ಪಡಿತರ ಮೂಲಕ ಸ್ಥಳೀಯ ಕುಚ್ಚಲಕ್ಕಿ ಸದ್ಯ ಸಿಗದು
ಕರಾವಳಿಯಲ್ಲಿ ಖರೀದಿ, ವಿತರಣೆಗೆ ತಾಂತ್ರಿಕ ಸವಾಲು
Team Udayavani, Nov 30, 2021, 7:10 AM IST
ಉಡುಪಿ: ಪಡಿತರ ವ್ಯವಸ್ಥೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳೀಯ ಕುಚ್ಚಲು ಅಕ್ಕಿ ವಿತರಣೆಗೆ ಕೇಂದ್ರ ಸರಕಾರ ಅವಕಾಶ ನೀಡಿದರೂ ಪೂರೈಕೆಯಲ್ಲಿ ಕೊರತೆ, ವಿತರಣೆಗೆ ತಾಂತ್ರಿಕ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸದ್ಯಕ್ಕಂತೂ ಪಡಿತರದಲ್ಲಿ ಸ್ಥಳೀಯ ಕುಚ್ಚಲಕ್ಕಿ ಸಿಗದು.
ಪಡಿತರದಡಿ ವಿತರಿಸಲು ಪ್ರತೀ ತಿಂಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತಲಾ 40 ಸಾವಿರ ಕ್ವಿಂಟಾಲ್ ಅಕ್ಕಿ ಬೇಕು. ಸದ್ಯ ಆಂಧ್ರ ಪ್ರದೇಶದಿಂದ ಬರುವ ಕುಚ್ಚಲಕ್ಕಿಯನ್ನು ವಿತರಿಸ ಲಾಗುತ್ತಿದೆ. ಸ್ಥಳೀಯ ವಾಗಿ ಭತ್ತ ಖರೀದಿಸಿ, ಕುಚ್ಚಲು ಅಕ್ಕಿ ವಿತರಣೆಗೆ ಅವಕಾಶ ಕೊಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪರಿಶೀಲನೆಯ ಹಂತ ದಲ್ಲಿದೆ. ಕೇಂದ್ರ ಅನುಮತಿ ನೀಡಿದ ಮೇಲೆ ಸ್ಥಳೀಯ ಅಕ್ಕಿ ವಿತರಣೆ ಆರಂಭವಾಗಲಿದೆ.
ತಾಂತ್ರಿಕ ಸಮಸ್ಯೆಗಳು
ಪಡಿತರದಡಿ ನೀಡುವ ಅಕ್ಕಿ ಯಾ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಅಡಿ ಖರೀದಿಸಬೇಕು. ರೈತರು ಭತ್ತವನ್ನು ನಿರ್ದಿಷ್ಟ ಖರೀದಿ ಕೇಂದ್ರದ ಮೂಲಕವೇ ನೀಡಬೇಕಾಗುತ್ತದೆ. ಉಭಯ ಜಿಲ್ಲೆಗೆ ತಿಂಗಳಿಗೆ 80 ಸಾವಿರ ಕ್ವಿಂ.ಗೂ ಅಧಿಕ ಅಕ್ಕಿ ಬೇಕಿದ್ದು, ಅಷ್ಟು ಎಂಎಸ್‌ಪಿ ಅಡಿ ಖರೀದಿಗೆ ಸಿಗದು. ಮಿಲ್‌ಗಳಿಗೆ ಭತ್ತವನ್ನು ಇಷ್ಟೇ ಒಣಗಿಸಿ ನೀಡಬೇಕು ಎಂಬ ನಿಯಮ ಇಲ್ಲ. ಆದರೆ ಪಡಿತರ ವಿತರಣೆಗೆ ನೀಡುವ ಭತ್ತಕ್ಕೆ ಈ ನಿಯಮವಿದೆ. ಸ್ಥಳೀಯ ಕುಚ್ಚಲಕ್ಕಿ ಈ ಎರಡು ಜಿಲ್ಲೆಗಳಿಗೆ ಸೀಮಿತವಾಗಿದ್ದು, ಕೊರತೆಯಾದರೆ ಬೇರೆಡೆಯಿಂದ ತರಿಸಲಾಗದು. ಕೇಂದ್ರದ ಅನು ಮತಿ, ಸಬ್ಸಿಡಿ, ಬೆಂಬಲ ಬೆಲೆ ಹೀಗೆ ಹಲವು ತಾಂತ್ರಿಕ ತೊಡಕುಗಳಿವೆ.
ಶೇ. 50ರಷ್ಟು ಬೇಡಿಕೆ
ಈಗ ನೀಡುತ್ತಿರುವ ಕುಚ್ಚಲು ಅಕ್ಕಿ ಊಟಕ್ಕೆ ಹಿಡಿಸುವುದಿಲ್ಲ. ಮನೆಗಳಲ್ಲಿ ತಿಂಡಿಗೆ ಬೆಳ್ತಿಗೆ ಅಕ್ಕಿಯ ಅಗತ್ಯವಿರುವುದರಿಂದ ಸದ್ಯ ಬಹುತೇಕರು ಅದನ್ನೇ ಕೇಳಿ ಪಡೆಯುತ್ತಿದ್ದಾರೆ. ಸದ್ಯ ಕುಚ್ಚಲು ಮತ್ತು ಬೆಳ್ತಿಗೆ ಅಕ್ಕಿಗೆ ತಲಾ ಶೇ. 50ರಷ್ಟು ಬೇಡಿಕೆಯಿದೆ. ಸ್ಥಳೀಯ ಕುಚ್ಚಲು ಅಕ್ಕಿ ಖರೀದಿಗೆ ಅವಕಾಶ ಸಿಕ್ಕ ಅನಂತರ ಬೇಡಿಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಹಾಡಿನ ಮೂಲಕ ಮನ ಗೆದ್ದ ಆಫ್ರಿಕನ್ ಅಣ್ಣ-ತಂಗಿ
ಸ್ಥಳೀಯ ಕುಚ್ಚಲಕ್ಕಿ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದ ಅನಂತರ ನಿರ್ದಿಷ್ಟ ಮಾರ್ಗಸೂಚಿಯಂತೆ ಭತ್ತ ಖರೀದಿ ಸಲಾಗುವುದು. ರೈತರಿಗೂ ಈ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೆಲವು ತಾಂತ್ರಿಕ ಸಮಸ್ಯೆ ಎದು ರಾಗುವ ಸಾಧ್ಯತೆಯಿದ್ದು, ಅದನ್ನು ನಿವಾ ರಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ.
– ಮೊಹಮ್ಮದ್ ಇಸಾಕ್,
ಉಡುಪಿ ಜಿಲ್ಲಾ ಉಪನಿರ್ದೇಶಕ, ಆಹಾರ, ನಾಗರಿಕ ಸರಬರಾಜು- ಗ್ರಾ.ವ್ಯ. ಇಲಾಖೆ
ಸ್ಥಳೀಯ ಕುಚ್ಚಲಕ್ಕಿ
ವಿತರಣೆಗೆ ಈಗಾಗಲೇ
ಜಂಟಿ ಸಮೀಕ್ಷೆ ಮಾಡಿ, ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸ್ಥಳೀಯ ಬೇಡಿಕೆಯಷ್ಟು ಕುಚ್ಚಲು ಅಕ್ಕಿ ಪೂರೈಕೆ ಆಗುವುದೂ ಅಷ್ಟೇ ಮುಖ್ಯ.
-ಕೆ.ಪಿ. ಮಧುಸೂದನ್,
ದ.ಕ. ಜಿಲ್ಲಾ ಉಪನಿರ್ದೇಶಕ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.