ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

ಅಮೆರಿಕದ ಆಡಳಿತದ ಚುಕ್ಕಾಣಿ ಸಮರ್ಥ ಜೋಡಿಯೊಂದರ ಕೈಗೆ ಸಿಕ್ಕಿತು ಎಂದು ಭಾವಿಸಿದ್ದರು

Team Udayavani, Nov 29, 2021, 2:10 PM IST

ಇಷ್ಟು ಬೇಗ ಹಳಸಿತೇ ಕಮಲಾ-ಬೈಡೆನ್‌ ಸಂಬಂಧ?

“ವೀ ಡಿಡ್‌ ಇಟ್‌ ಜೋ'(We did it Joe)  ಈ ವಾಕ್ಯವನ್ನು ಯಾರು, ಯಾರಿಗೆ, ಯಾವಾಗ ಹೇಳಿದರು?ಜಾಗತಿಕ ರಾಜಕೀಯ ವಿದ್ಯಮಾನಗಳ ಬಗ್ಗೆ ಆಸಕ್ತಿ ಇರುವವರಿಗೆ ಉತ್ತರ ತತ್‌ಕ್ಷಣ ಹೊಳೆದಿರುತ್ತದೆ. ಅಲ್ಲದವರಿಗೂ ಗೊತ್ತಾಗಬಹುದು. ಏಕೆಂದರೆ ಈ ಆಪ್ತ ಸಂಭಾಷಣೆಯ ವೀಡಿಯೋ ಕೆಲವು ತಿಂಗಳವರೆಗೂ ವಾಟ್ಸ್‌ಆ್ಯಪ್‌, ಟ್ವಿಟರ್‌, ಫೇಸ್‌ಬುಕ್‌ನಲ್ಲಿ ನಿರಂತರ ಹರಿದಾಡಿತ್ತು. ಈ ವಾಕ್ಯವನ್ನು ಹೇಳಿದವರು, ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌. ಅಮೆರಿಕದ ಅಧ್ಯಕ್ಷ ಜೋಸೆಫ್ ರಾಬಿನೆಟ್‌ ಬೈಡೆನ್‌ ಉರುಫ್ ಜೋ ಬೈಡೆನ್‌ ಅವರಿಗೆ ಹೇಳಿದ್ದು. ಯಾವಾಗ ಎಂದರೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟಿಕ್‌ ಪಕ್ಷ ಬಹುಮತ ಸಾಧಿಸಿದಾಗ. ದಿನಗಟ್ಟಲೆ ನಡೆದಿದ್ದ ಮತ ಎಣಿಕೆ ಪೂರ್ಣಗೊಂಡು 2020ರ ನ.7ರಂದು ಬೆಳಗ್ಗೆ ಫ‌ಲಿತಾಂಶ ಪ್ರಕಟವಾಗುತ್ತಿದ್ದಂತೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಪಟ್ಟಕ್ಕೇರಬೇಕಾಗಿದ್ದ ಜೋ ಬೈಡೆನ್‌ ಅವರಿಗೆ ಕರೆ ಮಾಡಿ, “ಕೊನೆಗೂ ನಾವು ಜಯಶಾಲಿಯಾದೆವು ಜೋ’ ಎಂದು ಹೇಳಿದ ಸಂದರ್ಭವಿದು. ಪಾರ್ಕ್‌ನಲ್ಲಿ ಮುಂಜಾನೆಯ ಜಾಗಿಂಗ್‌ನಲ್ಲಿ ತೊಡಗಿದ್ದ ಕಮಲಾ ಅವರು ಅಲ್ಲಿಂದಲೇ ಕರೆ ಮಾಡಿ ಮಾತನಾಡುವುದನ್ನು ಯಾರೋ ಚಿತ್ರೀಕರಿಸಿದ್ದರು.

ನಿರುದ್ಯೋಗ, ಕೊರೊನಾ ಸೋಂಕು, ಲಾಕ್‌ಡೌನ್‌, ಜನಾಂಗೀಯ ತಾರತಮ್ಯ, ಜಾರ್ಜ್‌ ಫ್ಲಾಯ್ಡ ಹತ್ಯೆ ಬಳಿಕ ಉಂಟಾದ ಗಲಾಟೆ ಹಾಗೂ ಆ ಮೊದಲು ಅಧ್ಯಕ್ಷರಾಗಿದ್ದ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್ ಟ್ರಂಪ್ ರ ಬಾಯಿಬಡುಕ ಸ್ವಭಾವದಿಂದ ಬೇಸತ್ತಿದ್ದ ಅಮೆರಿಕ ಪ್ರಜೆಗಳಿಗೆ ಬೈಡೆನ್‌ -ಕಮಲಾ ಜೋಡಿಯ ಈ ಸಂಭ್ರಮದ ಮಾತುಕತೆ ಹೊಸ ಭರವಸೆ ಹುಟ್ಟುಹಾಕಿತ್ತು. ಇತರ ದೇಶಗಳ ಜನರೂ ವೀಡಿಯೋ ನೋಡಿ ಬೆರಗಾ ಗಿದ್ದರು. ಭಾರತೀಯರಂತೂ, “ರಾಜಕಾರಣಿಗಳು ಇಷ್ಟು ಆತ್ಮೀಯವಾಗಿರುತ್ತಾರಾ? ನಮ್ಮಲ್ಲಿ ಕಾಲೆಳೆಯುವ ಪ್ರಸಂಗಗಳೇ ಜಾಸ್ತಿ’ ಎಂದು ಮಾತಾಡಿಕೊಂಡಿದ್ದರು.

ರಿಪಬ್ಲಿಕನ್‌ ಆಡಳಿತ ಅಂತ್ಯಗೊಂಡು, ಡೆಮಾಕ್ರಾಟ್‌ ಸೂರ್ಯ ಉದಯಿಸಿದಾಗ ಬೆಂಬಲಿಗರು ಸಂಭ್ರಮಿಸಿದ್ದರು. ವಿಶ್ವದ ದೊಡ್ಡಣ್ಣನೆಂಬ ಖ್ಯಾತಿ ಹೊಂದಿರುವ ಅಮೆರಿಕದ ಆಡಳಿತದ ಚುಕ್ಕಾಣಿ ಸಮರ್ಥ ಜೋಡಿಯೊಂದರ ಕೈಗೆ ಸಿಕ್ಕಿತು ಎಂದು ಭಾವಿಸಿದ್ದರು. ಬೈಡೆನ್‌ ಹಾಗೂ ಕಮಲಾ ಜತೆಯಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ ಎಂದುಕೊಂಡರು. ಆ ರೀತಿ ಆಗುತ್ತಿದೆಯೇ ಎಂಬುದು ಈಗಿನ ಪ್ರಶ್ನೆ. ಹಲವು ರಾಜಕೀಯ ವಿಶ್ಲೇಷಕರ ಪ್ರಕಾರ, ಭರವಸೆ ಹುಸಿಯಾಗಿದೆ. ಆಡಳಿತ ಯಂತ್ರ ಹಳಿ ತಪ್ಪಿದೆ.

ಅಧ್ಯಕ್ಷ ಬೈಡೆನ್‌ ಮತ್ತು ಉಪಾಧ್ಯಕ್ಷೆ ಕಮಲಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸಂಗತಿ ಈಗ ಜಗಜ್ಜಾಹೀರಾಗತೊಡಗಿದೆ. ಆರಂಭದಲ್ಲಿ ಎರಡು ದೈತ್ಯ ಶಕ್ತಿಗಳಂತೆ ಜನರಿಗೆ ದರ್ಶನ ನೀಡುತ್ತಿದ್ದ ಅವರು, ಈಗ ನಾನೊಂದು ತೀರ, ನೀನೊಂದು ತೀರ ಎನ್ನುತ್ತಿದ್ದಾರೆ. ಎದುರಿಗೆ ಸಿಕ್ಕರೂ ಪರಸ್ಪರ ಮುಖ ನೋಡದಷ್ಟು ಬೇಸರ ಮೂಡಿದೆ ಅವರೊಳಗೆ. ಅಮೆರಿಕ ರಾಜಕೀಯವನ್ನು ಸೂಕ್ಷ¾ ಕಣ್ಣುಗಳಿಂದ ನೋಡುತ್ತಿರುವವರಿಗೆ ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ. ಅಂದಹಾಗೆ, ಟ್ರಂಪ್‌ರಂಥ ದಿಗ್ಗಜನನ್ನು ಸೋಲಿಸಿ ಶ್ವೇತಭವನ ಪ್ರವೇಶಿಸಿದ್ದ ಬೈಡೆನ್‌-ಹ್ಯಾರಿಸ್‌ ಮಧ್ಯೆ ಆಗಿರುವುದಾದರೂ ಏನು?

ಕಮಲಾರನ್ನು ಡೆಮಾಕ್ರಾಟ್‌ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿ ಎಂದು ಬಿಂಬಿಸುತ್ತಾ, ಅವರಿಗೆ ಬೆಂಬಲ ನೀಡಬೇಕಾಗಿದ್ದ ಬೈಡೆನ್‌ ಅವರು, ಉದ್ದೇಶಪೂರ್ವಕ ವಾಗಿ ಅವರನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ಕಮಲಾ ಗುಂಪಿನೊಳಗಿನ ತಳಮಳ. ಅತ್ತ 78 ವರ್ಷದ ಬೈಡೆನ್‌ ಅಮೆರಿಕದ ಇತಿಹಾಸ ಕಂಡ ಅಧ್ಯಕ್ಷರಲ್ಲೇ ಹಿರೀಕ. ಡೆಮಾಕ್ರಾಟಿಕ್‌ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಗೊಂಡಾಗಲೇ “ನಾನೊಂದು ಸೇತು ಅಷ್ಟೇ’ ಎಂದವರು ಹೇಳಿದ್ದರು. ಚುನಾವಣೆಗೂ ಮುನ್ನ ಸಂದರ್ಶನವೊಂದರಲ್ಲಿ, “ಪಕ್ಷದ ಯುವ ಅಭ್ಯರ್ಥಿಗಳು ಮುನ್ನೆಲೆಗೆ ಬರುವವರೆಗೆ ಮಾತ್ರ ನನ್ನ ಕಾಯಕ. ನನಗೆ ಬೆಂಬಲವಾಗಿ ನಿಂತಿರುವ ಯುವ ನಾಯಕರೇ ದೇಶದ ಭವಿಷ್ಯ. ಅವರನ್ನು ಉನ್ನತ ಹುದ್ದೆಗೇರಿಸುವುದೇ ನನ್ನ ಗುರಿ’ ಎಂದಿದ್ದರು. ಪೂರಕವೆಂಬಂತೆ, ಉಪಾಧ್ಯಕ್ಷ ಸ್ಥಾನದ ವಿಚಾರ ಬಂದಾಗ ಕಮಲಾ ಕಡೆ ಬೆಟ್ಟು ಮಾಡಿದ್ದರು. ಆ ಮೂಲಕ ಡೆಮಾಕ್ರಾಟ್‌ಗಳಿಗೂ ಭವಿಷ್ಯದ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ರವಾನೆಯಾಗಿತ್ತು.

ಇದನ್ನೂ ಓದಿ:ಮಹಾ ಸರ್ಕಾರಕ್ಕೆ 2 ವರ್ಷ: ಖುಷಿ ಹಂಚಿಕೊಂಡ ಸಿಎಂ

ಇವರಿಬ್ಬರೂ ಅಧಿಕಾರ ವಹಿಸಿ ಇನ್ನೂ ಒಂದು ವರ್ಷ ಸಂದಿಲ್ಲ. ಅಷ್ಟರಲ್ಲೇ ಮನಸ್ತಾಪ ಎದ್ದು ಕಾಣಿಸತೊಡಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಪೂ›ವಲ್‌ ರೇಟಿಂಗ್‌ನಲ್ಲಿ ಕಮಲಾ ಹ್ಯಾರಿಸ್‌ ಅವರ ಜನಪ್ರಿಯತೆ ಶೇ.28ಕ್ಕಿಳಿದಿದೆ. ಕಮಲಾರನ್ನು ಬೈಡೆನ್‌ ನಿರ್ಲ ಕ್ಷಿಸುತ್ತಿರುವುದೇ ಇದಕ್ಕೆ ಕಾರಣ ಎಂದೂ ಹೇಳಲಾಗಿದೆ. ಅಮೆರಿಕದಲ್ಲಿ ಕಪ್ಪುವರ್ಣೀಯ ಮಹಿಳಾ ನಾಯಕತ್ವಕ್ಕೆ ಇದ್ದ ಕೊರತೆಯನ್ನು ಕಮಲಾ ತುಂಬಿದ್ದಾರೆ. ಡೈನಾಮಿಕ್‌ ನಾಯಕಿಯೂ, ಉತ್ತಮ ವಾಗ್ಮಿಯೂ ಆಗಿರುವ ಅವರು ಮುಂದಿನ ಡೆಮಾಕ್ರಾಟ್‌ ಅಧ್ಯಕ್ಷರಾಗಲು ಅರ್ಹ ವ್ಯಕ್ತಿ. ಆದರೆ ಬೈಡೆನ್‌ಗೆ ಮಾತ್ರ ಇದು ಕಹಿ ಸತ್ಯ.

ಬೈಡೆನ್‌ ವಿರುದ್ಧ ಅಸಮಾಧಾನ?: ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ 7 ತಿಂಗಳು ಎಲ್ಲವೂ ಸರಿಯಾಗಿತ್ತು. ಟ್ರಂಪ್‌ ಎಷ್ಟೇ ಬಾಯಿ ಬಡಿದು ಕೊಂಡರೂ ಬೈಡೆನ್‌ ಬಹಳ ಶಾಂತ ಮೂರ್ತಿಯಾಗಿದ್ದರು. ಕೊರೊನಾ ಲಸಿಕೆ ವಿತರಣೆಗೆ ವೇಗ ನೀಡುತ್ತಾ, ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸುತ್ತಾ ಶೇ.50ಕ್ಕಿಂತಲೂ ಹೆಚ್ಚು ಅಮೆರಿಕನ್ನರಿಂದ ಶಹಬ್ಟಾಸ್‌ಗಿರಿ ಗಳಿಸಿದ್ದರು. ಬೈಡೆನ್‌ ಮತ್ತು ಕಮಲಾ ಬಹಳ ಉತ್ಸಾಹದಲ್ಲಿ ಎಲ್ಲ ಸಾರ್ವಜನಿಕ ಸಭೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಆದರೆ ಕೆಲವೇ ತಿಂಗಳಲ್ಲಿ ಈ ಸನ್ನಿವೇಶ ಸಂಪೂರ್ಣ ಬದಲಾಯಿತು. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅನಿರೀಕ್ಷಿತ ಏರಿಕೆ, ಗಣನೀಯ ಪ್ರಮಾಣದಲ್ಲಾದ ಸಾವು, ಆರ್ಥಿಕ ಬಿಕ್ಕಟ್ಟು, ಅಫ್ಘಾನಿಸ್ಥಾನದಿಂದ ಸೇನೆ ಹಿಂಪಡೆತದ ನಿರ್ಧಾರ, ಕಾಂಗ್ರೆಸ್‌ನೊಳಗಿನ ಒಳಜಗಳಗಳು ಏಕಾಏಕಿ ಬೈಡೆನ್‌ ಜನಪ್ರಿಯತೆಯನ್ನು ನೆಲಕಚ್ಚುವಂತೆ ಮಾಡಿತು. ಅಷ್ಟೇ ಅಲ್ಲ, ಏಷ್ಯಾದಲ್ಲಿ ಕಮ್ಯೂನಿಸ್ಟ್‌ ಆಡಳಿತದ ಚೀನವು ಜಗತ್ತನ್ನೇ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವಾಗ, ಆ ದೇಶವನ್ನು ಸಮರ್ಥವಾಗಿ ಎದುರಿಸುವಲ್ಲೂ ಅಮೆರಿಕ ವೈಫ‌ಲ್ಯ ಕಾಣುತ್ತಿದೆ. ಪಿಜ್ಜಾ, ಬರ್ಗರ್‌ ತಿನ್ನುತ್ತಾ ಹಾಯಾ ಗಿದ್ದ ಅಮೆರಿಕದ ನಾಗರಿಕರಿಗೂ ಈ ಎಲ್ಲ ಬೆಳವಣಿಗೆಗಳು ಕಳವಳ ಮೂಡಿಸಿದ್ದು, ದೊಡ್ಡಣ್ಣನ ಸ್ಥಾನ ಕಳೆದುಕೊಳ್ಳುತ್ತೇವೋ ಎಂಬ ಭೀತಿ ಮೂಡಿಸಿದೆ.

ಈ ಆತಂಕವನ್ನು ಹ್ಯಾರಿಸ್‌ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಗರಿಕರು ಪಕ್ಷದ ಮೇಲಿನ ಭರವಸೆ ಕಳೆದುಕೊಂಡರೆ, ಟ್ರಂಪ್‌ ಆಡಳಿತಾವಧಿಯಲ್ಲಿ ವಿಭಜನೆಗೊಂಡಿ ರುವ ದೇಶವನ್ನು ಒಗ್ಗೂಡಿಸುವ ನಮ್ಮ ಕನಸು ನನಸಾಗದು ಎಂಬುದು ಅವರಿಗೆ ಅರ್ಥವಾಗತೊಡಗಿದೆ. ಅಂತಾರಾಷ್ಟ್ರೀಯವಾಗಿ ಅತ್ಯಂತ ಮಹತ್ವದ ನಿರ್ಧಾರವಾಗಿರುವ ಅಫ್ಘಾನಿಸ್ಥಾನದಿಂದ ಸೇನೆ ಹಿಂಪಡೆತಕ್ಕೆ ಸಂಬಂಧಿಸಿದ ಸಭೆಯ ವೇಳೆಯೂ ಬೈಡೆನ್‌ ಅವರು ಕಮಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಹ್ಯಾರಿಸ್‌ಗೆ ಉತ್ತೇಜನ ನೀಡಬೇಕಾಗಿದ್ದ ಅಧ್ಯಕ್ಷರೇ ಈಗ ಅವರ ಜನಪ್ರಿಯತೆ ಕುಗ್ಗಿಸಲು ಪ್ರಯತ್ನಿಸುತ್ತಿರುವುದು, ಕಮಲಾರ ಬೆಂಬಲಿಗರನ್ನೂ ಆತಂಕಕ್ಕೀಡುಮಾಡಿದೆ. ಡೆಮಾಕ್ರಾಟ್‌ನ ತಳಮಟ್ಟದ ಮತದಾರರು ಎಲ್ಲಿ ಕೈತಪ್ಪಿ ಹೋಗುತ್ತಾರೋ ಎಂಬ ಭಯ ಆವರಿಸಿದೆ. ಇನ್ನು, ತಮ್ಮ ಐತಿಹಾಸಿಕ ಉಪಾಧ್ಯಕ್ಷೆಯು ಪ್ರತಿದಿನವೂ ಇತಿಹಾಸ ಸೃಷ್ಟಿಸಬೇಕೆಂದು ಜನ ಬಯಸುತ್ತಿರುವಾಗ, ತಮ್ಮ ಪಕ್ಷದೊಳಗೇ ತಮ್ಮನ್ನು ಎರಡನೇ ದರ್ಜೆಯ ನಾಗರಿಕಳನ್ನಾಗಿ ನೋಡುತ್ತಿರುವುದು ಕಮಲಾ ಅವರ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಕಮಲಾ ವಿರುದ್ಧ ಬೈಡೆನ್‌ ತಂಡವೂ ಹಲವು ಆರೋಪಗಳನ್ನು ಮಾಡಿವೆ. ತಮ್ಮ ಕುಟುಂಬಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ಕಮಲಾ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಕಮಲಾ ಸೋದರಿ ಮಾಯಾ ಹ್ಯಾರಿಸ್‌, ಸಂಬಂಧಿಕರಾದ ಟೋನಿ ವೆಸ್ಟ್‌, ಮೀನಾ ಹ್ಯಾರಿಸ್‌ ಮತ್ತಿತರರು ಆಡಳಿತದಲ್ಲಿ ಕೈಯಾಡಿ ಸುತ್ತಿದ್ದಾರೆ ಎಂದೂ ದೂರಿದ್ದಾರೆ. ಈ ಬೆಳವಣಿಗೆಯಿಂದ ಕಮಲಾ ಅವರ ಕಾರ್ಯಾ ಲಯದ ಅಧಿಕಾರಿಗಳಿಗೇ ಕಿರಿಕಿರಿಯಾಗುತ್ತಿದೆ. ಕೆಲವರು ರಾಜೀನಾಮೆ ಪತ್ರ ಇಟ್ಟು, ಹೇಳದೇ ಹೋಗಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಬೈಡೆನ್‌ ಬಳಗ ಮಾಡುತ್ತಿದೆ.

ಬೈಡೆನ್‌ – ಕಮಲಾ ನಡುವಿನ ಅಭಿಪ್ರಾಯಭೇದಗಳು ಡೆಮಾಕ್ರಾಟ್‌ ಪಕ್ಷದ ಬುಡವನ್ನೇ ಅಲ್ಲಾಡಿಸುತ್ತಿರುವುದು ನಿಚ್ಚಳ. ಗೆಲುವಿಗಾಗಿ ಬೆವರು ಸುರಿಸಿದವರೇ ಕೊನೇ ಮೊಳೆ ಹೊಡೆಯುವ ಮುನ್ನ, ಡೆಮಾಕ್ರಾಟ್‌ನ ಇತರ ನಾಯಕರು ಎಚ್ಚೆತ್ತುಕೊಳ್ಳು ತ್ತಾರೋ ಎಂದು ಕಾದು ನೋಡಬೇಕು. ಬೈಡೆನ್‌-ಕಮಲಾ ಫೈಟ್‌ ನಡುವೆಯೇ ಹೊಸ ಸಮಾಚಾರ ಹೊರಬಿದ್ದಿದೆ. ಮುಂದಿನ ಅಧ್ಯಕ್ಷೀಯ ಚುನಾವಣ ಕಣಕ್ಕೆ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಪತ್ನಿ ಮಿಶೆಲ್‌ ಒಬಾಮಾ ಎಂಟ್ರಿಯಾಗುತ್ತಾರೆ ಎಂಬುದು. ಹೀಗಾಗಿ ಬೈಡೆನ್‌ ಸ್ಪರ್ಧಾಕಣದಿಂದ ಹಿಂದೆ ಸರಿದರೆ, ಡೆಮಾಕ್ರಾಟ್‌ ಅಧ್ಯಕ್ಷೀಯ ಅಭ್ಯರ್ಥಿ ಪಟ್ಟಕ್ಕೆ ಕಮಲಾ ಹ್ಯಾರಿಸ್‌  ಹಾಗೂ ಮಿಶೆಲ್‌ ನಡುವೆ ಪೈಪೋಟಿ ಗ್ಯಾರಂಟಿ. ಹೀಗಾಗಿ ಮುಂದಿನ ಚುನಾವಣೆಯೂ ಕೌತುಕದ ಕೇಂದ್ರಬಿಂದುವಾಗಲಿದೆ.

-ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

2-dandeli

Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ

1-thirthahalli

Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.