ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಯಾವುದೇ ರೂಪಾಂತರಿಗೂ ಹೆದರಬೇಕಿಲ್ಲ: ಡಾ| ಜಮೀಲ್‌

Team Udayavani, Dec 1, 2021, 9:55 AM IST

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಹೊಸದಿಲ್ಲಿ: ಒಮಿಕ್ರಾನ್‌ ಸೇರಿದಂತೆ ಕೊರೊನಾದ ಯಾವುದೇ ರೂಪಾಂತರಿ ಬಂದರೂ ಬಹುತೇಕ ಭಾರತೀಯರು ಸುರಕ್ಷಿತವಾಗಿರಲಿದ್ದಾರೆ. ಹಾಗಾಗಿ ಹೊಸ ರೂಪಾಂತರದ ಬಗ್ಗೆ ಭಯಪಡಬೇಕಾಗಿಲ್ಲ.

ಹೀಗೆಂದು ಹೇಳಿದ್ದು ದೇಶದ ಪ್ರಮುಖ ವೈರಾಲಜಿಸ್ಟ್‌ ಹಾಗೂ ಕೋವಿಡ್‌ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಡಾ| ಶಾಹಿದ್‌ ಜಮೀಲ್‌. ಇಡೀ ದೇಶವೇ ಒಮಿಕ್ರಾನ್‌ ಭೀತಿಯಲ್ಲಿರುವಾಗ ಜಮೀಲ್‌ ಅವರು ಈ ಹೇಳಿಕೆ ನೀಡುವ ಮೂಲಕ ಭಾರತೀಯರಿಗೆ ರಿಲೀಫ್ ನೀಡಿದ್ದಾರೆ.

ಎಲ್ಲರೂ ಎಚ್ಚರಿಕೆಯಿಂದಿರಬೇಕು. ಆದರೆ ಭೀತಿ ಪಡಬೇಕಾಗಿಲ್ಲ. ಡೆಲ್ಟಾ ರೂಪಾಂತರಿಯಿಂದ ಭಾರತದಲ್ಲಿ ಎದ್ದ ಎರಡನೇ ಅಲೆಯ ವೇಳೆ ಸಾಕಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ದೇಶದ ಶೇ.67ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ. ಹೀಗಾಗಿ ಯಾವುದೇ ರೂಪಾಂತರಿ ಬಂದರೂ ಭಾರತೀಯರು ಸುರಕ್ಷಿತವಾಗಿರಲಿದ್ದಾರೆ ಎಂದು ಡಾ| ಜಮೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಒಮಿಕ್ರಾನ್‌ ದೃಢಪಟ್ಟಿಲ್ಲ: ದೇಶದಲ್ಲಿ ಒಮಿಕ್ರಾನ್‌ ಪತ್ತೆಯಾಗಿಲ್ಲ. ಅದನ್ನು ದೇಶದೊಳಕ್ಕೆ ಆಗಮಿಸಲು ಅವಕಾಶ ನೀಡುವುದೇ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವಿಯಾ ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.

ಶಾಲೆ ಆರಂಭ ತಡ: ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿ ಶಾಲೆಗಳ ಪುನರಾರಂಭವನ್ನು ಡಿ.15ಕ್ಕೆ ಮುಂದೂಡಲಾಗಿದೆ ಎಂದು ಬೃಹನ್ಮುಂಬಯಿ ನಗರ ಪಾಲಿಕೆ ಹೇಳಿದೆ. ಡಿ.1ರಂದು ಶಾಲಾರಂಭ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಈ ನಡುವೆ, ಆಫ್ರಿಕಾ ರಾಷ್ಟ್ರಗಳಿಂದ ಕಳೆದ 15 ದಿನಗಳಲ್ಲಿ ಒಂದು ಸಾವಿರ ಮಂದಿ ಮುಂಬಯಿಗೆ ಬಂದಿಳಿದಿದ್ದಾರೆ. ಆದರೆ ಈ ಪೈಕಿ ಕೇವಲ 466 ಮಂದಿಯ ಮಾಹಿತಿಯಷ್ಟೇ ಸಿಕ್ಕಿದೆ ಎಂದು ಬಿಎಂಸಿ ತಿಳಿಸಿದೆ. ಜಪಾನ್‌ನಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಮಂಗಳವಾರ ಪತ್ತೆಯಾಗಿದೆ.

ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಆರ್‌ಟಿ-ಪಿಸಿಆರ್‌ನಿಂದ ಒಮಿಕ್ರಾನ್‌ ಪತ್ತೆ ಸಾಧ್ಯಲಸಿಕೆ ಪಡೆಯದವರಿಗೆ ಉಚಿತ ಚಿಕಿತ್ಸೆ ಇಲ್ಲ!
ಲಸಿಕೆ ಪಡೆಯದವರು, ಕೊರೊನಾ ಮುನ್ನೆಚ್ಚರಿಕ ಕ್ರಮಗಳಿಗೆ ಸಹಕಾರ ನೀಡದವರಿಗೆ ಸೋಂಕು ತಗಲಿದರೆ ಸರಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಆರೋಗ್ಯ ಸಮಸ್ಯೆಯಿರುವ ಕಾರಣಕ್ಕೆ ಅಥವಾ ಅಲರ್ಜಿ ಇರುವ ಕಾರಣಕ್ಕೆ ಲಸಿಕೆ ಪಡೆಯದವರು ಅದಕ್ಕೆ ಸಂಬಂಧಿಸಿ ಸರಕಾರಿ ವೈದ್ಯರಿಂದ ಪ್ರಮಾಣಪತ್ರ ತರಬೇಕು ಎಂದೂ ಸೂಚಿಸಿದ್ದಾರೆ.

“ಒಮಿಕ್ರಾನ್‌ ಅನ್ನು ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ (ಆರ್‌ಎಟಿ), ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಶೇಷವಾಗಿ, ಸೋಂಕಿನಿಂದಾಗಿ ಅಪಾಯಕಾರಿ ಎಂದು ಪರಿಗಣಿಸಲಾಗಿರುವ ದೇಶಗಳಿಂದ (ಹೈರಿಸ್ಕ್) ಬಂದಿರುವವರ ಮೇಲೆ ನಿಗಾ ಇರಿಸಬೇಕು. ಹೋಮ್‌ ಐಸೊಲೇಶನ್‌ಗೆ ಶಿಫಾರಸು ಮಾಡಲಾದ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದಿದ್ದಾರೆ. ವಿದೇಶಗಳಿಂದ ಬಂದವರ ಮನೆಗೆ ಖುದ್ದಾಗಿ ಭೇಟಿ ನೀಡಬೇಕು. 8ನೇ ದಿನದ ಪರೀಕ್ಷೆಯ ಅನಂತರವೂ ಅವರ ಮೇಲೆ ನಿಗಾ ಇರಿಸಬೇಕು ಎಂದಿದ್ದಾರೆ. ಇದೇ ವೇಳೆ ಹೈರಿಸ್ಕ್ ದೇಶಗಳಿಂದ ಬಂದವರಿಗೆ ಕಟ್ಟು ನಿಟ್ಟಿನ ನಿಯಮ ಮಂಗಳವಾರ ರಾತ್ರಿಯಿಂದಲೇ ಜಾರಿಯಾಗಿದೆ.

 

 

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.