ವಿದ್ಯುತ್ ಚಾಲಿತ ಬೌನ್ಸ್ ಇನ್ಫಿನಿಟಿ ಇ-1 ಮಾರುಕಟ್ಟೆಗೆ ಬಿಡುಗಡೆ
4-5 ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಲೀಥಿಯಂ ಅಯಾನ್ ಬ್ಯಾಟರಿಯನ್ನು ಇದು ಹೊಂದಿದೆ.
Team Udayavani, Dec 4, 2021, 2:57 PM IST
ನವದೆಹಲಿ: ವಿದ್ಯುತ್ ಚಾಲಿತ ಇ-ಸ್ಕೂಟರ್‌ಗಳ ತಯಾರಿಕಾ ಸಂಸ್ಥೆಯಾದ ಬೌನ್ಸ್, ತನ್ನ ಹೊಸ ಮಾಡೆಲ್ “ಬೌನ್ಸ್ ಇನ್ಫಿನಿಟಿ ಇ’ 1 ವಾಹನಗಳನ್ನು ಮಾರುಕಟ್ಟೆಗೆ ತಂದಿದೆ. ಹೈಡ್ರಾಲಿಕ್ ಟೆಲಿಸ್ಕೋಪಿಕ್ ಸಸ್ಪೆನ್ಶನ್, ಹಿಂಬದಿಯಲ್ಲಿ ಟ್ವಿನ್ ಶಾಕ್ ಅಬ್ಸ ವರ್ಸ್, ಎಲ್‌ಇಡಿ ಪ್ರೊಜೆಕ್ಟರ್ ಲ್ಯಾಂಪ್, ಡಿಕ್ಕಿಯಲ್ಲಿ ಹೇರಳವಾದ 12 ಲೀಟರಿ ನಷ್ಟು ಜಾಗ ಇರುವುದು ಇದರ ವಿಶೇಷತೆ.
4-5 ಗಂಟೆಯಲ್ಲಿ ಫುಲ್ ಚಾರ್ಜ್ ಆಗುವ ಲೀಥಿಯಂ ಅಯಾನ್ ಬ್ಯಾಟರಿಯನ್ನು ಇದು ಹೊಂದಿದೆ. ಒಂದು ಪೂರ್ತಿ ಚಾರ್ಜ್‌ಗೆ ಇದು 85 ಕಿ.ಮೀ. ಸಾಗಬಲ್ಲದು. ಇದರ ಎಕ್ಸ್ ಷೋರೂಂ ಬೆಲೆ 68,999 ರೂ. ಆಗಿದ್ದು, ಈಗಾಗಲೇ ಮುಂಗಡ ಬುಕಿಂಗ್ ಆರಂಭವಾಗಿದೆ.
ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ
ದೇಶದ ಸೇವಾ ಕ್ಷೇತ್ರ ಕಳೆದ ತಿಂಗಳು ಶರವೇಗದ ಅಭಿವೃದ್ಧಿಯನ್ನು ದಾಖಲಿಸಿದೆ. ಹತ್ತು ವರ್ಷಗಳಿಗೆ ಹೋಲಿಕೆ ಮಾಡಿ ದರೆ ಸೇವಾ ವಲಯವು ಎರಡನೇ ಬಾರಿಗೆ ಕ್ಷಿಪ್ರ ಬೆಳವಣಿಗೆ ದಾಖಲಿಸಿದಂತಾಗಿದೆ ಎಂದು ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ)ನ ವರದಿ ಹೇಳಿದೆ.
ಕೋವಿಡ್ ಛಾಯೆಯಿಂದ ಸೇವಾ ಕ್ಷೇತ್ರ, ವಿವಿಧ ವಹಿವಾಟು, ಸೇವೆಗಳಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದ ರಿಂದ ಪಿಎಂಐ ಸೂಚ್ಯಂಕ 58.1ಕ್ಕೆ ಏರಿದೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್ ನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಅಕ್ಟೋಬರ್ ನಲ್ಲಿ ಸೂಚ್ಯಂಕ 58.4 ಆಗಿತ್ತು.
2011ರ ಜುಲೈಗೆ ಹೋಲಿಕೆ ಮಾಡಿದರೆ, ಈ ಸಾಂಖೀಕ ಮಾಹಿತಿ 2ನೇ ಅತ್ಯಂತ ದಾಖಲೆಯ ಏರಿಕೆ. ನವೆಂಬರ್‌ನ ಮಾಹಿತಿ ಗಮನಿ ಸಿದಾಗ, ಸತತ ನಾಲ್ಕನೇ ಬಾರಿಗೆ ಸೂಚ್ಯಂಕದಲ್ಲಿ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.