ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ
Team Udayavani, Nov 27, 2021, 11:31 AM IST
ಮುಂಬಯಿ: ಏಳು-ಬೀಳುಗಳ ಮಧ್ಯೆ ತೃಪ್ತಿಯಿಂದ ಬಾಳುವುದೇ ಜೀವನ. ಕೋಪ, ದ್ವೇಷಗಳನ್ನು ಬಿಟ್ಟು ಹಸನ್ಮುಖದ ನಡುವೆ ಸಂಸಾರ ಸಾಗಿಸುವ ಸಣ್ಣ ಪ್ರಯತ್ನ ನಮ್ಮ ಮೋಕೆದ ಜೋಕುಲು ನಾಟಕದ ಉದ್ದೇಶ. ಮುಂಬಯಿ ಮಹಾನಗರದ ಕಲಾಜಗತ್ತು ಸಂಸ್ಥೆ ಕೂಡು ಕುಟುಂಬದ ರಂಗ ಭೂಮಿಯಾಗಿದೆ. ಕಲಾವಿದರು, ಕಲಾಪೋಷಕರು, ಕಲಾ ಪ್ರೇಕ್ಷಕರು ಇದರ ಸದಸ್ಯರು. ಇದರಲ್ಲಿ ಅಭಿನಯಿಸುವ ಯುವ ಪ್ರತಿಭೆಗಳಿಗೆ ಮುಕ್ತ ಅವಕಾಶವಿದೆ. ಹಳೇ ಬೇರಿನೊಂದಿಗೆ ಹೊಸ ಚಿಗುರನ್ನು ಪಸರಿಸಿ ನಟನ ಸಾಮರ್ಥ್ಯದಲ್ಲಿ ಕಿರಿಯರನ್ನು ಪರಿಪಕ್ವಗೊಳಿಸುವ ಪ್ರಾಮಾಣಿಕ ಸಾಧನೆ ನಮ್ಮದಾಗಿದೆ ಎಂದು ಕಲಾಜಗತ್ತು ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ನಿರ್ದೇಶಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ತೋನ್ಸೆ ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.
ನ. 25ರಂದು ಸಂಜೆ ಮೀರಾರೋಡ್ ಪೂರ್ವ, ಶೀತಲ್ ನಗರದ ಸೈಂಟ್ ಜೋಸೆಫ್ ಚರ್ಚ್ ಸಭಾಗೃಹದಲ್ಲಿ ಕಲಾಜಗತ್ತು ಸಂಸ್ಥೆಯ ಹಿರಿಯ ನಟರ ಸ್ಮರಣಾರ್ಥ ಕೊಡ ಮಾಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, 42 ವರ್ಷಗಳಿಂದ ವಿಭಿನ್ನ ಸಂದೇಶಗಳೊಂದಿಗೆ ಹಾಸ್ಯಮಯ ನಾಟಕಗಳನ್ನು ಧರ್ಮಾರ್ಥವಾಗಿ ಪ್ರದರ್ಶಿಸಿದ್ದೇವೆ. ಕಲಾಸಕ್ತ ದಾನಿಗಳ ನೆರವಿಂದ ನಮ್ಮ ಕಾರ್ಯಕ್ರಮಗಳು ಯಶಸ್ಸಿನೊಂದಿಗೆ ಮುನ್ನಡೆ ಸಾಧಿಸಿದೆ. ಆದರೆ ಇಂದು ಕೊರೊನಾ ಸಾಂಕ್ರಾಮಿಕದಿಂದ ವ್ಯವಹಾರವೇ ಸ್ಥಗಿತಗೊಂಡಿದೆ. ಕಲಾವಿದರ ಜೀವನ ಶೋಚನೀಯವಾಗಿದೆ. ಸಹೃದಯಿಗಳಾದ ತಾವೆಲ್ಲರೂ ಆರ್ಥಿಕ ನೆರವು ನೀಡಿ ತುಳು ರಂಗಭೂಮಿಯನ್ನು ಉಳಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ಕಲಾಜಗತ್ತಿನ ಹೆಸರಾಂತ ನಟರಾದ ದಿ| ವಾಮನ್ ರಾಜ್, ದಿ| ಸದಾಶಿವ ಸಾಲ್ಯಾನ್, ದಿ| ಭಾರತೀ ಕೊಡ್ಲೆಕರ್ ಮತ್ತು ದಿ| ರಮೇಶ್ ಕರ್ಕೇರ ಅವರ ಸ್ಮರಣಾರ್ಥ ಅನುಕ್ರಮವಾಗಿ ಕಲಾವಿದರಾದ ಜಿ. ಕೆ. ಕೆಂಚನಕೆರೆ, ಪ್ರತಿಭಾ ಬಂಗೇರ, ಶ್ರೀನಿಧಿ ಶೆಟ್ಟಿ ಮತ್ತು ಸುಜಾತಾ ಕೋಟ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಮೀರಾ ಭಾಯಂದರ್ ಹೊಟೇಲ್ ಅಸೋಸಿ ಯೇಶನ್ ಅಧ್ಯಕ್ಷ ಮಧುಕರ ಶೆಟ್ಟಿ, ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ| ರವಿರಾಜ ಸುವರ್ಣ, ಬಂಟ್ಸ್ ಫೋರಂ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ನವತರುಣ ಮಿತ್ರಮಂಡಳದ ಅಧ್ಯಕ್ಷ ಬಳ್ಕುಂಜೆಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ, ರಾಜಕೀಯ ಯುವ ಮುಖಂಡ ಸಚ್ಚಿದಾನಂದ ಶೆಟ್ಟಿ ಮುನ್ನಾಲಾಯಿಗುತ್ತು, ಶನಿ ಮಂದಿರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ, ಸುರೇಶ್ ಶೆಟ್ಟಿ ಗಂದರ್ವ, ಅರುಣ್ ಪಕ್ಕಳ, ಪತ್ರಕರ್ತ ವೈ. ಟಿ. ಶೆಟ್ಟಿ ಹೆಜ್ಮಾಡಿ, ವೀಣಾ ಶೆಟ್ಟಿ, ಸುಕುಮಾರ್ ಮುದ್ರಾಡಿ, ದಿವಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮೋಕೆದ ಜೋಕುಲು ನಾಲ್ಕನೇ ಪ್ರದರ್ಶನದ ನಾಟಕದಲ್ಲಿ ಡಾ| ತೋನ್ಸೆ ವಿಜಯ್ ಕುಮಾರ್ ಶೆಟ್ಟಿ, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಜಿ. ಕೆ. ಕೆಂಚನಕೆರೆ, ವೀರಜ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಪ್ರತಿಮಾ ಬಂಗೇರ, ಸುಜಾತಾ ಕೋಟ್ಯಾನ್, ಹೇಮಂತ್ ಶೆಟ್ಟಿ, ಸುರೇಶ್ ಕೆ. ಶೆಟ್ಟಿ, ಅಪೇûಾ ಶೆಟ್ಟಿ, ಶೈಲಜಾ ಶೆಟ್ಟಿ, ಶಿಲ್ಪಾ, ನಿತೇಶ್ ಪೂಜಾರಿ, ನಿಖೀಲ್ ಶೆಟ್ಟಿ, ಕೃತೇಶ್ ಅಮೀನ್, ಅಮಿತ್ ಶೆಟ್ಟಿ, ಗಣೇಶ್ ಬಂಗೇರ ಅವರು ಕಲಾವಿದರಾಗಿ ಅಭಿನಯಿಸಿದರು. ಸಂಗೀತದಲ್ಲಿ ರಾಜೇಶ್ ಹೆಗ್ಡೆ ಹೆರ್ಮುಂಡೆ, ಬೆಳಕು ಮತ್ತು ಧ್ವನಿಯಲ್ಲಿ ವೆಂಕಟೇಶ್, ಮೇಕಪ್‌ನಲ್ಲಿ ಮಂಜುನಾಥ್ ಶೆಟ್ಟಿಗಾರ್ ಸಹಕರಿಸಿದರು. ರಂಗ ಸಂಯೋಜನೆಯಲ್ಲಿ ಲೀಲಾ ಗಣೇಶ್, ಗಣೇಶ್ ಬಂಗೇರ, ಕೃಷ್ಣರಾಜ್ ಸುವರ್ಣ, ಕುಶಲ್ ಶೆಟ್ಟಿ ಪಾಲ್ಗೊಂಡರು. ಕಲಾಜಗತ್ತಿನ ಉಪಾಧ್ಯಕ್ಷ ಜಿ. ಕೆ. ಕೆಂಚನಕೆರೆ ವಂದಿಸಿದರು.
–ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.