ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ
Team Udayavani, Nov 28, 2021, 8:39 AM IST
ನವದೆಹಲಿ: ಪತ್ನಿಯ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತ ಪತಿಯು ತನ್ನ ಪತ್ನಿಗೆ ಥಳಿಸಿದರೆ ಅದು ತಪ್ಪೇ? ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ಸುಮಾರು 18 ರಾಜ್ಯಗಳು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾಗಿದ್ದ “ನ್ಯಾಷನಲ್ ಫ್ಯಾಮಿಲಿ ಹೆಲ್ತ್’ ಸಮೀಕ್ಷೆಗೆ ಬಹುತೇಕರು ಅದು ಸರಿ ಎಂದಿದ್ದಾರೆ. ಅವರಲ್ಲಿ ತೆಲಂಗಾಣದ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ.
“ಪತಿಗೆ ಹೇಳದೆಯೇ ಹೊರಗೆ ಸುತ್ತಾಡಲು ಹೋಗುವುದು, ಮನೆ ಅಥವಾ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುವುದು, ಸಣ್ಣ ಸಣ್ಣ ವಿಚಾರಕ್ಕೂ ಪತಿಯ ಜೊತೆಗೆ ಜಗಳವಾಡುವುದು, ಲೈಂಗಿಕ ಸಂಬಂಧಕೆ ಒಲ್ಲೆ ಎನ್ನುವುದು, ಅಡುಗೆ ಹಾಳುಗೆಡವುವುದು, ಆಕೆಯ ನಡತೆ ಅನುಮಾನಾಸ್ಪದವಾಗಿ ಇರುವುದು..’ ಈ ಏಳು ಕಾರಣ ಗಳಿಗೆ ಪತಿಯು ಪತ್ನಿಯ ಮೇಲೆ ಕೈ ಮಾಡಿದರೆ ಅದು ಸರಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ:ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್ : ಏನಿದರ ಸ್ವರೂಪ, ಏಕೆ ಆತಂಕ?
ತೆಲಂಗಾಣದ ಶೇ. 83.8ರಷ್ಟು ಮಹಿಳೆಯರು ಈ ಏಳು ಕಾರಣಗಳಡಿ ಪತಿಯು ಪತ್ನಿಯ ಮೇಲೆ ಕೈ ಮಾಡುವುದು ಸರಿ ಎಂದಿದ್ದರೆ, ಹಿಮಾಚಲ ಪ್ರದೇಶದಲ್ಲಿ ಇಂಥ ಮಹಿಳೆಯರ ಸಂಖ್ಯೆ ಕಡಿಮೆ (ಶೇ. 14.8) ಇದೆ. ಸಮೀಕ್ಷೆಗೆ ಉತ್ತರಿಸಿದ ಪುರುಷರಲ್ಲಿ, ಮೇಲಿನ ಕಾರಣಗಳಿಗೆ ಪತ್ನಿಯನ್ನು ದಂಡಿಸುವವರು ಅತಿ ಹೆಚ್ಚು ಜನ ಕರ್ನಾಟಕದವರೇ (ಶೇ. 81.9) ಆಗಿದ್ದಾರೆ. ಅತಿ ಕಡಿಮೆ ಎಂದರೆ ಹಿಮಾಚಲ ಪ್ರದೇಶದವರು (ಶೇ. 14.2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.