ನಿಂತಲ್ಲೇ ಇದೆ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು
Team Udayavani, Nov 26, 2021, 3:40 AM IST
ಕದ್ರಿ: ಕೊರೊನಾ ಕಾರಣದಿಂದಾಗಿ ವರ್ಷದ ಹಿಂದೆ ಓಡಾಟ ನಿಲ್ಲಿಸಿದ್ದ ಕದ್ರಿ ಪಾರ್ಕ್‌ನ”ಬಾಲಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ದಿನದ ವರದಿ ನಿಯಂತ್ರಣಕ್ಕೆ ಬರುತ್ತಿದ್ದು, ಪ್ರವಾ ಸೋದ್ಯಮ ಕ್ಷೇತ್ರವೂ ಚೇತರಿಕೆ ಯತ್ತ ಸಾಗುತ್ತಿದೆ. ಅದ ರಂತೆ ಕದ್ರಿ ಪಾರ್ಕ್ ವೀಕ್ಷಣೆಗೆ ಬರುವವರ ಸಂಖ್ಯೆಯೂ ಏರತೊಡ ಗಿದೆ. ವೀಕೆಂಡ್ ಸಮಯದಲ್ಲಿ, ರಜಾ ದಿನಗಳಲ್ಲಂತೂ ಪುಟಾಣಿ ಮಕ್ಕಳು ಕಾಲ ಕಳೆಯಲು ಹೆತ್ತವರ ಜತೆ ಪಾರ್ಕ್‌ನಲ್ಲಿ ಬರು ತ್ತಿದ್ದಾರೆ. ಹೀಗಿದ್ದಾಗ ರೈಲಿನಲ್ಲಿ ಮಜಾ ಮಾಡೋಣ ಅಂದರೆ ಒಂದು ವರ್ಷದಿಂದ ರೈಲನ್ನು ಕೋಣೆ ಯೊಳಗೆ ಹಾಕಿ ಬೀಗ ಜಡಿಯಲಾಗಿದೆ.
ತಾಂತ್ರಿಕ ಸಮಸ್ಯೆ :
ಕದ್ರಿ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಈಗಾಗಲೇ ಹಲವಾರು ತಾಂತ್ರಿಕ ದೋಷ ಎದುರಿಸಿದೆ. ಇಂಜಿನ್ ಕೂಡ ಹಳೆಯದಾಗಿದ್ದು, ಹೊಸ ಇಂಜಿನ್ ಅಳವಡಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಈ ಹಿಂದೆ ಈ ರೈಲಿನ ವಾಲ್ ಜತೆಗೆ ಹೈಡ್ರೋಲಿಂಕ್ ಇಂಜಿನ್‌ನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ರೈಲು ಓಡಾಟದ ಟ್ರ್ಯಾಕ್ ಕೂಡ ಹಳೆಯದಾಗಿ ತುಕ್ಕು ಹಿಡಿದಿದ್ದ ಕಾರಣ ಹೊಸ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. ಈ ರೈಲಿನಲ್ಲಿ ಹೊಸ ಬೋಗಿ ಸೇರ್ಪಡೆಯ ಜತೆ ಕೇಸರಿ, ನೀಲಿ ಬಣ್ಣದಲ್ಲಿ ಬೋಗಿಗಳು ಮಕ್ಕಳನ್ನು ಆಕರ್ಷಿಸುವಂತೆ ಮಾಡ ಲಾಗಿತ್ತು. ಕಾರ್ಟೂನ್‌ಗಳನ್ನೂ ಚಿತ್ರಿಸಲಾಗಿತ್ತು. ಆ ವೇಳೆಗಾಗಲೇ ಕೊರೊನಾ ಮಹಾಮಾರಿ ಯಿಂದಾಗಿ ಸಾರ್ವಜನಿಕರಿಗೆ ಪಾರ್ಕ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ರೈಲು ಸಂಚಾರ ರದ್ದು ಗೊಳಿಸಲಾಗಿತ್ತು. ಸದ್ಯ ಪಾರ್ಕ್ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದ್ದರೂ ಪುಟಾಣಿ ರೈಲು ಸಂಚಾರ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಒಂದು ವರ್ಷದಿಂದ ರೈಲು ನಿಂತಲ್ಲೇ ಇದ್ದು, ಈಗ ರೈಲು ಸಂಚಾರ ಆರಂಭಿ ಸುವುದಾದರೂ ಕೆಲವೊಂದು ತಾಂತ್ರಿಕ ಸಮಸ್ಯೆ ಪರಿಹರಿಸಿಕೊಳ್ಳಬೇಕಷ್ಟೆ.
ನೂತನ ರೈಲಿಗೆ 2018ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ರೈಲು ಮತ್ತು ಟ್ರ್ಯಾಕ್ ಕಾಮಗಾರಿ ಸಂಪೂರ್ಣ ಗೊಂಡರೂ ಕೆಲವು ತಿಂಗಳು ರೈಲು ಓಡಾಟ ನಡೆಸಲಿಲ್ಲ. ಕೊನೆಗೆ ಪ್ರಾಯೋಗಿಕ ಸಂಚಾರ ಆರಂಭಿಸಿದರೂ ಅಧಿಕೃತವಾಗಿ ಸಂಚರಿಸಿದ್ದು ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ.
1983 ರಿಂದ ರೈಲು ಓಡಾಟ :
ಕದ್ರಿಪಾರ್ಕ್‌ನಲ್ಲಿ 1983ರಿಂದ ತನ್ನ ಓಡಾಟ ಆರಂಭಿಸಿದ್ದ “ಬಾಲಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು 2012ರ ವರೆಗೆ ನಿರಂತರವಾಗಿ ಮಕ್ಕಳ ಮನೋರಂಜನೆಯ ಭಾಗ ವಾಗಿತ್ತು. ಆದರೆ ಈ ರೈಲು ಹಿಂದೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಓಡಾಟ ನಡೆಸುತ್ತಿದ್ದದರಿಂದ ತೀರಾ ಹಳೆಯದಾಗಿತ್ತು. ಈ ಹಿನ್ನೆಲೆಯಲ್ಲಿ ಕದ್ರಿಪಾರ್ಕ್ ನಲ್ಲಿ ಹೊಸ ರೈಲು ತರುವ ಉದ್ದೇಶದಿಂದ 2013ರಲ್ಲಿ ಪುಟಾಣಿ ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸುಮಾರು ಆರೇಳು ವರ್ಷಗಳ ಕಾಲ ಮಕ್ಕಳಿಗೆ ಕದ್ರಿಪಾರ್ಕ್‌ನಲ್ಲಿ ಪುಟಾಣಿ ರೈಲಿನ ಓಡಾಟ ಇಲ್ಲವಾಗಿತ್ತು. 2018ರಲ್ಲಿ ಮತ್ತೆ ರೈಲು ಸಂಚಾರ ಆರಂಭವಾಗಿತ್ತು. ಆಗ ಮಕ್ಕಳಲ್ಲಿ ರೈಲು ಓಡಾಟದ ಆಸೆಯನ್ನು ಚಿಗುರಿಸಿತ್ತಾದರೂ ಸಮರ್ಪಕವಾಗಿ ಓಡಾಟ ಮಾತ್ರ ಆರಂಭಿಸಿರಲಿಲ್ಲ.
ಸದ್ಯದಲ್ಲೇ ಆರಂಭ: ಕಳೆದ ಕೆಲವು ತಿಂಗಳುಗಳಿಂದ ಕದ್ರಿಯಲ್ಲಿನ ಬಾಲಮಂಗಳ ಎಕ್ಸ್‌ಪ್ರೆಸ್ ಪುಟಾಣಿ ರೈಲು ಸಂಚಾರ ನಿಲ್ಲಸಿಸಲಾಗಿದೆ. ಪುನರಾರಂಭಿಸುವ ಕುರಿತಂತೆ ಈಗಾಗಲೇ ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ರೈಲು ಸಂಚಾರ ಆರಂಭಿಸುತ್ತೇವೆ.– ಪಾಪ ಬೋವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.