ತೈಲ ಬೆಲೆ ಇನ್ನಷ್ಟು ಅಗ್ಗ? 50 ಲಕ್ಷ ಬ್ಯಾರಲ್ ಕಚ್ಚಾತೈಲ ಬಿಡುಗಡೆಗೆ ನಿರ್ಧಾರ
ಪಾದೂರು ಸಹಿತ 3 ಕಡೆ ದಾಸ್ತಾನು
Team Udayavani, Nov 24, 2021, 7:05 AM IST
ಹೊಸದಿಲ್ಲಿ: ಕೇಂದ್ರ ಸರಕಾರವು ಇದೇ ಮೊದಲ ಬಾರಿಗೆ ಉಡುಪಿ ಬಳಿಯ ಪಾದೂರು ಸಹಿತ ತನ್ನ ಮೂರು ವ್ಯೂಹಾತ್ಮಕ ಭೂಗತ ತೈಲಾಗಾರಗಳಿಂದ 50 ಲಕ್ಷ ಬ್ಯಾರಲ್ ಮೀಸಲು ಕಚ್ಚಾ ತೈಲವನ್ನು ಬಿಡುಗಡೆ ಮಾಡಲು ನಿರ್ಧ ರಿಸಿದೆ. ಇದರಿಂದಾಗಿ ಸದ್ಯದಲ್ಲೇ ದೇಶದಲ್ಲಿ ಮತ್ತು ಜಾಗತಿಕವಾಗಿ ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಪೆಟ್ರೋಲಿಯಂ ಉತ್ಪಾದಕ ಒಪೆಕ್ ರಾಷ್ಟ್ರಗಳಿಗೆ ಸಡ್ಡು ಹೊಡೆ ಯುವ ಉದ್ದೇಶವೂ ಇದರ ಹಿಂದಿದ್ದು, ಅಮೆರಿಕ ಮಾಡಿರುವ ಮನವಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಪೆಟ್ರೋ ಲಿಯಂ ಸಚಿವಾಲಯ ಮಾಹಿತಿ ನೀಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಉನ್ನತ ಅಧಿಕಾರಿಗಳು ಮತ್ತು ತೈಲ ಮಾರುಕಟ್ಟೆ ಕಂಪೆನಿಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾವಾಗ ಬಿಡುಗಡೆ?
ಭಾರತವು ಸುಮಾರು 3.80 ಕೋಟಿ ಬ್ಯಾರಲ್ ಕಚ್ಚಾತೈಲವನ್ನು ಪಾದೂರು ಸಹಿತ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿರುವ ಮೂರು ಸಂಗ್ರಹಾಗಾರಗಳಲ್ಲಿ ಮೀಸಲು ದಾಸ್ತಾನು ಆಗಿ ಇರಿಸಿದೆ. ಈ ಪೈಕಿ 50 ಲಕ್ಷ ಬ್ಯಾರಲ್ ತೈಲ ಬಿಡುಗಡೆ ಪ್ರಕ್ರಿಯೆಯನ್ನು ಮುಂದಿನ 7-10 ದಿನಗಳಲ್ಲೇ ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಸ್ತಾನನ್ನು ಎಂಆರ್ಪಿಎಲ್ ಮತ್ತು ಎಚ್ಪಿಸಿಎಲ್ಗೆ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ:ನ.27ಕ್ಕೆ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್ಟಿ ಸಭೆ
ಕಚ್ಚಾತೈಲ ಬೆಲೆ ಕುಸಿತ
ಅಮೆರಿಕವು ತನ್ನ ಮೀಸಲು ದಾಸ್ತಾನಿನಿಂದ 50 ಕೋಟಿ ಟನ್ ಮೀಸಲು ಕಚ್ಚಾತೈಲ ಬಿಡುಗಡೆ ಮಾಡಲಿದೆ. ಜಪಾನ್ ಪ್ರಧಾನಿ ಈಗಾಗಲೇ ಈ ಬಗ್ಗೆ ಉತ್ಸುಕತೆ ಪ್ರದರ್ಶಿಸಿದ್ದು, ಸದ್ಯವೇ ಇಂಥದೇ ಹೆಜ್ಜೆ ಇರಿಸಲಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಇಳಿಕೆ ಕಂಡಿವೆ. ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್ಗೆ 67 ಸೆಂಟ್ಸ್ ಇಳಿಕೆಯಾಗಿ 79.03 ಡಾಲರ್ಗೆ ತಗ್ಗಿದರೆ ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ತೈಲ ಬೆಲೆ ಪ್ರತೀ ಬ್ಯಾರಲ್ಗೆ 88 ಸೆಂಟ್ಸ್ ತಗ್ಗಿ 75.87 ಡಾಲರ್ಗೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.