ಕೊಟ್ಟೂರು ಸ್ವಾಮಿ ಮಠದಲ್ಲಿ ಅಂತಿಮ ದರ್ಶನ
Team Udayavani, Nov 23, 2021, 3:16 PM IST
ಹೊಸಪೇಟೆ: ನಗರದ ಕೊಟ್ಟೂರುಸ್ವಾಮಿಸಂಸ್ಥಾನಮಠದಲ್ಲಿ ಮಠಾ ಧೀಶರು,ರಾಜಕಾರಣಿಗಳು, ಅಪಾರ ಭಕ್ತರುಡಾ| ಸಂಗನಬಸವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೊಟ್ಟೂರುಸ್ವಾಮಿ ಮಠದಲ್ಲಿ ಸದ್ಭಕ್ತರುಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು.ಶ್ರೀ ಮಠದಲ್ಲಿ ಸಂಜೆ 6 ಗಂಟೆಯಿಂದರಾತ್ರಿ 7 ಗಂಟೆವರೆಗೆ ಅಂತಿಮ ದರ್ಶನ ಪಡೆಯಲಾಯಿತು.
ಮೈಸೂರಿನ ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ,ಚಿತ್ತರಗಿ ವಿಜಯ್ ಮಹಾಂತೇಶ ಸ್ವಾಮೀಜಿ,ಮರಿಯಮ್ಮನಹಳ್ಳಿ ಗುರುಪಾದದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ, ನಂದಿಪುರ ಶ್ರೀಗಳು, ಕಾನಾಮಡಗುಐಮುಡಿ ಸ್ವಾಮೀಜಿ, ಹಿರೇಹಡಗಲಿಯಕಾಲಿರಪ್ಪಜ್ಜ ಸೇರಿದಂತೆ ವಿವಿಧ ಮಠಾಧಿಧೀಶರು ಅಂತಿಮ ದರ್ಶನ ಪಡೆದರು.ಪ್ರವಾಸೋದ್ಯಮಸಚಿವ ಆನಂದ್ ಸಿಂಗ್, ಶಾಸಕರಾದತುಕಾರಾಂ, ಸೋಮಶೇಖರ ರೆಡ್ಡಿ, ಶಾಸಕಜೆ.ಎನ್. ಗಣೇಶ್, ಎಂಎಲ್ಸಿ ಅಲ್ಲಂವೀರಭದ್ರಪ್ಪ, ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ, ಹಂಪನಗೌಡ ಬಾದರ್ಲಿ,ಮುಖಂಡರಾದ ಎಂ.ಪಿ. ವೀಣಾ, ಚಾನಾಳ್‌ಶೇಖರ್, ಭರತ್ ರೆಡ್ಡಿ, ರಾಣಿಸಂಯುಕ್ತಾಸಿಂಗ್, ಕೆ.ಬಿ. ಶ್ರೀನಿವಾಸರೆಡ್ಡಿ, ಬಿ.ಎಸ್.ಜಂಬಯ್ಯ ನಾಯಕ, ವಿಶ್ವನಾಥ ಹಿರೇಮಠ,ಮಲ್ಲೆ ದೊಡ್ಡಪ್ಪ, ಪಲ್ಲೆದ ಪಂಪಾಪತಿ, ಹರವಿಬಸವನಗೌಡ ಮತ್ತಿತರ ಗಣ್ಯರು ಅಂತಿಮನಮನ ಸಲ್ಲಿಸಿದರು.
ಶ್ರೀಮಠದ ರಾಣಿಚನ್ನಮ್ಮ ಶಾಲೆವಿದ್ಯಾರ್ಥಿಗಳು ಶಿಕ್ಷಕರು ಕಣ್ಣೀರು ಹಾಕಿದರು.ಅಂತಿಮ ದರ್ಶನದ ಬಳಿಕ ಗದಗ ಜಿಲ್ಲೆಯಗಜೇಂದ್ರಗಡದ ಹಾಲಕೆರೆಯ ಮಠಕ್ಕೆಪಾರ್ಥಿವ ಶರೀರದ ಮೆರವಣಿಗೆ ಸಾಗಿತು.ಮಠಕ್ಕೆ ಶ್ರೀಗಳ ಪಾರ್ಥಿವ ಶರೀರ: ಜಗದ್ಗುರುಶ್ರೀ ಡಾ| ಸಂಗನಬಸವ ಸ್ವಾಮೀಜಿಅವರ ಪಾರ್ಥಿವ ಶರೀರ ಸೋಮವಾರಸಂಜೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿಶ್ರೀಮಠದ ಭಕ್ತರು ಹಾಗೂ ವಿವಿಧ ಜಾನಪದಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕಮೂಲಮಠಕ್ಕೆ ಕರೆತರಲಾಯಿತು.
ನಗರದಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಬಳಿಯಿಂದಆರಂಭಗೊಂಡ ಮೆರವಣಿಗೆ ನಗರದ ವಿವಿಧಬೀದಿಗಳಲ್ಲಿ ಸಂಚರಿಸಿ ಕೊಟ್ಟೂರುಸ್ವಾಮಿಮಠದವರೆಗೆ ಸಾಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.