ಚುನಾವಣ ಆಯೋಗ ಕುರಿತ ಸುದ್ದಿ ಟ್ರ್ಯಾಕ್ಗಾಗಿ ಖಾಸಗಿ ಸಂಸ್ಥೆ!
Team Udayavani, Nov 26, 2021, 7:00 AM IST
ಹೊಸದಿಲ್ಲಿ: ಉತ್ತರಪ್ರದೇಶ ಸೇರಿ ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೇಂದ್ರ ಚುನಾವಣ ಆಯೋಗವು “ಮಾಧ್ಯಮಗಳ ಕವರೇಜ್’ ಟ್ರ್ಯಾಕ್ ಮಾಡಲು ಖಾಸಗಿ ಸಂಸ್ಥೆಯೊಂದರ ನೇಮಕಕ್ಕೆ ಮುಂದಾಗಿದೆ. ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗುತ್ತಿದ್ದು, ಚುನಾವಣ ಸುಧಾರಣೆಗೆ ಆಯೋಗವೇ ಮುನ್ನುಡಿ ಬರೆದಂತಾಗಿದೆ.
ಮುದ್ರಣ ಮಾಧ್ಯಮ, ಟಿವಿ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳ ಮುದ್ರಣ/ಪ್ರಸಾರ ಹಾಗೂ ಚುನಾವಣ ಆಯೋಗಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಟ್ರ್ಯಾಕ್ ಮಾಡಿ, ಅದರ ಆಧಾರದಲ್ಲಿ ಆ ಸಂಸ್ಥೆಯು ವರದಿ ಸಿದ್ಧಪಡಿಸಿ, ಆಯೋಗಕ್ಕೆ ಸಲ್ಲಿಸಲಿದೆ. ಇದಕ್ಕಾಗಿ ಈಗಾಗಲೇ ಸಾರ್ವಜನಿಕ ವಲಯದ ಸಂಸ್ಥೆಯಾದ ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಪ್ರಸ್ತಾವನೆಯ ಕೋರಿಕೆಯನ್ನು ಸಲ್ಲಿಸಿದೆ. ನ.30ರೊಳಗಾಗಿ ಅರ್ಹ ಸಂಸ್ಥೆಗಳು ಬಿಡ್ನಲ್ಲಿ ಭಾಗವಹಿಸುವಂತೆಯೂ ಸೂಚಿಸಲಾಗಿದೆ.
ಏಕೆ ಈ ನಿರ್ಧಾರ?: ಹಿಂದಿನ ಚುನಾವಣೆಗಳ ಸಂದರ್ಭದಲ್ಲಿ ಚುನಾವಣ ಆಯೋಗ ಕೈಗೊಂಡ ಕೆಲವು ನಿರ್ಧಾರಗಳು, ಚುನಾವಣ ಪ್ರಕ್ರಿಯೆಯ ಉಲ್ಲಂಘನೆ ವೇಳೆ ಕೈಗೊಂಡ ನಿಲುವುಗಳ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಆಯೋಗವು ಖಾಸಗಿ ಏಜೆನ್ಸಿ ನೇಮಕಕ್ಕೆ ನಿರ್ಧರಿಸಿದೆ. ಈ ಏಜೆನ್ಸಿಯು ಆಯೋಗ ಮತ್ತು ಚುನಾವಣ ಪ್ರಕ್ರಿಯೆಗೆ ಸಂಬಂಧಿಸಿ ಎಲ್ಲ ಪ್ರಮುಖ ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆಗಳು, ರಾಷ್ಟ್ರೀಯಪ್ರಾದೇಶಿಕ ಸುದ್ದಿವಾಹಿನಿಗಳಲ್ಲಿನ ವರದಿಗಳನ್ನು ಪರಿಶೀಲಿಸಲಿದೆ. ಅದರ ಆಧಾರದಲ್ಲಿ, ವಿಶ್ಲೇಷಣೆ ಬರೆದು, ಅವುಗಳನ್ನು ಧನಾತ್ಮಕ, ಋಣಾತ್ಮಕ ಮತ್ತು ನಿಷ್ಪಕ್ಷ ಎಂದು ವರ್ಗೀಕರಿಸಲಿದೆ. ಜತೆಗೆ ವರದಿಗಳನ್ನು ಬರೆದವರ ಹೆಸರು, ರಾಜ್ಯವಾರು ಕಳವಳ ಇತ್ಯಾದಿಗಳನ್ನೂ ಆಯೋಗಕ್ಕೆ ಸಲ್ಲಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.