ಕುಣಿಗಲ್: ಕಾಟಾಚಾರಕ್ಕೆ ಫುಟ್ ಪಾತ್ ತೆರವು ಕಾರ್ಯಾಚರಣೆ : ನಾಗರಿಕರ ಆಕ್ರೋಶ
Team Udayavani, Dec 3, 2021, 7:16 PM IST
ಕುಣಿಗಲ್ : ಫುಟ್ ಪಾತ್ ಅಂಗಡಿಗಳು ತೆರವುಗೊಳಿಸಿದ ಮರು ಕ್ಷಣವೇ ವ್ಯಾಪಾರಿಗಳು ಯಥಾಸ್ಥಿತಿ ವ್ಯಾಪಾರ ವಹಿವಾಟು ನಡೆಸಿದ್ದು ಅಧಿಕಾರಿಗಳ ಕಾಟಾಚಾರದ ಕಾರ್ಯಾಚರಣೆಗೆ ಕವಡೆ ಕಾಸಿನ ಕಿಮ್ಮತು ಇಲ್ಲದಂತಾದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ಸಾರ್ವಜನಿಕರ ಹಾಗೂ ವಾಹನ ಸಂಚರಿಸುವ ರಸ್ತೆಗಳ ಮೇಲೆ ಫುಟ್ ಪಾತ್ ವ್ಯಾಪಾರಿಗಳು ಹೂ ಹಣ್ಣು, ತರಕಾರಿ, ಹೋಟೆಲ್ ಸೇರಿದಂತೆ ಮೊದಲಾದ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು ಇದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳು ತಿರುಗಾಡಲು ತೊಂದರೆ ಉಂಟಾಗಿದೆ, ಈ ಸಂಬಂಧ ಪುರಸಭಾ ಸಮಾಸ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಬಂದು ರಸ್ತೆ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುವ ವ್ಯಾಪರಸ್ಥರನ್ನು ಕೂಡಲೇ ತೆರವುಗೊಳಿಸುವಂತೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರಾದರೂ , ಸಭೆಯಲ್ಲಿ ತಿರ್ಮಾನವಾಗಿ ತಿಂಗಳ ನಂತರ ತೆರವು ಕಾರ್ಯಚರಣೆಯನ್ನು ಕೈಗೊಂಡ ಅಧಿಕಾರಿಗಳು, ಕಾರ್ಯಚರಣೆ ಸಮರ್ಪಕವಾಗಿ ಮಾಡದೇ ಕಾಟಾಚಾರಕ್ಕೆ ಮಾಡಿ ಕೈ ತೊಳೆದುಕೊಂಡಿರುವುದಕ್ಕೆ ನಾಗರೀಕರು ಅಸಮಾಧಾನ ಹೊರ ಹಾಕಿದ್ದಾರೆ.
ಪುಟ್ ಪಾತ್ ಯಥಾ ಸ್ಥಿತಿ
ಶುಕ್ರವಾರ ಬೆಳ್ಳಂಬೆಳಗ್ಗೆ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್, ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಪೊಲೀಸರ ಸಹಕಾರದೊಂದಿಗೆ ಹಕೀಂ ಷಾವಲಿ ಕಾಂಪ್ಲೆಕ್ಸ್ , ಹಳೇಯ ರಾಷ್ಟ್ರೀಯ ಹೆದ್ದಾರಿ ೪೮ ಬಿ.ಎಂ ರಸ್ತೆ, ರಾಜ್ಯ ಹೆದ್ದಾರಿ ೩೩ ಟಿ.ಎಂ ರಸ್ತೆ, ಸಂತೇ ಮೈದಾನಕ್ಕೆ ಹೊಗುವ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಚರಂಡಿ ಮೇಲೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಪುಟ್‌ಪಾತ್ ವ್ಯಾಪಾರಿಗಳ ತೆರವು ಕಾರ್ಯಚರಣೆ ಪ್ರಾರಂಭಿಸಿದರು, ರಸ್ತೆ ಬದಿಯ ಮೇಲೆ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸದೇ, ಅಧಿಕಾರಿಗಳು ರಸ್ತೆಯನ್ನು ಬಿಟ್ಟು ಸ್ವಲ್ಪ ದೂರದ ಹಿಂದಕ್ಕೆ ಇಟ್ಟುಕೊಂಡು ವ್ಯಾಪಾರ ಮಾಡುವಂತೆ ವ್ಯಾಪಾರಿಗಳಿಗೆ ಸೂಚಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಅಧಿಕಾರಿಗಳು ತೆರಳಿದರು, ಅಧಿಕಾರಿಗಳು ತೆರವು ಕಾರ್ಯಚರಣೆ ನಡೆಸಿ ತೆರಳುತ್ತಿದ್ದಂತೆ ಮರು ಕ್ಷಣವೇ ವ್ಯಾಪಾರಿಗಳು ಯಥಾ ಸ್ಥಿತಿ ಪುಟ್‌ಪಾತ್ ಹಾಗೂ ಚರಂಡಿ ಮೇಲೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಪ್ರಾರಂಭ ಮಾಡಿದ್ದಾರೆ.
ಆಕ್ರೋಶ
ನಿರಂತರ ಮಳೆಯಿಂದ ಪಟ್ಟಣದಾಧ್ಯಂತ ರಸ್ತೆಗಳು ಆಳುದ್ದ ಗುಂಡಿ ಬಿದ್ದು ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳು ಹಾಗೂ ನಾಗರಿಕರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ರಸ್ತೆ ಬಿಟ್ಟು ಫುಟ್ ಪಾತ್ ಮೇಲೆ ಸಾರ್ವಜನಿಕರು ಹೋಗುವುದಕ್ಕೂ ಆಗುತ್ತಿಲ್ಲ, ಪುಟ್‌ಪಾತ್ ಹಾಗೂ ಇದರ ರಸ್ತೆ ಪಕ್ಕ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ, ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಚರಣೆ ನಡೆಸಿದ್ದಾರೆ ಎಂದು ವಾಹನ ಸವಾರರು ಹಾಗೂ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪಟ್ಟಣದಲ್ಲಿ ಕಂಡು ಬಂದಿತ್ತು, ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿಯ ಅಧಿಕಾರಿಗಳ ವಿರುದ್ದ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.