ಒಮಿಕ್ರಾನ್ ಏನಿದರ ಸ್ವರೂಪ, ಏಕೆ ಆತಂಕ?
Team Udayavani, Nov 28, 2021, 6:20 AM IST
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿಯಾದ ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ಈಗ ಆತಂಕಗೊಂಡಿದೆ. ಈ ಹಿಂದಿನ ಎಲ್ಲಾ ಕೊರೊನಾ ವೈರಾಣುಗಳಿಗಿಂತ ಹೆಚ್ಚು ಪ್ರಸರಣ ಶಕ್ತಿ ಹಾಗೂ ಹೆಚ್ಚು ಪರಿಣಾಮಕಾರಿ ಗುಣಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಆತಂಕಕಾರಿ ರೂಪಾಂತರಿ ಎಂದು ಘೋಷಿಸಿದೆ. ಈ ರೂಪಾಂತರಿಯ ಪ್ರಮುಖಾಂಶ ಇಲ್ಲಿವೆ.
ಪತ್ತೆಯಾಗಿದ್ದು ಯಾವಾಗ?
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ, ಅಲ್ಲಿನ ಆರೋಗ್ಯ ಇಲಾಖೆ ಹೆಚ್ಚಿನ ಮಟ್ಟದ ತಪಾಸಣೆಗಳನ್ನು ನಡೆಸುತ್ತಿತ್ತು. ನ. 22-23ರಂದು ಅಲ್ಲಿ ಎರಡೇ ದಿನಗಳಲ್ಲಿ 2,465 ಪ್ರಕರಣಗಳು ಪತ್ತೆಯಾಗಿದ್ದವು. ಅವರಿಂದ ಪಡೆಯಲಾದ ಸ್ಯಾಂಪಲ್‌ಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು.
ಒಮಿಕ್ರಾನ್‌ನ ಪ್ರಧಾನ ಅಂಶವೇನು?
ಕೊರೊನಾ ವೈರಾಣುವಿನ ಮೇಲೆ ಮುಳ್ಳಿನಾಕಾರದ ಪ್ರೊಟೀನ್ ಯುಕ್ತ ಅಂಗಾಶಗಳಿವೆ. ಇವನ್ನು ಸ್ಪೈಕ್‌ಗಳೆಂದು ಕರೆಯುತ್ತಾರೆ. ಮನುಷ್ಯನ ದೇಹದಲ್ಲಿನ ಜೀವಾಂಶಗಳಿಗೆ ಅಂಟಿಕೊಳ್ಳಲು ಈ ಪ್ರೊಟೀನ್ ಸ್ಪೈಕ್‌ಗಳೇ ಕಾರಣ. ಒಮಿಕ್ರಾನ್ ರೂಪಾಂತರಿಯಲ್ಲಿ ಇರುವ ಈ ಸ್ಪೈಕ್‌ಗಳಲ್ಲಿನ ಪ್ರೊಟೀನ್ 30 ಬಾರಿ ರೂಪಾಂತರ ಹೊಂದಿದ್ದು, ಇವು ಹಿಂದಿನ ರೂಪಾಂತರಿಗಿಂತ ಹೆಚ್ಚು ಬಲಿಷ್ಠವಾಗಿವೆ.
ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ : ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ
ಡೆಲ್ಟಾಕ್ಕೂ ಇದಕ್ಕೂ ಏನು ವ್ಯತ್ಯಾಸ?
ಪ್ರೊಟೀನ್ ಸ್ಪೈಕ್‌ಗಳ ತುದಿಯಲ್ಲಿರುವ ರಿಸಿಪ್ಟರ್ ಬೈಡಿಂಗ್ ಡೊಮೇನ್ (ಆರ್‌ಬಿಡಿ) 10 ಬಾರಿ ರೂಪಾಂ ತರ ಹೊಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಹಿಂದಿನ ಕೊರೊನಾ ರೂಪಾಂತರಿಯಾದ ಡೆಲ್ಟಾದಲ್ಲಿ ಕೇವಲ 2 ಬಾರಿ ರೂಪಾಂತರಗೊಂಡ ಆರ್‌ಬಿಡಿ ಇತ್ತು.
ಇದು ಅಪಾಯಕಾರಿ ಹೇಗೆ?
ಅಸಲಿಗೆ, ನಮ್ಮಲ್ಲಿರುವ ಕೊರೊನಾ ಲಸಿಕೆಗಳಲ್ಲಿರುವ ಪ್ರತಿ ಕಾಯಗಳು ಈ ಸ್ಪೈಕ್‌ಗಳನ್ನು ಸುತ್ತುವರಿದೆ ಅವುಗಳು ಮನು ಷ್ಯನ ದೇಹದ ಜೀವಕಣಗಳ ರಿಸಿಪ್ಟರ್‌ಗಳೊಂದಿಗೆ ಸಂಯೋಗ ಹೊಂದುವುದನ್ನು ತಡೆಯುತ್ತದೆ. ಆದರೆ ಒಮಿಕ್ರಾನ್‌ನಲ್ಲಿರುವ ಸ್ಪೈಕ್‌ಗಳು ಕನಿಷ್ಟ 30 ಪೀಳಿಗೆಯನ್ನು (ರೂಪಾಂತರ) ದಾಟಿ ಬಂದಿರುವುದರಿಂದ ಇವು ಹೆಚ್ಚು ಬಲಿಷ್ಠವಾಗಿದೆ. ಅಂದರೆ, ಈಗ ಲಭ್ಯವಿರುವ ಲಸಿಕೆಗಳು ಈ ಪ್ರೋಟೀನ್‌ಗಳನ್ನು ನಿಷ್ಕ್ರಿಯ ಗೊಳಿಸುವುದು ಅನುಮಾನ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಈಗಲೇ ಹೇಳಲಾಗದು. ಸೂಕ್ತ ಅಧ್ಯಯನಗಳನ್ನು ನಡೆಸಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.