ಕನೇರಿಯಲ್ಲಿ ಗರ್ಭಸಂಸ್ಕಾರ ಕೇಂದ್ರ ಲೋಕಾರ್ಪಣೆ : ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ
ಗುಜರಾತ್ ಹೊರತುಪಡಿಸಿದರೆ ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ ಆರಂಭ
Team Udayavani, Dec 2, 2021, 12:59 PM IST
ಹುಬ್ಬಳ್ಳಿ: ಜನಿಸುವ ಮಗುವಿಗೆ ಗರ್ಭದಲ್ಲೇ ಉತ್ತಮ ಸಂಸ್ಕಾರ ನೀಡುವ ಮೂಲಕ, ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ಸೃಷ್ಟಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿ
ಮಠದ ಗೋಶಾಲೆ ಆವರಣದಲ್ಲಿ ನಿರ್ಮಿಸಿರುವ ಗರ್ಭಸಂಸ್ಕಾರ ಕೇಂದ್ರಕ್ಕೆ ಕನೇರಿಯ ಶ್ರೀ ಕಾಡಸಿದ್ದೇಶ್ವರಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ರಾಷ್ಟ್ರೀಯ ಸ್ವಯಂ
ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಲೋಕಾರ್ಪಣೆಗೊಳಿಸಿದರು.
ಕೇಂದ್ರದ ಪಕ್ಕದಲ್ಲೇ ಕೆರೆ, ಎದುರಿಗೆ ಜೀವಂತ ಗೋಮಾತೆಯರ ಮಂದಿರ, ಹತ್ತಿರದಲ್ಲೇ ಸಾವಿರಕ್ಕೂ ಅಧಿಕ ಗೋಮಾತೆಯರ ತಾಣ ಸೇರಿದಂತೆ ಸುಂದರ ನಿಸರ್ಗ ಮಡಿಲಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಕೇಂದ್ರದಲ್ಲಿ ದಂಪತಿಗಳು ಉಳಿದುಕೊಳ್ಳಲು ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಯಜ್ಞ ಮಂಟಪ, ಯೋಗ ತರಬೇತಿ ಸಭಾಭವನ, ಧ್ಯಾನಕ್ಕೆ ವ್ಯವಸ್ಥೆ ಜತೆಗೆ ವಿಷಮುಕ್ತ, ಸಾತ್ವಿಕ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಜತೆಗೆ ಪ್ರವಚನ, ಉಪನ್ಯಾಸ, ಸಂವಾದ, ಕೀರ್ತನೆ, ಭಜನೆಯಂತಹ ಕಾರ್ಯ ಕೈಗೊಳ್ಳಲಾಗುತ್ತದೆ. ಆಧ್ಯಾತ್ಮ ಬಲ
ಹೆಚ್ಚಿಸುವ, ಸಕಾರಾತ್ಮಕ ಚಿಂತನೆಗಳನ್ನು ಮೂಡಿಸುವ, ಮಹಾನ್ ಸಾಧಕರ ಚರಿತ್ರೆ, ಜೀವನ ಸಾಧನೆ ಹೇಳುವ ವಿವಿಧ ಗ್ರಂಥ-ಕೃತಿಗಳ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ.
ಗರ್ಭಾವಸ್ಥೆಯಿಂದ ಹಿಡಿದು, ಸೀಮಂತ ಕಾರ್ಯದವರೆಗೂ ವಿವಿಧ ರೀತಿಯ ತರಬೇತಿ, ಯೋಗ, ಧ್ಯಾನ, ಗೋ ಪೂಜೆ, ಗೋ ಮಾತೆ ಸೇವೆ ಇನ್ನಿತರೆ ಕಾರ್ಯಗಳನ್ನು ದಂಪತಿಗಳಿಂದ
ಮಾಡಿಸಲಾಗುತ್ತದೆ. ತಾಯಂದಿರ ಆರೋಗ್ಯ ಕಾಳಜಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ನೇಮಿಸಲಾಗಿದೆ. ಗುಜರಾತ್ ಹೊರತುಪಡಿಸಿದರೆ ದೇಶದ ಎರಡನೇ ಗರ್ಭ ಸಂಸ್ಕಾರ ಕೇಂದ್ರ ಇದಾಗಿದೆ.
ಇದನ್ನೂ ಓದಿ : ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ
ಕೇಂದ್ರ ಉದ್ಘಾಟಿಸಿದ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಭವಿಷ್ಯದ ಭವ್ಯ ಭಾರತ ನಿರ್ಮಾಣಕ್ಕೆ ಪೂರಕವಾಗಿ, ರಾಷ್ಟ್ರಕ್ಕೆ ಅತ್ಯುತ್ತಮ ಮಾನವಶಕ್ತಿ
ನೀಡುವ ಉದ್ದೇಶದೊಂದಿಗೆ ಶ್ರೀಮಠ ಕೈಗೊಂಡಿರುವ ಕಾರ್ಯ ಮಾದರಿ ಹಾಗೂ ಪ್ರೇರಣಾದಾಯಕವಾಗಿದೆ ಎಂದು ಶ್ಲಾಘಿಸಿದರು. ಭಯ್ನಾಜಿ ಜೋಶಿ, ಮುಕುಂದ, ಕೃಷ್ಣ ಗೋಪಾಲ,
ಬಾಗಯ್ನಾ, ಸುರೇಶ ಸೋಲಿ, ಡಾ|ಚಂದ್ರಶೇಖರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.