ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು
Team Udayavani, Dec 1, 2021, 9:00 PM IST
ತಿರುವನಂತಪುರಂ : ಪ್ರಸಿದ್ಧ ಶಬರಿಮಲೆ ದೇಗುಲದಲ್ಲಿ ಇನ್ನು ಮುಂದೆ ಭಕ್ತಾದಿಗಳು ಗೂಗಲ್ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು. ಅದಕ್ಕೆಂದು ದೇವಸ್ಥಾನದ ಮಂಡಳಿ ವಿಶೇಷ ಸೌಲಭ್ಯಗಳನ್ನು ಆರಂಭಿಸಿರುವುದಾಗಿ ಹೇಳಿಕೊಂಡಿದೆ.
ದೇವಸ್ಥಾನದ ಆವರಣದಲ್ಲಿ ಎಲೆಕ್ಟ್ರಾನಿಕ್ ಹುಂಡಿ ನಿರ್ಮಾಣ ಮಾಡಲಾಗಿದೆ. ಭಕ್ತಾದಿಗಳು ಆ ಹುಂಡಿಗೆ ಇ-ಕಾಣಿಕೆ ಅರ್ಪಿಸಬಹುದು. ಕೇರಳದ ಧನಲಕ್ಷ್ಮಿ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡು, ಇ-ಹುಂಡಿ ನಿರ್ಮಿಸಲಾಗಿದೆ.
ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಹೋಗುವಲ್ಲಿ, ಸನ್ನಿಧಾನದಲ್ಲಿ ಹೀಗೆ ಒಟ್ಟು 22 ಸ್ಥಳಗಳಲ್ಲಿ ಡಿಜಿಟಲ್ ಪಾವತಿಗಾಗಿ ಕ್ಯುಆರ್ ಕೋಡ್‌ಗಳನ್ನು ಬಿತ್ತರಿಸಲಾಗಿದೆ. ಭಕ್ತರು ಗೂಗಲ್ ಪೇನಲ್ಲಿ ಆ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನೇರವಾಗಿ ಖಾತೆಯಿಂದ ದೇವಸ್ಥಾನದ ಹುಂಡಿಗೆ ಕಳುಹಿಸಬಹುದು ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ : ಬಿಜೆಪಿಯನ್ನು ವಿರೋಧಿಸುವವರು ಒಂದಾಗಬೇಕು: ಮಮತಾ ಭೇಟಿ ಬಳಿಕ ಪವಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.