![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 27, 2021, 3:16 PM IST
ತೀರ್ಥಹಳ್ಳಿ: ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿಯು ತಾಲೂಕಿನ 38 ಗ್ರಾಮ ಪಂಚಾಯತಿಗಳಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿಯಲ್ಲಿ ಒಂದಾಗಿದೆ. ಈ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಸಾವಿರಾರು ಹಳೆಯ ಹಂಚುಗಳು ಗ್ರಾಮ ಪಂಚಾಯತಿಯ ಆವರಣದ ಪಕ್ಕದಲ್ಲಿಯೇ ದಾಸ್ತಾನು ಇಟ್ಟಿದ್ದು ಇಂದು ಕೊನೆಯ ಶನಿವಾರ ಸರ್ಕಾರಿ ರಜೆಯಿದ್ದು ಗ್ರಾಮ ಪಂಚಾಯತಿಯ ಯಾರೊಬ್ಬರೂ ಸಿಬ್ಬಂದಿಯೂ ಕೂಡ ಇಲ್ಲದ ಸಮಯದಲ್ಲಿ ಹಂಚುಗಳನ್ನು ವಾಹನವೊಂದಕ್ಕೆ ತುಂಬುತ್ತಿದ್ದರು ಎನ್ನಲಾಗಿದೆ.
ವಿಷಯ ತಿಳಿದ ಮೇಲಿನ ಕುರುವಳ್ಳಿ ದೇವರಾಜ್ ರವರು ಇದನ್ನು ಪ್ರಶ್ನಿಸಿದ್ದಾರೆ. ಪ್ರಶ್ನಿಸಿದ ಕೆಲವೇ ಸಮಯದಲ್ಲಿ ವಾಹನಕ್ಕೆ ತುಂಬಿದ ಪೂರ್ಣ ಹಂಚುಗಳನ್ನು ವಾಪಸ್ಸು ಇಳಿಸಿದ್ದಾರೆ. ಹಂಚು ವಾಪಾಸ್ಸು ಇಳಿಸುತ್ತಿದ್ದಂತೆ ಸಂಶಯಗೊಂಡ ದೇವರಾಜ್‌ರವರು ಗ್ರಾಮ ಪಂಚಾಯತಿ ಗೇಟಿಗೆ ಹೊಸದೊಂದು ಬೀಗ ಖರೀದಿಸಿ ತಂದು ಬೀಗ ಹಾಕಿದ್ದಾರೆ ಎನ್ನಲಾಗಿದೆ.
ಈ ಗ್ರಾಮ ಪಂಚಾಯತಿಯ ಆವರಣದಲ್ಲಿ ಸಾವಿರಾರು ರೂಪಾಯಿ ಬೆಲೆಬಾಳುವ ಕುಡಿಯುವ ನೀರಿನ ಹೆಚ್‌ಡಿಎಫ್‌ಸಿ ಪೈಪುಗಳನ್ನು ಅನೇಕ ತಿಂಗಳುಗಳಿಂದ ದಾಸ್ತಾನು ಮಾಡಿದ್ದಾರೆ ಆದರೂ ಕೂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಗೇಟಿಗೆ ಬೀಗ ಹಾಕಲು ಮುಂದಾಗಿಲ್ಲ. ಗ್ರಾಮ ಪಂಚಾಯತಿಯಲ್ಲಿ ಸಿಸಿಟಿವಿ ಇದ್ದರೂ ಕೂಡ ಉಪಯೋಗಕ್ಕೆ ಬಾರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಗಮನಿಸಿ ಸೂಕ್ತ ಕ್ರಮ ಜರುಗಸಲಿ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
You seem to have an Ad Blocker on.
To continue reading, please turn it off or whitelist Udayavani.