ, ಅವರ ಅಕಾಲಿಕ ನಿಧನವು ಒಂದು ಪಕ್ಷಕ್ಕೆ ಮಾತ್ರಲ್ಲದೇ ದೇಶಕ್ಕೆ ಉಂಟಾದ ದೊಡ್ಡ ನಷ್ಟ ಎಂದು ಹೇಳಿದರು. ದೇಶದ ತುರ್ತು ಪರಿಸ್ಥಿತಿ ಸಂದರ್ಭದಿಂದಲೇ ಅನಂತಕುಮಾರ್‌ ಪರಿಚಯ ಇತ್ತು. ಹೋರಾಟ ಜಾಗೃತಿ ಸಭೆಗಳಲ್ಲಿ ಅತ್ಯಂತ ಹುರುಪಿನಿಂದ ಅನಂತ ಕುಮಾರ್‌ ಮಾತನಾಡುತ್ತಿದ್ದರು. ಯಾವ ಕೆಲಸ ಹಿಡಿದರು ಯಶಸ್ವಿಯಾಗಿ ನಿಭಾಯಿಸುವ ಶಕ್ತಿ ಅವ ರಲ್ಲಿತ್ತು.

ಇದನ್ನೂ ಓದಿ;- ಜಲಪಾತ ನೋಡಲು ಹೋಗಿ ಜಾರಿ ಬಿದ್ದು ಸಾವು

ರಾಜ್ಯದಲ್ಲಿ ವಿದ್ಯಾರ್ಥಿ ಪರಿಷತ್ತು ಕಟ್ಟಿದ ವರಲ್ಲಿ ಪ್ರಮುಖರು. ಸಣ್ಣ ಪುಟ್ಟ ಕಾರ್ಯಕ್ಕೆ ಸೀಮಿತವಾಗಿದ್ದ ವಿದ್ಯಾರ್ಥಿ ಪರಿಷತ್ತಿಗೆ ದೊಡ್ಡ ರೂಪು ಕೊಟ್ಟಿದ್ದರು. ಬಿರುಗಾಳಿಯಂತೆ ಪ್ರವಾಸ ಮಾಡಿ, ಸಂಘವನ್ನು ಯಾವ ರೀತಿ ಕಟ್ಟಬೇಕು ಎಂ ಬುದಕ್ಕೆ ಮಾದರಿಯಾಗಿದ್ದರು. ಇಂತಹ ಸಾಧನೆ ಗಳಿಂದಲೇ ಚಿಕ್ಕವಯಸ್ಸಿನಲ್ಲಿ ರಾಜಕೀಯದ ಉನ್ನತ ಸ್ಥಾನಕ್ಕೇರಿದ್ದರು ಎಂದು ಸ್ಮರಿಸಿದರು. ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಕೊರೊನಾ ಕಪ್ಪು ಚಾಯೆ ಮಧ್ಯೆಯೇ ಅನಂತಪಥ ಪತ್ರಿಕೆ ಆರಂಭಿಸಿದೆವು.

ಪುಸ್ತಕದ ರೂಪದಲ್ಲಿ ಅನಂತ ಕುಮಾರ್‌ ಜೀವನ ಹಿಡಿದಿಟ್ಟು ಪ್ರಕಟಿಸಲು ಒಂದಿಷ್ಟ ಸಮಯ ಬೇಕಾಗುತ್ತದೆ. ಹೀಗಾಗಿ, ಸದ್ಯದ ಜಾರಿಯಲ್ಲಿರುವ ಕಾರ್ಯಗಳನ್ನು ಪರಿಚಯ ಜತೆಗೆ ಅನಂತಕುಮಾರ್‌ ಜೀವವನ್ನು ಹಂತ ಹಂತವಾಗಿ ಪರಿಚಯಿಸಲು ಪತ್ರಿಕೆ ನೆರವಾಗಿದೆ. ಇನ್ನು ಆನಂತ್‌ಕುಮಾರ್‌ ಪ್ರತಿಷ್ಠಾನವು ಯುವಕರಲ್ಲಿ ಸ್ಫೂರ್ತಿ ತುಂಬುವ, ನೇತೃತ್ವ ಬೆಳೆಸುವ ಕೆಲಸ ಮಾಡುತ್ತಿದೆ ಎಂದರು. ಪ್ರತಿಷ್ಠಾನದ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

16-cm

Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ

15-ccb

Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್‌ ಸಾಧ್ಯತೆ

14-fruad

Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.