ಹೆಮ್ಮಾಡಿ ಸರಕಾರಿ ಮಾದರಿ ಹಿ. ಪ್ರಾ. ಶಾಲೆ: ಕೊಠಡಿ ದುರಸ್ತಿಗೆ ಬೇಡಿಕೆ
ನೂರಕ್ಕೂ ಮಿಕ್ಕಿ ಮಕ್ಕಳಿರುವ ಶಾಲೆ ; ಉತ್ತಮ ದಾಖಲಾತಿ ಹಿನ್ನೆಲೆ; ಕೊಠಡಿ ಕೊರತೆ
Team Udayavani, Nov 29, 2021, 6:31 AM IST
ಹೆಮ್ಮಾಡಿ: ಮೂರು ವರ್ಷಗಳ ಹಿಂದೆ 70ಕ್ಕಿಂತಲೂ ಕಡಿಮೆಯಿದ್ದ ಹೆಮ್ಮಾಡಿ ಸರಕಾರಿ ಮಾದರಿ ಹಿ. ಪ್ರಾ. ಶಾಲೆಯಲ್ಲೀಗ ನೂರಕ್ಕೂ ಮಿಕ್ಕಿ ಮಕ್ಕಳಿದ್ದಾರೆ.
ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಒಂದನೇ ತರಗತಿಯನ್ನು 2 ವಿಭಾಗ ಮಾಡಲಾಗಿದೆ. ಎಲ್‌ಕೆಜಿ, ಯುಕೆಜಿಯಲ್ಲಿ 40ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಆದರೆ ಕೊಠಡಿ ಸಮಸ್ಯೆಯಿದ್ದು, ಈಗಿರುವ ಎರಡು ಕೊಠಡಿ ಶಿಥಿಲಾವಸ್ಥೆಯಲ್ಲಿದ್ದು ಅದರ ದುರಸ್ತಿಗೆ ಬೇಡಿಕೆ ಕೇಳಿ ಬಂದಿದೆ.
ಹೆಮ್ಮಾಡಿ ಸರಕಾರಿ ಶಾಲೆಯು ಈ ಭಾಗದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಶೈಕ್ಷಣಿಕ ವರ್ಷ ಸೇರಿದಂತೆ ಕಳೆದೆರಡು ವರ್ಷಗಳಿಂದ ಉತ್ತಮ ದಾಖಲಾತಿಯಾಗಿದೆ. ಆದರೆ ಸದ್ಯ ಕೊಠಡಿ ಕೊರತೆಯಿಂದಾಗಿ ಪಾಠ- ಪ್ರವಚನಕ್ಕೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಅಗತ್ಯ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಆಗ್ರ ಹವನ್ನು ಹೆತ್ತ ವರು ವ್ಯಕ್ತಪಡಿಸಿದ್ದಾರೆ.
110 ಮಕ್ಕಳು
2019 ರಲ್ಲಿ ಈ ಶಾಲೆಯಲ್ಲಿ 70ಕ್ಕಿಂತಲೂ ಕಡಿಮೆ ಮಕ್ಕಳಿದ್ದರು. ಕಳೆದ ಸಾಲಿನಲ್ಲಿ 96 ಮಂದಿ ಮಕ್ಕಳಿದ್ದರೆ, ಈ ಬಾರಿ ಒಟ್ಟು 110 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲೂ ಒಂದನೇ ತರಗತಿಗೆ 25 ಮಂದಿ ಮಕ್ಕಳ ದಾಖಲಾತಿಯಾಗಿದೆ. ಒಂದನೇ ತರಗತಿಯಲ್ಲದೆ ಇತರ ತರಗತಿಗಳಿಗೂ ಬೇರೆ ಬೇರೆ ಖಾಸಗಿ ಶಾಲೆಗಳಿಂದ ಇಲ್ಲಿಗೆ ಮಕ್ಕಳು ಬಂದಿದ್ದಾರೆ. ಇನ್ನು ಎಲ್‌ಕೆಜಿ- ಯುಕೆಜಿ ವಿಭಾಗದಲ್ಲಿ 42 ಮಂದಿ ಸೇರಿದಂತೆ ಒಟ್ಟಾರೆ ಈ ಶಾಲೆಯಲ್ಲಿ 152 ಮಂದಿ ವಿದ್ಯಾರ್ಥಿಗಳಿದ್ದಾರೆ.
ಸಮಸ್ಯೆಯೇನು?
ಶಾಲೆಯ ಒಂದು ಕೊಠಡಿ ಹಾಗೂ ಗ್ರಂಥಾಲಯ ಕೋಣೆಯ ಹಂಚಿನ ಮಾಡು, ಗೋಡೆ ಬಿರುಕು ಬಿಟ್ಟು, ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ತರಗತಿ ನಡೆಸುವುದು ಅಪಾಯಕಾರಿ ಎಂದರಿತ ಶಿಕ್ಷಕರು ಮುಂಜಾಗ್ರತೆಯಿಂದಾಗಿ ಈ ಎರಡು ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಕಂಪ್ಯೂಟರ್ ತರಗತಿ ಹಾಗೂ ಸಭಾಭವನದಲ್ಲೂ ನಿತ್ಯದ ತರಗತಿ ನಡೆಸುವಂತಾಗಿದೆ. ಅದಕ್ಕಾಗಿ ಶಿಥಿಲಾವಸ್ಥೆಯಲ್ಲಿರುವ ಎರಡು ಕೊಠಡಿಗಳನ್ನು ಕೂಡಲೇ ದುರಸ್ತಿಪಡಿಸಬೇಕು ಹಾಗೂ ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆಯನ್ನು ಇಲಾಖೆಯ ಮುಂದಿರಿಸಲಾಗಿದೆ. ಇನ್ನುಳಿದಂತೆ ಮುಖ್ಯ ಶಿಕ್ಷಕರು ಸೇರಿದಂತೆ 6 ಮಂದಿ ಶಿಕ್ಷಕರಿದ್ದಾರೆ. ಆದರೆ ಆಂಗ್ಲ ಭಾಷಾ ಶಿಕ್ಷಕರ ಅಗತ್ಯವಿದೆ. ಆವರಣ ಗೋಡೆ ಈಗಾಗಲೇ ಹೆಮ್ಮಾಡಿ ಪಂಚಾಯತ್‌ನಿಂದ ನಿರ್ಮಾಣವಾಗುತ್ತಿದೆ. ಹೆಚ್ಚುವರಿ ಶೌಚಾಲಯದ ಅಗತ್ಯವಿದ್ದು, ಜಿ.ಪಂ. ಅನುದಾನ ಮಂಜೂರಾಗಿದೆ.
ದುರಸ್ತಿಗೆ ಪ್ರಯತ್ನ
ಶಾಲೆಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ ಕೊಠಡಿ ಸಮಸ್ಯೆಯಾಗುತ್ತಿದೆ. ಸದ್ಯಕ್ಕೆ ಮಕ್ಕಳಿಗೆ ತೊಂದರೆಯಾಗದಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ಕೊಠಡಿ ದುರಸ್ತಿ ಸಂಬಂಧ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು, ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಲಾಗುವುದು.
– ಜಿ.ಎಂ. ಮುಂದಿನಮನಿ, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ
ಕೂಡಲೇ ಗಮನಹರಿಸಲಿ
ಈ ಶಾಲೆಯಲ್ಲಿ ಈ ಬಾರಿ ಉತ್ತಮ ದಾಖಲಾತಿಯಾಗಿದ್ದು, ಈಗಾಗಲೇ ಪಂಚಾಯತ್‌ನಿಂದ ಆವರಣ ಗೋಡೆ, ಜಿ.ಪಂ. ಅನುದಾನದಿಂದ ಶೌಚಾಲಯ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ ಒಂದೆರಡು ಕೊಠಡಿ ದುರಸ್ತಿಯಾಗದಿರುವುದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇದರ ದುರಸ್ತಿಗೆ ಕೂಡಲೇ ಇಲಾಖೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಗಮನಹರಿಸಬೇಕು.
– ಸತ್ಯನಾರಾಯಣ ರಾವ್, ಅಧ್ಯಕ್ಷರು, ಹೆಮ್ಮಾಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.