ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ


Team Udayavani, Dec 1, 2021, 7:20 AM IST

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

1980ರಲ್ಲಿ ಯುಎಸ್‌ನಲ್ಲಿ ಕಂಡು ಬಂದ ಮೊದಲ ಎಚ್‌ಐವಿ/ ಏಡ್ಸ್‌ ಪ್ರಕರಣ ವಿಶ್ವದಾದ್ಯಂತ ಹರಡಿ ಇಂದಿಗೂ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉಳಿದಿದೆ. ಇದನ್ನು ನಿಯಂತ್ರಿಸಲು ವಿಶ್ವದ ಎಲ್ಲ ರಾಷ್ಟ್ರಗಳು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದರೂ ಇನ್ನೂ ಸಂಪೂರ್ಣ ಯಶ ಕಂಡಿಲ್ಲ. ಮಾನವ ಹಕ್ಕುಗಳನ್ನು ಅವಗಣಿಸಿ, ಎಚ್‌ಐವಿ ಪೀಡಿತರನ್ನು ದೂರವಿಟ್ಟು, ಅವರನ್ನು ಅಸ್ಪೃಶ್ಯರಂತೆ ಇಂದಿಗೂ ನೋಡುತ್ತಿರುವುದರಿಂದ ಜಾಗತಿಕವಾಗಿ ಇದೊಂದು ಆರೋಗ್ಯ ಬಿಕ್ಕಟ್ಟಾಗಿ ಉಳಿಯಲು ಕಾರಣವಾಗಿದೆ. ಅಸಮಾನತೆ ಮತ್ತು ಸೇವೆಗಳಲ್ಲಾಗುವ ವೈಫ‌ಲ್ಯದಿಂದಾಗಿಯೇ ಈ ಸಮಸ್ಯೆ ಉಲ್ಬಣಿಸುತ್ತಲೇ ಇದೆ.

ಅಸಮಾನತೆ ಹೋಗಲಾಡಿಸುವುದೇ ಸವಾಲು
ಈ ಬಾರಿ “ಅಸಮಾನತೆ ಹೋಗಲಾಡಿಸಿ, ಏಡ್ಸ್‌ ಕೊನೆಗೊಳಿಸಿ’ ಎನ್ನುವ ಸಂದೇಶದೊಂದಿಗೆ ಡಿ. 1ರಂದು ವಿಶ್ವ ಏಡ್ಸ್‌ ದಿನವನ್ನು ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಏಡ್ಸ್‌ ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡುವ ನಿಟ್ಟಿನಲ್ಲಿ ರೋಗಿಗಳ ಕುರಿತಾಗಿನ ಅಸಮಾನತೆಯನ್ನು ಕೊನೆಗೊಳಿಸಬೇಕಾದ ತುರ್ತು ಅಗತ್ಯವಿದೆ. ಇಂತಹ ಅಸಮಾನತೆಗಳ ವಿರುದ್ಧ ದಿಟ್ಟ ಕ್ರಮಕೈಗೊಳ್ಳದೇ ಇದ್ದಲ್ಲಿ 2030ರ ವೇಳೆಗೆ ಏಡ್ಸ್‌ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ತಲುಪುವುದು ಕಷ್ಟಸಾಧ್ಯ. ಮೊದಲ ಏಡ್ಸ್‌ ಪ್ರಕರಣ ವರದಿಯಾದ 40 ವರ್ಷಗಳ ಅನಂತರವೂ ಎಚ್‌ಐವಿ ಇಂದಿಗೂ ಜಗತ್ತನ್ನು ಬಾಧಿಸುತ್ತಿದೆ. 2030ರ ವೇಳೆಗೆ ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ರೋಗದ ಕುರಿತ ಜ್ಞಾನದ ಜತೆಯಲ್ಲಿ ಅದರ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಜದಲ್ಲಿ ಬೇರೂರಿರುವ ಅಸಮಾನತೆ ಭಾವವನ್ನು ಹೋಗಲಾಡಿಸಬೇಕಿದೆ.

ಅಸಮಾನತೆ ಮತ್ತು ಆರೋಗ್ಯ
ಅಸಮಾನತೆಗಳನ್ನು ಹೋಗಲಾಡಿಸಿದರೆ ಕೋವಿಡ್‌- 19 ಮತ್ತು ಇತರ ಸಾಂಕ್ರಾಮಿಕಗಳನ್ನು ಎದುರಿಸುವುದು ಸುಲಭ. ಅಸಮಾನತೆಯನ್ನು ಹೋಗಲಾಡಿಸಲು ರಾಜಕೀಯ, ಆರ್ಥಿಕ, ಸಾಮಾಜಿಕ ನೀತಿಗಳು ಬಹುಮುಖ್ಯವಾಗಿರುತ್ತವೆ. ಅಸಮಾನತೆಯನ್ನು ಹೋಗಲಾಡಿಸಲು ಸಮರ್ಥ ನೀತಿಗಳು, ಮತ್ತವುಗಳ ಅನುಷ್ಠಾನದ ಅಗತ್ಯವಿದೆ. ಅದಕ್ಕಾಗಿ ನಾಯಕರು ದಿಟ್ಟ ಹೆಜ್ಜೆ ಇಡಬೇಕಿದೆ.

ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಮೊದಲ ಪ್ರಕರಣ
1981ರ ಎಪ್ರಿಲ್‌ 24ರಂದು ಸ್ಯಾನ್‌ ಫ್ರಾನ್ಸಿಸ್ಕೋ ದಲ್ಲಿ ಮೊದಲ ಎಚ್‌ಐವಿ ಪ್ರಕರಣ ಪತ್ತೆಯಾಯಿತಾದರೂ ಈ ಬಗ್ಗೆ ಗೊಂದಲಗಳಿವೆ. ಇದಕ್ಕಿಂತ ಮೊದಲೇ ಕೆಲವರನ್ನು ಎಚ್‌ಐವಿ ಬಾಧಿಸಿತ್ತು ಎನ್ನಲಾಗುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈಯ ಲೈಂಗಿಕ ಕಾರ್ಯಕರ್ತೆ ಯರಲ್ಲಿ 1986ರಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿತ್ತು. ಇಂದು ದೇಶದಲ್ಲಿ ಸುಮಾರು 5.134 ಮಿಲಿಯನ್‌ ಸೋಂಕಿತರಿದ್ದಾರೆ.

ಎಚ್‌ಐವಿ ಎಂದರೇನು?
ದೇಹದ ಪ್ರತಿ ರಕ್ಷಣ ವ್ಯವಸ್ಥೆಯನ್ನು ಆಕ್ರಮಿಸುವ ಸೋಂಕು ಹ್ಯೂಮನ್‌ ಇಮ್ಯೂನೊ ಡಿಫಿಶಿಯನ್ಸಿ ವೈರಸ್‌ (ಎಚ್‌ಐವಿ). ಇದು ನಿರ್ದಿಷ್ಟವಾಗಿ ಸಿಡಿ4 ಜೀವಕೋಶಗಳೆಂದು ಕರೆಯಲ್ಪಡುವ ಬಿಳಿ ರಕ್ತ ಕಣಗಳ ಮೇಲೆ ದಾಳಿ ನಡೆಸುತ್ತವೆ. ಕ್ಷಯ ರೋಗ, ಶಿಲೀಂಧ್ರ ಸೋಂಕುಗಳು, ತೀವ್ರವಾದ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಕ್ಯಾನ್ಸರ್‌ನಂತಹ ಅವಕಾಶವಾದಿ ಸೋಂಕುಗಳ ವಿರುದ್ಧ ವ್ಯಕ್ತಿಯ ಪ್ರತಿ ರಕ್ಷೆಯನ್ನು ದುರ್ಬಲ ಗೊಳಿಸುತ್ತದೆ.

ಎಚ್‌ಐವಿ ಅಪಾಯವಿರುವ ಪ್ರತಿಯೊಬ್ಬರ ಪರೀಕ್ಷೆಯನ್ನು ಮಾಡಬೇಕು ಎಂದು ಡಬ್ಲ್ಯು ಎಚ್‌ಒ ಶಿಫಾರಸು ಮಾಡುತ್ತದೆ. ಕ್ಷಿಪ್ರ ರೋಗ ನಿರ್ಣಯ, ಸ್ವಯಂ ಪರೀಕ್ಷೆಗಳ ಮೂಲಕ ರೋಗವನ್ನು ಖಚಿತ ಪಡಿಸಿಕೊಳ್ಳಬಹುದು.

ಎಚ್‌ಐವಿ ಪರೀಕ್ಷಾ ಸೇವೆಗಳಲ್ಲಿ ಒಪ್ಪಿಗೆ ಪಡೆಯುವುದು, ಗೌಪ್ಯತೆ ಕಾಪಾಡುವುದು, ಸಮಾಲೋಚನೆ ನಡೆಸುವುದು, ಸರಿಯಾದ ಫ‌ಲಿತಾಂಶ, ಚಿಕಿತ್ಸೆ ನೀಡುವುದು ಅತ್ಯಗತ್ಯವಾಗಿದೆ.

ಚಿಕಿತ್ಸೆ ಹೇಗೆ?: ಎಚ್‌ಐವಿ ರೋಗ ನಿರ್ಣಯದ ಅನಂತರ ಸಾಧ್ಯವಾದಷ್ಟು ಬೇಗ ಆ್ಯಂಟಿರೆಟ್ರೋವೈರಲ್‌ ಚಿಕಿತ್ಸೆ(ಎಆರ್‌ಟಿ)ಯನ್ನು ಒದಗಿಸಬೇಕು. ರಕ್ತದಲ್ಲಿನ ವೈರಸ್‌ ಅನ್ನು ಅಳೆಯುವ ಪರೀಕ್ಷೆಯನ್ನು ಒಳಗೊಂಡಂತೆ ಕ್ಲಿನಿಕಲ್‌ ಮತ್ತು ಪ್ರಯೋಗಾಲಯದ ನಿಯತಾಂಕಗಳನ್ನು ಬಳಸಿಕೊಂಡು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ಎಆರ್‌ಟಿ ಅನ್ನು ಸತತವಾಗಿ ತೆಗೆದುಕೊಂಡರೆ ಎಚ್‌ಐವಿ ಇತರರಿಗೆ ಹರಡುವುದನ್ನು ತಡೆಯಬಹುದು. ಎಆರ್‌ಟಿ ಪ್ರಾರಂಭಿಸಿದ ಅನಂತರ ವ್ಯಕ್ತಿಯ ಪ್ರತಿರಕ್ಷಣ ಸ್ಥಿತಿಯನ್ನು ನಿರ್ಣಯಿಸಲು ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಪರಿಶೀಲಿಸುತ್ತಿರಬೇಕು. ಇದು ಇತರ ಕಾಯಿಲೆಗಳ ಸೋಂಕಿನ ಅಪಾಯವನ್ನು ಕಡಿಮೆ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ರಕ್ತದಲ್ಲಿನ ವೈರಸ್‌ ಪ್ರಮಾಣವನ್ನು ಅಳೆಯಲು ಎಚ್‌ಐವಿ ವೈರಲ್‌ ಲೋಡ್‌ ಪರೀಕ್ಷೆ ಮಾಡಲಾಗುತ್ತದೆ. ವೈರಸ್‌ನ ಪುನರಾವರ್ತನೆಯ ಮಟ್ಟವನ್ನು ಮತ್ತು ಎಆರ್‌ಟಿಯ ಪರಿಣಾಮಕತ್ವವನ್ನು ತಿಳಿಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಆರ್‌ಟಿ ಚಿಕಿತ್ಸೆ ಅಸಮರ್ಪಕವಾದರೆ ಅದನ್ನು ಬದಲಾಯಿಸುವ ಅಥವಾ ವ್ಯಕ್ತಿಗನುಗುಣವಾಗಿ ಅದನ್ನು ಹೊಂದಿಸುವ ಸಲಹೆಗೆ ಈ ಪರೀಕ್ಷೆ ತುಂಬಾ ಪ್ರಯೋಜನಕಾರಿಯಾಗಿದೆ.

ವಿಶ್ವ ಮಟ್ಟದಲ್ಲಿ ಎಚ್‌ಐವಿ/ ಏಡ್ಸ್‌ ಪ್ರಕರಣ
3,77,00,000 ಎಚ್‌ಐವಿ ಸೋಂಕಿತರು
6,80,000 ಎಚ್‌ಐವಿ ಸೋಂಕಿತರಾಗಿ ಮೃತಪಟ್ಟವರು
15,00,000 ಹೊಸದಾಗಿ ಎಚ್‌ಐವಿ ಸೋಂಕಿಗೆ ಒಳಗಾದವರು
ಶೇ. 75ರಷ್ಟು ಮಂದಿ ಎಚ್‌ಐವಿಯೊಂದಿಗೆ ಬದುಕಲು 2020ರಲ್ಲಿ ಆ್ಯಂಟಿರೆಟ್ರೋವೈರಲ್‌ ಚಿಕಿತ್ಸೆಯನ್ನು ಪಡೆದಿದ್ದಾರೆ.

 

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.