ನೆರೆಮನೆಯವರ ಡಿಜೆ ಸೌಂಡ್ಸ್ ಗೆ 63 ಕೋಳಿಗಳು ಸಾವು ! ಮಾಲೀಕನಿಂದ ದೂರು
Team Udayavani, Nov 24, 2021, 6:32 PM IST
- ನೀರಿನ ಪೈಪ್ ನಿಂದ ಉದುರಿದ ನೋಟಿನ ಕಂತೆಗಳು
ಕಲಬುರ್ಗಿಯಲ್ಲಿ ಬುಧವಾರ ನಡೆದ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಕಂತೆ ಕಂತೆ ನೋಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಹಣ ಪತ್ತೆಯಾಗಿದೆ.
- ಜಯಲಲಿತಾ ನಿವಾಸ ಇನ್ನು ಸ್ಮಾರಕವಲ್ಲ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ನಿವಾಸ ‘ವೇದ ನಿಲಯ’ವನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ನಿರ್ಧಾರ ಮಾಡಲಾಗಿತ್ತು. ಆಗಿನ ಎಐಎಡಿಎಂಕೆ ಸರಕಾರದ ಈ ಆದೇಶವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.
- 68 ಕಡೆ ಏಕ ಕಾಲದಲ್ಲಿ ಎಸಿಬಿ ದಾಳಿ
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ರಾಜ್ಯದ 68 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಎಸಿಬಿಯ 408 ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
- ಡಿಜೆ ಸೌಂಡ್ಸ್ ಗೆ ಕೋಳಿಗಳು ಸಾವು! ದೂರು
ನೆರಮನೆಯಲ್ಲಿನ ಮದುವೆ ಸಂದರ್ಭದಲ್ಲಿ ಬಳಸಿದ ಡಿಜೆ ಸೌಂಡ್ಸ್ ಈಗ ದೊಡ್ಡ ಸುದ್ದಿಯಾಗಿದೆ. ಇದರ ಪರಿಣಾಮವಾಗಿ ತನ್ನ ಫಾರ್ಮ್ ನಲ್ಲಿನ 63 ಕೋಳಿಗಳು ಸಾವನ್ನಪ್ಪಿರುವುದಾಗಿ ಒಡಿಶಾದ ಬಾಲಾಸೋರ್ ನಲ್ಲಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
- ಅಧಿವೇಶನದಲ್ಲಿ ಕೃಷಿ ಕಾಯ್ದೆ ಮಂಡನೆ
ವಿವಾದಿತ ಮೂರು ಕೃಷಿ ಕಾಯ್ದೆ 2021ರ ಮಸೂದೆಯನ್ನು ರದ್ದುಗೊಳಿಸುವ ಪ್ರಸ್ತಾಪಕ್ಕೆ ಇಂದು ಬೆಳಗ್ಗೆ ನಡೆದ ಕೇಂದ್ರ ಸಂಪುಟ ಸಭೆ ಅಂಕಿತ ದೊರಕಿದೆ. ಪ್ರಧಾನಮಂತ್ರಿ ಕಚೇರಿಯನ್ನು ಸಂಪರ್ಕಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು, ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
- ಸನ್ಬರ್ನ್ ಸಂಗೀತೋತ್ಸವಕ್ಕೆ ಅನುಮತಿ ನೀಡುವುದಿಲ್ಲ: ಗೋವಾ ಸರಕಾರ
ಗೋವಾದಲ್ಲಿ ಪ್ರಸಕ್ತ ವರ್ಷ ನಡೆಯಲಿದ್ದ ಇಡಿಎಂ ಸನ್ಬರ್ನ್ ಸಂಗೀತ ಮಹೋತ್ಸವಕ್ಕೆ ಅನುಮತಿ ನೀಡುವುದಿಲ್ಲ ಎಂದು ಗೋವಾ ಸರ್ಕಾರ ಬುಧವಾರ ಹೇಳಿದೆ. ಇದರಿಂದಾಗಿ ಕೋಟ್ಯಂತರ ಸಂಗೀತ ಪ್ರೇಮಿಗಳ ಉತ್ಸಾಹಕ್ಕೆ ಮತ್ತು ರಾಜ್ಯ ಸರ್ಕಾರದ ಬೊಕ್ಕಸದ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
- ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ವಿಮಾನ ಹತ್ತಿದ ರಶ್ಮಿಕಾ
ನಟಿ ರಶ್ಮಿಕಾ ತಾವು ಯುಎಸ್ಎ ಗೆ ತೆರಳಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಏರ್ ಟಿಕೆಟ್ ಮತ್ತು ಪಾಸ್ ಪೋರ್ಟ್ ಕೈಲಿ ಹಿಡಿದಿರುವ ಫೋಟೋ ಶೇರ್ ಮಾಡಿರುವ ನಟಿ, ಇದೀಗ ನಿಮ್ಮಿಂದ ನಾನು ದೂರ ಹೋಗುತ್ತಿದ್ದೇನೆ. ಆದ್ರೆ ಆದಷ್ಟು ಬೇಕು ವಾಪಸ್ಸಾಗುತ್ತೇನೆ ಎಂದಿದ್ದಾರೆ.
- ಟೆಸ್ಟ್ ಸರಣಿಯಿಂದ K.L ರಾಹುಲ್ ಔಟ್
ಕಾನ್ಪುರದ ಗ್ರೀನ್ ಪಾರ್ಕ್ನಲ್ಲಿ ಗುರುವಾರ ಆರಂಭಗೊಳ್ಳಲಿದೆ. ನ್ಯೂಜಿಲೆಂಡ್ ವಿರುದ್ಧದ ಈ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡದೊಂದು ಆಘಾತ ಎದುರಾಗಿದೆ. ಕೆ.ಎಲ್.ರಾಹುಲ್ ಎಡತೊಡೆಯ ಸ್ನಾಯು ಸೆಳೆತಕ್ಕೆ ಒಳಗಾದ ಕಾರಣ ಟೆಸ್ಟ್ ಸರಣಿ ಯಿಂದಲೇ ಹೊರ ಬಿದ್ದಿರುವುದು ಇದಕ್ಕೆ ಕಾರಣ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ