6ರಂದು ಪ್ರತಿಭಟನಾ ಮೆರವಣಿಗೆ
Team Udayavani, Nov 25, 2021, 1:33 PM IST
ಮಾನ್ವಿ: ಪೊಲೀಸ್ ಇಲಾಖೆ ಅಧಿಕಾರಿಗಳು ಹಲ್ಲೆಗೊಳಗಾದವರು ನೀಡಿದ ದೂರಿನನ್ವಯ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಡಿ.6ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಎಂ.ಆರ್.ಎಚ್.ಎಸ್. ಪ್ರಗತಿಪರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಜೆ. ಅಬ್ರಾಹಾಂ ಹೊನ್ನಟಿಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಪ್ರಭಾವಿ ಮುಖಂಡರೊಬ್ಬರು ಜಿಲ್ಲೆಯಲ್ಲಿ ಅನೇಕ ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಬಡವರಿಗೆ ಸರಕಾರದಿಂದ ದೊರೆಯುತ್ತಿರುವ ಅನ್ನಭಾಗ್ಯದ ಅಕ್ಕಿಯನ್ನು ಕೂಡ ಬಿಡದೆ ತಮ್ಮ ಅಕ್ಕಿಗಿರಣಿಯಲ್ಲಿ ಪಾಲೀಶ್ ಮಾಡಿಸಿ ಹೆಚ್ಚಿನ ಬೆಲೆಯ ಅಕ್ಕಿಯಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ಪ್ರಶ್ನೆಮಾಡಿದ ಉನ್ನತ ಅಧಿಕಾರಿಗಳನ್ನು, ಪತ್ರಿಕಾ ವರದಿಗಾರರನ್ನು, ಸಂಘಟನೆಗಳ ಮುಖಂಡರ ಮೇಲೆ ತಮ್ಮ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ಮಾಡಿಸುತ್ತಿದ್ದಾರೆ. ಇದನ್ನು ಖಂಡಿಸಿ ಹಮ್ಮಿಕೊಂಡಿರುವ ಹೋರಾಟದಲ್ಲಿ ತಾಲೂಕಿನ ಪ್ರಗತಿಪರ ಚಿಂತಕರು ಹಾಗೂ ಸಂಘ-ಸಂಸ್ಥೆಯವರು ಭಾಗವಹಿಸುವಂತೆ ಕೋರಿದರು.
ಮುಖಂಡರಾದ ಅಶೋಕ ನಿಲೋಗಲ್, ಎ.ಕೆ. ಮರಿಯಣ್ಣ, ಪಿ.ರವಿಕುಮಾರ್, ಜಯಪ್ಪ, ಬಸವರಾಜ, ಯಲ್ಲಪ್ಪ, ಅಜೀತ್, ಗಣೇಶ, ಶಿವು, ಸಿದ್ದಪ್ಪ, ಪರಶುರಾಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Bidar: ಗುತ್ತಿಗೆದಾರರ ಬಿಲ್ ಬಾಕಿ ಉಳಿಯಲು ಬಿಜೆಪಿ ಕಾರಣ, ಗ್ಯಾರಂಟಿಯಲ್ಲ: ಜಾರಕಿಹೊಳಿ
Bidar: ಗುತ್ತಿಗೆದಾರ ಸಚಿನ್ ಕೇಸ್; ಮಾಹಿತಿ ಪಡೆದ ಡಿಐಜಿಪಿ ಶಾಂತನು ಸಿನ್ಹಾ
Gou Shala: ಆಗ ಭರ್ತಿಯಾಗಿದ್ದ ಗೋಶಾಲೆ ಈಗ ಖಾಲಿಯಾಗಿರುವುದು ಹೇಗೆ?: ಪ್ರಭು ಚವ್ಹಾಣ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.