ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು
Team Udayavani, Nov 27, 2021, 12:58 PM IST
ಕಲಬುರಗಿ: ಕಳೆದ ತಿಂಗಳು ನಗರದ ಹಳೇ ಜೇವರ್ಗಿ ರಸ್ತೆಯ ಕೆಇಬಿ ಕ್ವಾಟರ್ಸ್ ಹಾಗೂ ವಾರದ ಹಿಂದೆ ಮಹಾವೀರ ನಗರದಲ್ಲಿ ನಡೆದಿದ್ದ ಎರಡು ಮನೆಗಳ್ಳತನ ಪ್ರಕರಣವನ್ನು ಇಲ್ಲಿನ ಸ್ಟೇಷನ್ ಬಜಾರ ಪೊಲೀಸ್‌ರು ಭೇದಿಸಿ, ಇಬ್ಬರು ಆರೋಪಿತರನ್ನು ಚಿನ್ನಾಭರಣ ಹಾಗೂ ಇತರ ಸಾಮಗ್ರಿಗಳ ಸಮೇತ ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 13ರಂದು ಕೆಇಬಿ ಕ್ವಾಟರ್ಸ್‌ದಲ್ಲಿನ ರೇವಣಸಿದ್ದಪ್ಪ ಸುಭಾಷ ಹಂಗರಗಿ ಎನ್ನುವರ ಮನೆಯ ಹಿಂದಿನ ಬಾಗಿಲು ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. 10 ಗ್ರಾಂ ಬಂಗಾರದ ಲಾಕೇಟ್, 6 ಗ್ರಾಂ ಕಿವಿ ಜುಮುಕಿ, ನಗರದ 50 ಸಾವಿರ ರೂ., 30 ಗ್ರಾಂ ಬೆಳ್ಳಿಯ ಕಾಲ್‌ಚೈನ್, 50 ಗ್ರಾಂ ಬೆಳ್ಳಿಯ ಜುಮುಕಿ, 32 ಇಂಚಿನ ಟಿವಿ ಸೇರಿ ಒಟ್ಟಾರೆ 1.73 500ರೂ. ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದ್ದವು.
ಅದೇ ರೀತಿ ಹೊಸ ಜೇವರ್ಗಿ ರಸ್ತೆಯ ಕೋಠಾರಿ ಭವನದ ಹಿಂಭಾಗದ ಮಹಾವೀರ ನಗರದಲ್ಲಿ ಮನೆಯೊಂದರ ಬೀಗವನ್ನು ಕಬ್ಬಿಣದ ರಾಡ್‌ನಿಂದ ಮುರಿದು ಕಳ್ಳತನ ಮಾಡಲಾಗಿತ್ತು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಬರಾಬಾದ್ ಕ್ರಾಸನ್ ಸೈಯದ್ ವಾಹೀದ ಅಲಿ ಬಾಬುಮಿಯಾ ಅತ್ತಾರ, ಕಣ್ಣಿ ಮಾರುಕಟ್ಟೆಯಲ್ಲಿ ಹಣ್ಣಿನ ಬಂಡೆ ವ್ಯಾಪಾರಿ ಹಾಗೂ ಗಾಲೀಬ ಕಾಲೋನಿಯ ಮಹ್ಮದ್ ಸೊಹೆಲ್ ಮಹಮ್ಮದ್ ಇಲಿಯಾಸ್ ಖಾನ್, ನೀರಿನ ವಾಹನ ಚಾಲಕ ಎಂಬಿಬ್ಬರನ್ನು ಬಂಧಿಸಿ ಬಂಗಾರದೊಡವೆ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆ 1.50 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತ ವೈ.ಎಸ್. ರವಿಕುಮಾರ ನಿರ್ದೇಶನ, ಉಪ ಪೊಲೀಸ್ ಆಯುಕ್ತರಾದ ಅಡ್ಮೂರು ಶ್ರೀನಿವಾಸಲು, ಶ್ರೀಕಾಂತ ಕಟ್ಟಿಮನಿ, ಸಹಾಯಕ ಪೊಲೀಸ್ ಆಯುಕ್ತ ಅಂಶುಕುಮಾರ ನೇತೃತ್ವದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಿದ್ಧರಾಮೇಶ್ವರ ಗಡದ್ ಹಾಗೂ ಸಿಬ್ಬಂದಿಗಳಾದ ನಜುಮೊದ್ದೀನ್, ದೇವೇಂದ್ರ ಜಯಭೀಮ, ಮಲ್ಲಿಕಾರ್ಜುನ, ಫೀರೋಜ್, ಬೋಗೇಶ, ಮೊಶಿನ್ ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.