ಮಾಡದಡಿ ಗುಡ್ಡೆ ಗೆಳೆಯರಿಂದ ಕೃಷಿ ಕಾಯಕ
ಹಡಿಲು ಭೂಮಿಯಲ್ಲಿ ಬಂಗಾರದ ಬೆಳೆ
Team Udayavani, Dec 2, 2021, 4:45 AM IST
ಸುರತ್ಕಲ್: ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಕೊರತೆಯಿಂದ ನೂರಾರು ಎಕರೆ ಕೃಷಿ ಭೂಮಿ ಹಡಿಲು ಬಿದ್ದಿದೆ. ಆದರೆ ಈ ಯುವಜನರು 5 ವರ್ಷಗಳಿಂದ ಹವ್ಯಾಸಿ ಕೃಷಿ ಕಾಯಕ ನಡೆ ಸುತ್ತಾ ಹಡಿಲು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆೆ.
ಸುರತ್ಕಲ್‌ನ ಗಾಂಧಿನಗರ, ಕುಂಜತ್ತ ಬೈಲ್‌ನಲ್ಲಿ ನಗರ ಮಧ್ಯೆ ಇರುವ ಕೃಷಿ ಪ್ರದೇಶ. ಸುರತ್ಕಲ್ ಕೃಷಿ ಇಲಾಖೆ ಹೋಬಳಿ ವ್ಯಾಪ್ತಿಯ ಈ ಗದ್ದೆಯಲ್ಲಿ ಹಲವು ವರ್ಷಗಳಿಂದ 2-3 ಭತ್ತ ಬೆಳೆಯಲಾಗುತ್ತಿತ್ತು. ಕಾಲ ಕ್ರಮೇಣ ಕೂಲಿಯಾಳುಗಳ ಕೊರತೆ, ಲಾಭಕ್ಕಿಂತ ನಷ್ಟ ಹೆಚ್ಚೆಂಬ ಲೆಕ್ಕಾಚಾರಗಳು ಜನರನ್ನು ಕೃಷಿಯಿಂದ ಹಿಂದೆ ಉಳಿಯುವಂತೆ ಮಾಡಿತು.
ಈ ಮಧ್ಯೆ ಮಾಡದಡಿ ಗುಡ್ಡೆ ಫ್ರೆಂಡ್ಸ್ ಯುವಕರು 5 ವರ್ಷಗಳಿಂದ ಹವ್ಯಾಸಿ ಕೃಷಿ ಕಾಯಕದಲ್ಲಿ ತೊಡಗಿದರು. ಈ ವರ್ಷ ಈ ವರ್ಷ ಒಂದೇ ಪ್ರದೇಶದಲ್ಲಿ 68 ಕ್ವಿಂಟಾಲ್ ಭತ್ತ ಬೆಳೆದಿದ್ದಾರೆ.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭೂಮಿಯ ಮಾಲಕರು ಯುವಜನರಿಗೆ ಕೃಷಿ ಮಾಡಲು ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಿರುವುದು ವಿಶೇಷ ಸಂಗತಿ.
ವಿವಿಧ ವೃತ್ತಿಯ 10-15 ಯುವಕರ ತಂಡದ್ದು ಇದು ಹವ್ಯಾಸಿ ಕೃಷಿ ಕಾಯಕ. ಹದಿನೆಂಟು ಎಕರೆ ಪ್ರದೇಶದಲ್ಲಿ ಕಜ ಉಮಾ ಭತ್ತ ಬಿತ್ತಿ ಅಂದಾಜು 200 ಕ್ವಿಂಟಾಲ್ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲ ಬಾರಿ ನಾಟಿ ಮಾಡುವಾಗ ಹಡಿಲು ಭೂಮಿ ಹದ ಮಾಡಲು ಹೆಚ್ಚಿನ ವೆಚ್ಚ ಭರಿಸಿದ್ದರಿಂದ ಲಾಭ ಸಿಗಲಿಲ್ಲ. ಯಂತ್ರಗಳ ಮೂಲಕ ಹದಗೊಳಿಸಿ ಫಸಲು ಕೈಗೆ ಬಂದಾಗ ಸಿಕ್ಕ ಆನಂದ ವರ್ಣಿಸಲಾಗದು. ನಾವು ಬೆಳೆದ ಭತ್ತವದು ಎನ್ನುತ್ತಾರೆ ಅಖೀಲ್.
ಶಾಸಕರ ಸಹಕಾರ
ಈ ಸಾಹಸಕ್ಕೆ ಬೆಂಬಲವಾಗಿ ಮಾರ್ಗ ದರ್ಶನ ನೀಡಿದವರು ಕೃಷಿಕ ಮರಕಡದ ಜಗದೀಶ್. ಶಾಸಕ ಡಾ| ಭರತ್ ಶೆಟ್ಟಿ ವೈ ಅವರ ಸಹಕಾರವೂ ಇದೆ. ಈ ಬಾರಿಯೂ ಮಳೆಗಾಲದಲ್ಲಿ ಹಲವು ಎಕರೆ ಕೃಷಿ ಭೂಮಿ ಇಡ್ಯಾ, ಗಾಂಧಿನಗರ, ಮರಕಡದಲ್ಲಿ ಹಸಿರಾಗಿ ಕಂಗೊಳಿಸಿದೆ.
ಅಕ್ಕಿ ವಿತರಣೆ
ಕೊರೊನಾ ಲಾಕ್‌ಡೌನ್ ಸಂದರ್ಭ ಈ ತಂಡ ಬೆಳೆದ ಅಕ್ಕಿಯನ್ನು ಹಲವು ಬಡ ಕುಟುಂಬಗಳಿಗೆ ವಿತರಿಸಿ ಮಾನವೀಯತೆ ಮೆರೆದಿತ್ತು. ಬೈ ಹುಲ್ಲನ್ನು 2 ವರ್ಷಗಳಿಂದ ಪಜಿರು ಗೋ ಆಶ್ರಮಕ್ಕೆ ಉಚಿತವಾಗಿ ನೀಡಲಾಗುತ್ತಿದೆ. ಮನಸ್ಸಿಗೆ ಖುಷಿ ಕೊಡುವ ಕೆಲಸವಿದು. ಅದಕ್ಕೇ ನಿರಂತರವಾಗಿ ಮಾಡುತ್ತಿದ್ದೇವೆ ಎನ್ನುತ್ತಾರೆ ಮಾಡದಡಿ ಗುಡ್ಡೆ ಫ್ರೆಂಡ್ಸ್ ಸಂಘದವರ ಮಾತು. ಹೀಗೆ ಯುವ ತಂಡಗಳು ಕೈಗೊಳ್ಳುತ್ತಿರುವ ಹಡಿಲು ಭೂಮಿ ಸಾಗುವಳಿ ರಾಜ್ಯಕ್ಕೆ ಮಾದರಿಯಾಗುತ್ತಿದೆ. ಕೃಷಿ ಯಂತ್ರ, ಬೇಕಾದ ಸೌಲಭ್ಯ ಸಿಕ್ಕಲ್ಲಿ ಕರಾವಳಿಯಲ್ಲಿ ಮತ್ತೆ ಕೃಷಿ ನಳನಳಿಸಲಿದೆ. ಪ್ರತ್ಯೇಕ ಬ್ರಾಂಡ್‌ನ ಗುಣಮಟ್ಟದ ಅಕ್ಕಿ ಗ್ರಾಹಕರಿಗೆ ಲಭ್ಯವಾಗಲೂಬಹುದು. ಆ ಮೂಲಕ ಕೃಷಿ ಸಂಸ್ಕೃತಿಯ ಜೊತೆಗೆ ಗ್ರೀನ್ ಕಾಲರ್ ಉದ್ಯೋಗಕ್ಕೆ ಬರುವವರ ಸಂಖ್ಯೆ ಯೂ ಹೆಚ್ಚಳ ಆಗಬಹುದು ಎಂಬುದು ಹಲವರ ಅಭಿಪ್ರಾಯ.
ಒಂದು ಕಾಲಕ್ಕೆ ಕೃಷಿಯೇ ಜೀವನ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚಟುವಟಿಕೆಗಳಲ್ಲೇ ಆಸಕ್ತರಾದರು. 5 ವರ್ಷಗಳಲ್ಲಿ ಸ್ಥಳೀಯ ಯುವಕರು ಹಡಿಲು ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಗದ್ದೆಗಿಳಿದು ತಾವು ಬೆಳೆದ ಫಸಲನ್ನು ಬಳಸಿ, ಬೈ ಹುಲ್ಲನ್ನು ಗೋ ಶಾಲೆಗೆ ನೀಡಿ ಮಾದರಿಯಾಗಿದ್ದಾರೆ.
-ಜಗದೀಶ್, ಕೃಷಿಕ ಹಾಗೂ
ತಂಡದ ಮಾರ್ಗದರ್ಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.