ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್ : ಏನಿದರ ಸ್ವರೂಪ, ಏಕೆ ಆತಂಕ?
Team Udayavani, Nov 28, 2021, 7:52 AM IST
ಪತ್ತೆಯಾಗಿದ್ದು ಯಾವಾಗ? : ಇತ್ತೀಚಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಹಾಗಾಗಿ, ಅಲ್ಲಿನ ಆರೋಗ್ಯ ಇಲಾಖೆ ಹೆಚ್ಚಿನ ಮಟ್ಟದ ತಪಾಸಣೆಗಳನ್ನು ನಡೆಸುತ್ತಿತ್ತು. ನ. 22-23ರಂದು ಅಲ್ಲಿ ಎರಡೇ ದಿನಗಳಲ್ಲಿ 2,465 ಪ್ರಕರಣಗಳು ಪತ್ತೆಯಾಗಿದ್ದವು. ಅವರಿಂದ ಪಡೆಯ ಲಾದ ಸ್ಯಾಂಪಲ್‌ಗಳಲ್ಲಿ ಈ ಹೊಸ ರೂಪಾಂತರಿ ಪತ್ತೆಯಾಗಿತ್ತು.
ಒಮಿಕ್ರಾನ್‌ನ ಪ್ರಧಾನ ಅಂಶವೇನು? ಕೊರೊನಾ ವೈರಾಣುವಿನ ಮೇಲೆ ಮುಳ್ಳಿನಾಕಾರದ ಪ್ರೊಟೀನ್ ಯುಕ್ತ ಅಂಗಾಶಗಳಿವೆ. ಇವನ್ನು ಸ್ಪೈಕ್‌ಗಳೆಂದು ಕರೆಯುತ್ತಾರೆ. ಮನುಷ್ಯನ ದೇಹದಲ್ಲಿನ ಜೀವಾಂಶಗಳಿಗೆ ಅಂಟಿಕೊಳ್ಳಲು ಈ ಪ್ರೊಟೀನ್ ಸ್ಪೈಕ್‌ಗಳೇ ಕಾರಣ. ಒಮಿಕ್ರಾನ್ ರೂಪಾಂತರಿಯಲ್ಲಿ ಇರುವ ಈ ಸ್ಪೈಕ್‌ಗಳಲ್ಲಿನ ಪ್ರೊಟೀನ್ 30 ಬಾರಿ ರೂಪಾಂತರ ಹೊಂದಿದ್ದು, ಇವು ಹಿಂದಿನ ರೂಪಾಂತರಿಗಿಂತ ಹೆಚ್ಚು ಬಲಿಷ್ಠವಾಗಿವೆ.
ಇದು ಅಪಾಯಕಾರಿ ಹೇಗೆ? ಅಸಲಿಗೆ, ನಮ್ಮಲ್ಲಿರುವ ಕೊರೊನಾ ಲಸಿಕೆಗಳಲ್ಲಿರುವ ಪ್ರತಿ ಕಾಯಗಳು ಈ ಸ್ಪೈಕ್‌ಗಳನ್ನು ಸುತ್ತುವರಿದೆ ಅವುಗಳು ಮನುಷ್ಯನ ದೇಹದ ಜೀವಕಣಗಳ ರಿಸಿಪ್ಟರ್‌ಗಳೊಂದಿಗೆ ಸಂಯೋಗ ಹೊಂದುವುದನ್ನು ತಡೆಯುತ್ತದೆ. ಆದರೆ, ಒಮಿಕ್ರಾನ್‌ನಲ್ಲಿರುವ ಸ್ಪೈಕ್‌ಗಳು ಕನಿಷ್ಟ 30 ಪೀಳಿಗೆಯನ್ನು (ರೂಪಾಂತರ) ದಾಟಿ ಬಂದಿರುವುದರಿಂದ ಇವು ಹೆಚ್ಚು ಬಲಿಷ್ಠವಾಗಿದೆ.
ಅಂದರೆ, ಈಗ ಲಭ್ಯವಿರುವ ಲಸಿಕೆಗಳು ಈ ಪ್ರೋಟೀನ್‌ಗಳನ್ನು ನಿಷ್ಕ್ರಿಯ ಗೊಳಿಸುವುದು ಅನುಮಾನ ಎಂದು ಹೇಳಲಾಗಿದೆ. ಆದರೆ, ಇದರ ಬಗ್ಗೆ ಈಗಲೇ ಹೇಳಲಾಗದು. ಸೂಕ್ತ ಅಧ್ಯಯನಗಳನ್ನು ನಡೆಸಬೇಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.