ನಾಳೆ, ನಾಡಿದ್ದು ಕೃಷಿ ಮೇಳ
Team Udayavani, Nov 30, 2021, 6:38 PM IST
Representative Image used
ಮಂಡ್ಯ: ಕೃಷಿ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಮಹಾ ವಿದ್ಯಾಲಯ, ಸಹ ವಿಸ್ತರಣಾ ನಿರ್ದೇಶನಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರ. ವಿ.ಸಿ.ಫಾರಂ, ಕರ್ನಾಟಕ ರಾಜ್ಯ ಕೃಷಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ ವತಿಯಿಂದ ಡಿ.1 ಮತ್ತು 2ರಂದು ತಾಲೂಕಿನ ವಿ.ಸಿ.ಫಾರಂ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಮೇಳ ನಡೆಸುತ್ತಿದ್ದು, ಡಿ.1ರಂದು ಬೆಳಗ್ಗೆ 11 ಗಂಟೆಗೆ ಆದಿಚುಂಚನಗಿರಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮೇಳ ಉದ್ಘಾಟಿಸುವರು. ಈ ಬಾರಿ 3 ತಳಿಗಳ ಪರಿಚಯ: ವಲಯ ಕೃಷಿ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್ ಮಾತನಾಡಿ, ಈ ಬಾರಿ ವಿಶೇಷವಾಗಿ ಮೂರು ತಳಿಗಳನ್ನು ರೈತರಿಗೆ ಪರಿಚಯಿಸಲಾಗುವುದು.
ಇದನ್ನೂ ಓದಿ;- ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ ಲೋಕಾರ್ಪಣೆ
ಅದರಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಭತ್ತದ ತಳಿ ಎಂಎಸ್‌ಎನ್ 99. ಇದು 110 ದಿನಗಳಿಂದ 120 ದಿನಗಳೊಳಗೆ ಕಟಾವಿಗೆ ಬರಲಿದೆ. ರೈತರ ಮನವಿ ಮೇರೆಗೆ ಕೆಎಂಪಿ 220 ಭತ್ತ ಸಂಶೋಧಿಸಲಾಗಿದೆ. ಈ ಭಾಗ ದಲ್ಲಿ ಶೇ.80 ರಿಂದ 90ರಷ್ಟು ಬೆಳೆಯುವ ಕಬ್ಬು ಸಿಒವಿಸಿ 517 ಬಾಹುಬಲಿ ಕಬ್ಬಿನ ತಳಿಯನ್ನು ಸಂಶೋಧಿಸಲಾಗಿದೆ.
ಕಡಿಮೆ ಸೂಲಂಗಿ ಅಥವಾ ನಿಧಾನವಾಗಿ ಸೂಲಂಗಿ ಬರುತ್ತದೆ. ಇದನ್ನು ಸಹ ರೈತರು ವೀಕ್ಷಿಸಿ ತಮ್ಮ ಜಮೀನಿನಲ್ಲಿ ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಹತ್ತಿ ಮಳಿಗೆ: ಈ ಬಾರಿಯ ಕೃಷಿ ಮೇಳದಲ್ಲಿ ಸುಮಾರು 150 ಮಳಿಗೆಗಳು ಇವೆ. ಇದರಲ್ಲಿ ಪಶುಸಂಗೋಪನೆ, ತಾಂತ್ರಿಕತೆ ಮತ್ತು ವಸ್ತು ಪ್ರದರ್ಶನ, ಎಣ್ಣೆಕಾಳು, ದ್ವಿದಳ ಧಾನ್ಯಗಳು, ಮುಖ್ಯವಾಗಿ ಚಾಮ ರಾಜನಗರದಲ್ಲಿ ಹತ್ತಿ ಸಂಶೋಧನಾ ಕೇಂದ್ರವೂ ಇದೆ. ಇದಕ್ಕೆ ಸಹಾಯವಾಗುವ ಉದ್ದೇಶದಿಂದ ಹತ್ತಿ ಮಳಿಗೆಯನ್ನೂ ಸಹ ಪ್ರದರ್ಶನದಲ್ಲಿ ನೋಡಬಹುದಾಗಿದೆ ಎಂದರು.
ಈ ಬಾರಿಯ ಕೃಷಿ ಮೇಳದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಮಂದಿ ರೈತರು ಬರುವ ನಿರೀಕ್ಷೆ ಇದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮ ನಗರ, ತುಮಕೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಬರಲಿದ್ದಾರೆ. ವಿ.ಸಿ.ಫಾರಂಗೆ ರೈತರು ಬರುವುದಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ನಗರದ ಲೋಕೋಪಯೋಗಿ ಕಚೇರಿ ಬಳಿಯಿಂದ ವಿ.ಸಿ.ಫಾರಂಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.