ಬಂಗಾರದ ಗಟ್ಟಿ ದೋಚಿದವರ ಬಂಧನ
Team Udayavani, Dec 2, 2021, 11:26 AM IST
ಬೆಂಗಳೂರು: ಇತ್ತೀಚೆಗೆ ಎರಡೂವರೆ ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ದೋಚಿ ಪರಾರಿಯಾಗಿದ್ದ ಚಿನ್ನಾಭರಣ ಮಳಿಗೆಯ ಭದ್ರತಾ ಸಿಬ್ಬಂದಿ ಸೇರಿ ಏಳು ಮಂದಿ ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿ ನಿವಾಸಿ ಮೊಹಮ್ಮದ್ ಫರ್ಹಾನ್ ಅಲಿ ಯಾಸ್ ಶಹಬಾಜ್(25), ಆರ್.ನಗರ ನಿವಾಸಿ ಉಮೇಶ್(53), ನಾಗವಾರ ಮುಖ್ಯರಸ್ತೆ ನಿವಾಸಿ ಮೊಹಮ್ಮದ್ ಹುಸೇನ್(36), ವೆಂಕಟೇಶ್ವರಪುರ ನಿವಾಸಿ ಮೊಹಮ್ಮದ್ ಆರೀಫ್(36), ಅಂಜುಂ ಅಲಿ ಯಾಸ್ ಅಮ್ಜದ್(34), ಸೈಯದ್ ಅಹಮ್ಮದ್(24) ಹಾಗೂ ಸುಹೇಲ್ ಬೇಗ್ ಅಲಿಯಾಸ್ ಬಾಬು(24) ಬಂಧಿತರು.
ಆರೋಪಿಗಳಿಂದ 2.25 ಕೋಟಿ ರೂ. ಮೌಲ್ಯದ 4 ಕೆ.ಜಿ. 954 ಗ್ರಾಂ ಚಿನ್ನವನ್ನು ವಶಕ್ಕೆ ಪಡೆ ಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದರು. ನ.19ರಂದು ಚಿನ್ನದ ಗಟ್ಟಿ ಕೊಂಡೊಯ್ಯುತ್ತಿದ್ದ ಚಿನ್ನದ ವ್ಯಾಪಾರಿ ನಗರ್ತ್‌ಪೇಟೆ ನಿವಾಸಿ ಸಿದ್ದೇಶ್ವರ್ ಹರಿಭಾ ಶಿಂಧೆ(32) ಮೇಲೆ ಆರೋಪಿಗಳು ಹಲ್ಲೆ ನಡೆಸಿ 2.5 ಕೋಟಿ ರೂ. ಮೌಲ್ಯದ 5.5 ಕೆ.ಜಿ. ಚಿನ್ನದ ಗಟ್ಟಿಯನ್ನು ಕಳವು ಮಾಡಿದ್ದರು.
ಆರೋಪಿಗಳ ಪೈಕಿ ಶಹಬಾಜ್ ಮತ್ತ ಸುಹೇಲ್ ವಿರುದ್ಧ ಕೆ.ಜಿ. ಹಳ್ಳಿ ಮತ್ತು ತಿಪಟೂರು ಠಾಣೆಯಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಬಿಡುಗಡೆಯಾಗಿದ್ದರು. ಮತ್ತೂಬ್ಬ ಆರೋಪಿ ಉಮೇಶ್ ಇಂಡಿಯನ್ ಎಕ್ಸ್‌ಪ್ರಸ್ ಬಳಿರುವ ಅಟ್ಟಿಕಾ ಗೋಲ್ಡ್ ಅಂಗಡಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಉಮೇಶ್ ಇದೇ ರೀತಿಯ ಕೃತ್ಯದಲ್ಲಿ ವಿಫಲ ಯತ್ನ ನಡೆಸಿದ್ದ. ಇದೀಗ ಶಹಬಾಜ್ ಹಾಗೂ ಇತರರ ಜತೆ ಸೇರಿಕೊಂಡು ಕೃತ್ಯ ಎಸಗಿದ್ದಾನೆ ಎಂದರು.
ಭದ್ರತಾ ಸಿಬ್ಬಂದಿಯೇ ಸೂತ್ರದಾರ: ಅಟ್ಟಿಕಾ ಗೋಲ್ಡ್ ಮಳಿಗೆಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಉಮೇಶ್, ಚಿನ್ನಾಭರಣ ಮಳಿಗೆಗೆ ಬರುವ ವ್ಯಕ್ತಿಗಳ ಮೇಲೆ ನಿಗಾವಹಿಸುತ್ತಿದ್ದ, ಕೋಟ್ಯಂತರ ರೂ. ಮೌಲ್ಯದ ಚಿನ್ನದ ಗಟ್ಟಿ ಅಥವಾ ಚಿನ್ನಾಭರಣ ಖರೀದಿಸಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ.ಅವರ ವಾಹನ ನಂಬರ್ ಹಾಗೂ ಮಳಿಗೆಯ ಒಳಭಾಗದಲ್ಲಿ ನೋಂದಣಿ ಪುಸ್ತ ಕದಲ್ಲಿದ್ದ ಗ್ರಾಹಕನ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದ.
ಈ ಮಾಹಿತಿಯನ್ನು ತನ್ನ ಸಹಚರರಾದ ಇತರೆ ಆರೋಪಿಗಳ ಜತೆ ಹಂಚಿಕೊಳ್ಳುತ್ತಿದ್ದ. ಶಹನಾಬ್ ಮತ್ತು ಸುಹೇಲ್ ಇತರೆ ಆರೋಪಿಗಳ ಜತೆ ಸೇರಿಕೊಂಡು ದರೋಡೆ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಇದೇ ರೀತಿಯ ದರೋಡೆಗೆ ವಿಫಲ ಯತ್ನ ನಡೆಸಿದ್ದರು. ನ.19ರಂದು ಚಿನ್ನದ ಗಟ್ಟಿ ಕೊಂಡೊಯ್ಯುತ್ತಿದ್ದ ಚಿನ್ನದ ವ್ಯಾಪಾರಿ ನಗರ್ತ್‌ಪೇಟೆ ನಿವಾಸಿ ಸಿದ್ದೇಶ್ವರ್ ಹರಿಭಾ ಶಿಂಧೆ(32) ಮತ್ತು ಸ್ನೇಹಿತ ಸೂರಜ್ ಶ್ರೀಕಾಂತ್ ಜಾಧವ್ ಜತೆ ಅಟ್ಟಿಕಾ ಗೋಲ್ಡ್‌ನಲ್ಲಿ 2.5 ಕೋಟಿ ರೂ. ಮೌಲ್ಯದ 5.5 ಕೆ.ಜಿ. ಚಿನ್ನದ ಗಟ್ಟಿ ಖರೀ ದಿಸಿದ್ದರು.
ಈ ಮಾಹಿತಿಯನ್ನು ಉಮೇಶ್, ಇತರೆ ಆರೋಪಿಗಳಿಗೆ ನೀಡಿದ್ದಾನೆ. ಹೀಗಾಗಿ 6 ಮಂದಿ 2 ಕಿ.ಮೀ. ದೂರ ಅವರನ್ನು ಹಿಂಬಾಲಿಸಿ, ಕಬ್ಬನ್ ಪೇಟೆ ಮುಖ್ಯ ರಸ್ತೆ 22ನೇ ಕ್ರಾಸ್‌ನಲ್ಲಿ ಹಿಂದಿನಿಂದ ಬಂದು ಮಾರಕಾಸ್ತ್ರಗಳನ್ನು ತೋರಿಸಿ, ದರೋಡೆ ಮಾಡಿದ್ದರು. ಬಳಿಕ ಏಳು ಮಂದಿ ಹಂಚಿಕೊಂಡಿದ್ದರು ಎಂದು ಪೊಲೀಸರು ಹೇಳಿದರು. ಪೊಲೀಸರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಶ್ಲಾ ಸಿ, ತನಿಖಾ ತಂಡಕ್ಕೆ 70 ಸಾವಿರ ಬಹುಮಾನ ಘೋಷಿಸಿ¨ªಾರೆ.
ಫೋನ್ ಸಂಭಾಷಣೆ ಮೂಲಕ ಬಲೆಗೆ
ಇನ್‌ಸ್ಪೆಕ್ಟರ್ ಸಿ.ವಿ.ದೀಪಕ್ ಮತ್ತು ಸಬ್ ಇನ್‌ಸ್ಪೆಕ್ಟರ್ ಎನ್.ಸಿ.ಮಲ್ಲಿಕಾರ್ಜುನ್, ಗೋಪಾಲಕೃಷ್ಣ ನೇತೃತ್ವದ ತಂಡ ಪ್ರಕರಣ ದಾಖಲಿಸಿಕೊಂಡ ವಿಚಾರಣೆ ನಡೆಸಿದಾಗ ಭದ್ರತಾ ಸಿಬ್ಬಂದಿ ಉಮೇಶ್ ಗೊಂದಲದ ಹೇಳಿಕೆ ನೀಡಿದ್ದ. ಅಲ್ಲದೆ, 2ನೇ ಬಾರಿ ಮಳಿಗೆಯ ಸಿಬ್ಬಂದಿ ವಿಚಾರಣೆಗೆ ಹೋದಾಗ, ಮೊಬೈಲ್‌ನಲ್ಲಿ ಉಮೇಶ್, ಆತನ ಸಹಚರರಿಗೆ ಪೊಲೀಸ್ ಬಂದಿದ್ದಾರೆ ಎಂದು ಹೇಳುತ್ತಿದ್ದ.
ಈ ವಿಷಯ ಕೇಳಿಸಿಕೊಂಡ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಹೇಳಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಈತನ ಸಿಡಿಆರ್ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.