ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ
ವಿಧಾನ ಪರಿಷತ್ ಚುನಾವಣೆ
Team Udayavani, Dec 1, 2021, 5:36 AM IST
ಮಂಗಳೂರು: ಪ್ರಥಮ ಪ್ರಾಶಸ್ತ್ಯದ ಮತಕ್ಕೆ ಬೆಂಬಲಿತ ಮತದಾರರನ್ನು ಸೀಮಿತಗೊಳಿಸುವ ತಂತ್ರ ಗಾರಿಕೆಯನ್ನು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಅನುಸರಿಸಿದೆ.
ಎರಡು ಸದಸ್ಯತ್ವದ ದ.ಕ. ಸ್ಥಳೀಯಾಡಳಿತ ಚುನಾ ವಣ ಕೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಒಂದೊಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 6,046 ಮತ ದಾರರಲ್ಲಿ ಬಿಜೆಪಿ 3,592, ಕಾಂಗ್ರೆಸ್-1,900, ಎಸ್‌ಡಿಪಿಐ 220 ಹಾಗೂ ಜೆಡಿಎಸ್, ಪಕ್ಷೇತರರು ಸೇರಿ 328 ಮತದಾರರಿದ್ದಾರೆ.
ಕಣದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇರುವುದು ಓರ್ವರೇ. ಹೀಗಾಗಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ತಮ್ಮ ಪಕ್ಷ ಬೆಂಬಲಿಸುವ ಮತದಾರರು ನೀಡುತ್ತಾರೆ. ದ್ವಿತೀಯ ಪ್ರಾಶಸ್ತ್ಯದ ಅಥವಾ ಇತರ ಪ್ರಾಶಸ್ತ್ಯದ ಮತಗಳನ್ನು ನೀಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಮಾತ್ರ ಚಲಾಯಿಸುವಂತೆ ಕೋರುತ್ತಿದೆ. ಒಂದೊಂದೇ ಅಭ್ಯರ್ಥಿಯನ್ನು ಕಣ ಕ್ಕಿಳಿಸಿರುವ ಕಾರಣದಿಂದ ಚುನಾವಣ ಲೆಕ್ಕಾಚಾರದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಗೆಲುವು ಸಲೀಸು.
ಯಾವುದೇ ಅಭ್ಯರ್ಥಿ ಆಯ್ಕೆಗೆ ನಿಗದಿಯಾಗಿರುವ ಮತವನ್ನು ಪ್ರಥಮ ಸುತ್ತಿನಲ್ಲಿ ಪಡೆಯದಿದ್ದರೆ ಆಗ ದ್ವಿತೀಯ ಪ್ರಾಶಸ್ತ್ಯದ ಮತಗಳು ನಿರ್ಣಾ ಯಕವೆನಿಸಲಿದ್ದು ಅವುಗಳನ್ನು ಪರಿ ಗಣಿಸಲಾಗುತ್ತದೆ.
ಇದನ್ನೂ ಓದಿ:ಲಾಕ್‌ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ
ಹಿಂದಿನ ಚುನಾವಣೆಯ ಹಿನ್ನೋಟ
ದ.ಕ. ಸ್ಥಳೀಯಾಡಳಿತ ಚುನಾವಣ ಕ್ಷೇತ್ರಕ್ಕೆ 2015ರ ಡಿ.27ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು. ದ.ಕ.ದಲ್ಲಿ 3,844 ಹಾಗೂ ಉಡುಪಿ ಜಿಲ್ಲೆಯಲ್ಲಿ 2,715 ಸೇರಿ ಒಟ್ಟು 6,559 ಮತದಾರರಿದ್ದರು. ಇದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 3,500 ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 2,800 ಆಗಿತ್ತು. ಚಲಾಯಿತ ಮತಗಳಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಯವರು 2,977, ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಯವರು 2,237 ,ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ 459 ಮತಗಳನ್ನು ಪಡೆದಿದ್ದರು.
ಮತ ಚಲಾವಣೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಮತಯಂತ್ರಗಳಿರುವುದಿಲ್ಲ. ಬದಲಿಗೆ, ಮತಪತ್ರಗಳಲ್ಲಿ ನಡೆಯುತ್ತಿದ್ದು ಪ್ರಾಶಸ್ತ್ಯದ ಮತಗಳಿರುತ್ತವೆ. ಸ್ಥಳೀಯ ಪ್ರಾಧಿಕಾರದ ಸದಸ್ಯ ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯದ ಮತವನ್ನು 1,2,3 ಸಂಖ್ಯೆಗಳಲ್ಲಿ ಮತಗಟ್ಟೆಯಲ್ಲಿ ನೀಡುವ ಸ್ಕೇಚ್ ಪೆನ್ನಿನಲ್ಲಿ ಗುರುತು ಹಾಕಬೇಕು. 1 ಪ್ರಾಶಸ್ತ್ಯ ಮತವನ್ನು ಹಾಕದೆ 2,3, ಇತ್ಯಾದಿ ಸಂಖ್ಯೆಗಳಲ್ಲಿ ಗುರುತಿಸಿದಲ್ಲಿ ಅವರ ಮತವು ತಿರಸ್ಕರಿಸಲ್ಪಡುತ್ತದೆ. ಆದರೆ ಕೇವಲ 1 ಪ್ರಾಶಸ್ತ್ಯವನ್ನು ಮಾತ್ರ ದಾಖಲಿಸಿ ಇತರ ಪ್ರಾಶಸ್ತ್ಯ ಮತಗಳನ್ನು ದಾಖಲಿಸದಿದ್ದರೆ ಆ ಮತ ಸಿಂಧುವಾಗುತ್ತದೆ. ಪ್ರಾಶಸ್ತ್ಯವನ್ನು ಸಂಖ್ಯೆಯಲ್ಲಿ ಮಾತ್ರ ಬರೆಯಬೇಕು. ಅಕ್ಷರದಲ್ಲಿ ಬರೆಯಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.