ಕೋತಿಗಳ ಅನುಮಾನಾಸ್ಪದ ಸಾವು..!
Team Udayavani, Dec 1, 2021, 12:21 PM IST
Representative Image used
ಬೆಂಗಳೂರು: ಇಲ್ಲಿನ ಬಸವೇಶ್ವರ ನಗರ ಅಪಾರ್ಟ್‌ಮೆಂಟ್‌ವೊಂದರ ಬಳಿ ಮತ್ತೆ ಎರಡು ಕೋತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಹಿಂದೆ ಜುಲೈ ಒಂದೇ ತಿಂಗಳಲ್ಲಿ ಹತ್ತು ಕೋತಿಗಳು ಮೃತಪಟ್ಟಿದ್ದವು. ಈಗ ಮತ್ತೆ ಎರಡು ಕೋತಿಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಇದು ಎಡೆಮಾಡಿಕೊಟ್ಟಿದೆ.
ಭಾನುವಾರ ಸಂಜೆ ಬಸವೇಶ್ವರನಗರದ ಅಪಾರ್ಟ್‌ಮೆಂಟ್‌ನ ಸಜ್ಜಾದ ಮೇಲೆ ಕೋತಿಯೊಂದು ಸತ್ತಿರುವುದು ಕಂಡುಬಂದಿದೆ. ಬಳಲಿದಂತೆ ಓಡಾಡುತ್ತಿದ್ದ ಮತ್ತೂಂದು ಕೋತಿ ಮಂಗಳವಾರ ಸಾವನ್ನಪ್ಪಿದೆ. ಸ್ಥಳೀಯರ ದೂರಿನ ಮೇರೆಗೆ ಪಾಲಿಕೆ ಅರಣ್ಯ ವಿಭಾಗದ ಸಿಬ್ಬಂದಿ ಎರಡೂ ಕೋತಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಹೆಬ್ಟಾಳದ ಪಶುವೈದ್ಯಕೀಯ ಕಾಲೇಜಿಗೆ ಕಳುಹಿಸಿ ದ್ದಾರೆ.
ಈ ಮಧ್ಯೆ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದ್ದು, ನಗರದಲ್ಲಿ ಕೋತಿ ಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೆಲವರು ವಿಷಹಾರ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಪ್ರಾಣಿಗಳಿಗೆ ಯಾರು ಮತ್ತು ಯಾಕೆ ವಿಷ ಹಾಕುತ್ತಿದ್ದಾರೆ ಎಂಬುದು ನಿಗೂಢವಾಗಿದೆ.
ಇದನ್ನೂ ಓದಿ;- ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು
ಯಾರೊಬ್ಬರೂ ದೂರು ಕೂಡ ದಾಖಲಿಸಿಲ್ಲ. ಯಾರಾದರೂ ದೂರು ನೀಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಡುಮಲ್ಲೇಶ್ವರ ವಲಯ ಅರಣ್ಯ ಅಧಿಕಾರಿ ತಿಳಿಸಿದರು.
ಹಳಸಿದ ಆಹಾರವೂ ವಿಷವೇ: ಕೋತಿಗಳು ಅಪಾರ್ಟ್‌ಮೆಂಟ್‌ಗಳಲ್ಲಿ ಆಹಾರ ಅರಸಿಕೊಂಡು ಹೋಗುತ್ತವೆ. ಆಗ ಎರಡು ಮೂರು ದಿನಗಳ ಹಿಂದಿನ ಆಹಾರ ಹಾಕಿದಲ್ಲಿ ಅಥವಾ ಆಹಾರವಿಟ್ಟು ಮೂರ್‍ನಾಲ್ಕು ದಿನಗಳ ನಂತರ ಕೋತಿಗಳು ಸೇವಿಸಿದಲ್ಲಿ ಅದು ವಿಷವಾಗಿ ಪರಿಣಮಿಸುತ್ತದೆ. ಇದರಿಂದಲೂ ಸಾವನ್ನಪ್ಪುವ ಸಾಧ್ಯತೆಯಿದ್ದು, ಈ ಬಗ್ಗೆ ಮರಣೋತ್ತರ ಪರೀಕ್ಷೆ ನಂತರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಕೋತಿಗಳಿದ್ದು, ಅವುಗಳನ್ನು ಒಂದೆಡೆ ಬಿಡಲು ಕೋತಿಗಳ ಉದ್ಯಾನ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿತ್ತು. ಆದರೆ, ಸರ್ಕಾರದಿಂದ ಇದಕ್ಕೆ ಹಸಿರುನಿಶಾನೆ ಸಿಗದ ಹಿನ್ನೆಲೆಯಲ್ಲಿ ಕೋತಿಗಳ ಉದ್ಯಾನ ನಿರ್ಮಾಣದ ಕಾರ್ಯ ನೆನಗುದಿಗೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.