ಸ್ಪರ್ಧಿಸಬಾರದೆಂಬ ಕಾನೂನಿಲ್ಲ
Team Udayavani, Nov 24, 2021, 3:21 PM IST
ಚಿತ್ರದುರ್ಗ: ವಿಧಾನ ಪರಿಷತ್‌ಚುನಾವಣೆಯಲ್ಲಿ ಸ್ಥಳೀಯ,ಪರಕೀಯ ಎನ್ನುವುದು ಇಲ್ಲ. ನಾನುಪಕ್ಕದ ಜಿಲ್ಲೆಯನು. ಹೊರಗಿನಿಂದಬಂದವರು ಸ್ಪರ್ಧೆ ಮಾಡಬಾರದುಎನ್ನುವ ನಿಯಮವೇನೂ ಇಲ್ಲ ಎಂದುವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ಹೇಳಿದರು.
ಮಂಗಳವಾರ ಜಿಲ್ಲಾ ಧಿಕಾರಿಕಚೇರಿಯಲ್ಲಿ ಚುನಾವಣೆಗೆನಾಮಪತ್ರ ಸಲ್ಲಿಸಿದಬಳಿಕ ಸುದ್ದಿಗಾರರ ಜತೆಮಾತನಾಡಿದ ಅವರು,ಇಂದಿರಾ ಗಾಂಧಿ ಕೂಡಹೊರಗಿನಿಂದ ಬಂದುಇಲ್ಲಿ ಸ್ಪರ್ಧೆ ಮಾಡಿದ್ದರು.ಜನತೆ ಸ್ವಾಗತಿಸಿದ್ದಾರೆ.ಹೊರಗಿನಿಂದ ಬಂದವರುಚುನಾವಣೆಗೆ ಸ್ಪರ್ಧೆ ಮಾಡಬಾರದುಎನ್ನುವ ಕಾನೂನು ಇಲ್ಲ. ಇಲ್ಲಿನಸಚಿವರಾದ ಶ್ರೀರಾಮುಲು,ನಾರಾಯಣಸ್ವಾಮಿ ಕೂಡಹೊರಗಿನಿಂದಲೇ ಬಂದಿದ್ದಾರೆ.
ನಾನುಕೂಡ ಪಕ್ಕದ ಜಿಲ್ಲೆಯವನೇ ಎಂದರು.ಎಲ್ಲ ಗ್ರಾಮ ಪಂಚಾಯಿತಿಸದಸ್ಯರ ಮನೆಬಾಗಿಲಿಗೆ ಹೋಗಿನೇರಾ ನೇರಾ ಕುಳಿತು ಮಾತನಾಡಿಚುನಾವಣೆ ಎದುರಿಸುತ್ತೇನೆ.ನಾನುಪಂಚಾಯಿತಿ ಸದಸ್ಯನಾಗಿದ್ದ ಕಾರಣಹೇಗೆ ಮನವೊಲಿಸಬೇಕು ಎನ್ನುವುದುಗೊತ್ತಿದೆ. ನಾನು ಈ ಹಿಂದೆ ಎನ್‌ಎಸ್‌ಯುಐ ಕಾರ್ಯಕರ್ತನಾಗಿ, ಡಿಸಿಸಿಸದಸ್ಯ, ಬೆಂಗಳೂರು ಜಿಲ್ಲಾ ಜಂಟಿಕಾರ್ಯದರ್ಶಿ, ಕೆಪಿಸಿಸಿ ಸದಸ್ಯ, ಗ್ರಾಮಪಂಚಾಯಿತಿ ಸದಸ್ಯ, ಅಧ್ಯಕ್ಷನಾಗಿ,ಸಾವಯವ ಮಿಷನ್ ಅಧ್ಯಕ್ಷಸ್ಥಾನದವರೆಗೆ ವಿವಿಧ ಜವಾಬ್ದಾರಿಗಳನ್ನುನಿಭಾಯಿಸಿದ್ದೇನೆ. ರೈತರ ಜೊತೆಒಡನಾಟ ಇದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನನಗೆದೊಡ್ಡ ಅವಕಾಶ ನೀಡಿದ್ದಾರೆ. ಇದುಆಕಾಶಕ್ಕಿಂತ ದೊಡ್ಡದು ಎನ್ನುವುದುನನ್ನ ಭಾವನೆ. ಇದನ್ನು ಸಮರ್ಥವಾಗಿಬಳಸಿಕೊಂಡು ಗೆಲ್ಲುತ್ತೇನೆ ಎಂದುವಿಶ್ವಾಸ ವ್ಯಕ್ತಪಡಿಸಿದರು.ಗ್ರಾಮ ಪಂಚಾಯಿತಿಗಳಲ್ಲಿ ಕೇರಳಮಾದರಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಸದನದ ಹೊರಗೆ ಮತ್ತು ಒಳಗೆಹೋರಾಟ ನಡೆಸುತ್ತೇನೆ. ಬಿಜೆಪಿ ಇಲ್ಲಿಬಲವಾಗಿದ್ದರೂ ಸಂತೋಷದಿಂದಹೋರಾಟ ಮಾಡುತ್ತೇನೆ. ಚುನಾವಣೆಅಂದರೆ ನನಗೆ ಖುಷಿ. ಗ್ರಾಮಪಂಚಾಯಿತಿ ಹಂತದಿಂದ ಬಂದವನುನಾನು. ಇಲ್ಲಿ ಆಡಳಿತ ವಿರೋ ಧಿ ಅಲೆಇದ್ದು, ನಮ್ಮ ಪರ ವಾತಾವರಣ ಇದೆಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಮಾತನಾಡಿ, ಜಿಲ್ಲೆಯಲ್ಲಿ ಹೊರಗಿನಿಂದಬಂದು ಸ್ಪರ್ಧೆ ಮಾಡಿರುವುದು ಇದೇಮೊದಲೇನಲ್ಲ. ನಮ್ಮ ಅಭ್ಯರ್ಥಿಇಲ್ಲಿಯೇ ನೆಲೆಸುತ್ತಾರೆ.
ಬಹಳಷ್ಟುಜನ ಇಲ್ಲಿ ಸಂಸದರು ಆಗಿ ಗೆದ್ದ ನಂತರಇಲ್ಲಿಯೇ ನೆಲೆಸಿ ಕೆಲಸ ಮಾಡಿದ್ದಾರೆಎಂದರು.ದಾವಣಗೆರೆಯಲ್ಲಿ ಇಬ್ಬರು,ಚಿತ್ರದುರ್ಗ ಜಿಲ್ಲೆಯಲ್ಲಿ ಒಬ್ಬರುಶಾಸಕರಿದ್ದೇವೆ. ಪರಾಭವಗೊಂಡವರು,ಮಾಜಿ ಶಾಸಕರು ಮತ ಕೊಡಿಸುವಕೆಲಸ ಮಾಡುತ್ತಾರೆ. ಮತದಾರರುಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದಮಾಡುತ್ತಾರೆ. ಸೋಮಣ್ಣ ಗೆಲ್ಲುತ್ತಾರೆಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಚುನಾವಣೆಗೆಲ್ಲುವ ನಿಟ್ಟಿನಲ್ಲಿ ತಂತ್ರ ರೂಪಿಸಿದ್ದೇವೆ.
ಚುನಾವಣಾ ಪ್ರಚಾರಕ್ಕೆ ಯಾರೆಲ್ಲಾಬರಲಿದ್ದಾರೆ ಎನ್ನುವ ಪಟ್ಟಿ ಕೆಪಿಸಿಸಿಹಂತದಲ್ಲಿ ಮಾಡಿದ್ದಾರೆ. ಅಲ್ಲಿಂದಲೇಕಳಿಸುತ್ತಾರೆ ಎಂದರು.ಈ ವೇಳೆ ಮಾಜಿ ಸಚಿವರಾದಎಚ್. ಆಂಜನೇಯ, ಡಿ. ಸುಧಾಕರ್,ಮುಖಂಡರಾದ ಹನುಮಲಿಷಣ್ಮುಖಪ್ಪ, ಡಾ| ಬಿ. ಯೋಗೀಶ್‌ಬಾಬು, ಸಂಪತ್‌ಕುಮಾರ್, ಜಿಪಂ,ತಾಪಂ ಮಾಜಿ ಸದಸ್ಯರು ಸೇರಿದಂತೆಹಲವು ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.