ಸರ್ಕಾರಿ ಸಂಸ್ಥೆಗಳಿಗೆ ಬಿಟ್ ಕಾಯಿನ್ ನಿಯಂತ್ರಿಸಲು ಸಾಧ್ಯವಿಲ್ಲ: ರಾಜನ್
Team Udayavani, Nov 24, 2021, 9:00 PM IST
ನವದೆಹಲಿ: ಬಿಟ್ ಕಾಯಿನ್‌ಗಳಿಗೆ ಸಂಬಂಧಿಸಿದಂತೆ ಇರುವ ಸೈಬರ್ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸರ್ಕಾರಿ ಸಂಸ್ಥೆಗಳಿಗೆ ಸಾಧ್ಯವೇ ಇಲ್ಲ.
ಹಾಲಿ ಇರುವ ಸರಿ ಸುಮಾರು 6 ಸಾವಿರ ಕ್ರಿಪ್ಟೋ ಕರೆನ್ಸಿಗಳಲ್ಲಿ ಕೆಲವು ಮಾತ್ರ ಮಾರುಕಟ್ಟೆಯಲ್ಲಿ ಉಳಿಯುವ ಸಾಧ್ಯತೆಗಳಿವೆ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
“ಸಿಎನ್‌ಬಿಸಿ-ಟಿವಿ18′ ವಾಣಿಜ್ಯ ಸುದ್ದಿವಾಹಿನಿ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ನಿಯಂತ್ರಣ ವ್ಯವಸ್ಥೆಗಳಿಗೆ ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌ಗಳಿಗೆ ಎದುರಾಗುವ ಸೈಬರ್ ಸವಾಲುಗಳನ್ನು ಎದುರಿಸುವುದು ಕಷ್ಟವಾಗಲಿದೆ.
ನಿಯಂತ್ರಣದ ವ್ಯಾಪ್ತಿಯಿಂದಲೇ ಹೊರಗೆ ಇರುವಾಗ ಕ್ರಿಪ್ಟೋ ಕರೆನ್ಸಿಗಳನ್ನು ಸರ್ಕಾರ ನಿಯಂತ್ರಿಸುವುದಾದರೂ ಹೇಗೆ ಎಂದು ಅಚ್ಚರಿಪಟ್ಟರು.
ಇದನ್ನೂ ಓದಿ:ಬಾಲಕಿ ಅತ್ಯಾಚಾರ,ಕೊಲೆ: ಕೃತ್ಯವನ್ನು ಕಟುವಾಗಿ ಖಂಡಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ
ಕ್ರಿಪ್ಟೋ ಕರೆನ್ಸಿಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಸಾಧ್ಯವಿಲ್ಲ. ಆದರೆ, ಅವುಗಳನ್ನು ಸಾಮಾನ್ಯ ಪಾವತಿ ವ್ಯವಸ್ಥೆಯಲ್ಲಿ ಸಕ್ರಿಯವಾಗದಂತೆ ತಡೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಸದ್ಯ ಚಾಲ್ತಿಯಲ್ಲಿರುವ 6 ಸಾವಿರ ಕರೆನ್ಸಿಗಳ ಪೈಕಿ ಕೆಲವು ಮಾತ್ರ ಉಳಿಯಲಿದೆ ಎಂದೂ ರಾಜನ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.