ಟ್ವಿಟರ್ ಸಂಸ್ಥೆಯಿಂದ ಟಫ್ ರೂಲ್ಸ್ ಜಾರಿ : ವೈಯಕ್ತಿಕ ಫೋಟೋ, ವಿಡಿಯೋಕ್ಕೆ ಕಡಿವಾಣ
ಕಿರುಕುಳ ತಡೆ ನಿಯಮಗಳಿಗೆ ತಿದ್ದುಪಡಿ
Team Udayavani, Dec 1, 2021, 8:45 PM IST
ವಾಷಿಂಗ್ಟನ್ : ಟ್ವಿಟ್ಟರ್‌ನಲ್ಲಿ ಯಾರ ಯಾರಧ್ದೋ ಫೋಟೋಗಳನ್ನು ಹಾಕಿಕೊಂಡು, ಟ್ರೋಲ್ ಮಾಡುವವರಿಗೆ, ಟೀಕಿಸುವವರಿಗೆ ಬ್ರೇಕ್ ಹಾಕಲು ಸಂಸ್ಥೆ ನಿರ್ಧರಿಸಿದೆ. ಸಾರ್ವಜನಿಕವಾಗಿ ಪ್ರಸಿದ್ಧರಾದವರಲ್ಲದ ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವುದಕ್ಕೆ ಅವರ ಅನುಮತಿ ಕಡ್ಡಾಯ ಎಂದು ಟ್ವಿಟ್ಟರ್ ನಿಯಮ ಜಾರಿಗೊಳಿಸಿದೆ. ಭಾರತೀಯ ಮೂಲದ ಪರಾಗ್ ಅಗರ್ವಾಲ್ ಟ್ವಿಟ್ಟರ್‌ನ ಸಿಇಒ ಆದ ಬೆನ್ನಲ್ಲೇ ಈ ನಿಯಮ ಜಾರಿಯಾಗಿದೆ.
ಟ್ವಿಟ್ಟರ್‌ನ “ವೈಯಕ್ತಿಕ ಮಾಹಿತಿ ನಿಯಮ’ದ ಪ್ರಕಾರ, ಯಾವುದೇ ವ್ಯಕ್ತಿಯ ವಿಳಾಸ, ಫೋನ್ ನಂಬರ್‌ನಂತಹ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕವಾಗಿ ಹಂಚಿಕೊಳ್ಳುವಂತಿಲ್ಲ ಎಂಬ ನಿಯಮವಿತ್ತು. ಇದೀಗ ಆ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಇತರರ(ಪ್ರಸಿದ್ಧರಲ್ಲದವರ) ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವುದಕ್ಕೂ ಅವರ ಅನುಮತಿ ಪಡೆಯಬೇಕೆಂಬುದನ್ನು ನಿಯಮದಲ್ಲಿ ಸೇರಿಸಿಕೊಳ್ಳಲಾಗಿದೆ.
ಮಹಿಳೆಯರ ಮೇಲೆ ಪರಿಣಾಮ :
ಬೇರೊಬ್ಬ ವ್ಯಕ್ತಿಯ ಫೋಟೋ, ವಿಡಿಯೋ ಹಾಕುವುದರಿಂದ ಆ ವ್ಯಕ್ತಿಗೆ ಮಾನಸಿಕವಾಗಿ ಅಥವಾ ದೈಹಿಕವಾಗಿ ನೋವುಂಟಾಗಬಹುದು. ಖಾಸಗಿ ಫೋಟೋಗಳ ದುರ್ಬಳಕೆಯಾಗುತ್ತದೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳ ಖಾಸಗಿ ಫೋಟೋಗಳು ದುರ್ಬಳಕೆಯಾಗುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಿಯಮ ಹೇರಲಾಗಿದೆಯೆಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : ‘ಗೇಮ್ ಓವರ್’, ‘ಗೇಮ್ ಸ್ಟಾರ್ಟ್’ ಮದುವೆಯಲ್ಲಿ ಗಮನ ಸೆಳೆದ ಬರಹ !!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.